ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಿದ ತಿಂಗಳುಗಳ ನಂತರ ಮತ್ತೆ ಅವರನ್ನು ಬಿಎಸ್‌ಪಿ ಮುಖ್ಯ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ. ಇಂದು (ಮೇ 18) ದೆಹಲಿಯ ಲೋಧಿ ರಸ್ತೆಯಲ್ಲಿರುವ ಬಿಎಸ್‌ಪಿ ಕೇಂದ್ರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಮುಖ ರಾಷ್ಟ್ರೀಯ ಸಮಸ್ಯೆಗಳು ಮತ್ತು ಸಾಂಸ್ಥಿಕ ವಿಷಯಗಳ ಬಗ್ಗೆ ಚರ್ಚಿಸಲು ಹಿರಿಯ ನಾಯಕರು, ರಾಜ್ಯ ಪ್ರತಿನಿಧಿಗಳು ಮತ್ತು ಸಂಯೋಜಕರು ಸೇರಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಆಕಾಶ್ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಎಂದು ನಿರ್ಧರಿಸಲಾಗಿದೆ.
ಇದನ್ನು ಓದಿದ್ದೀರಾ? ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಆಕಾಶ್ ಆನಂದ್ ವಜಾ
“ಈ ಬಾರಿ ಆಕಾಶ್ ಆನಂದ್ ಪಕ್ಷದ ಮತ್ತು ಪಕ್ಷದ ಸೈದ್ಧಾಂತಿಕ ಅಡಿಪಾಯವನ್ನು ಬಲಪಡಿಸುವ ಚಳುವಳಿಯ ಹಿತದೃಷ್ಟಿಯಿಂದ ಎಚ್ಚರಿಕೆಯಿಂದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಆಶಿಸಲಾಗಿದೆ” ಎಂದು ಬಿಎಸ್‌ಪಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಾರಿ ಮಾಯಾವತಿ ಅವರು ಮೂವರು ರಾಷ್ಟ್ರೀಯ ಸಂಯೋಜಕರನ್ನು ನೇಮಿಸಿದ್ದಾರೆ. ರಾಮ್ ಜಿ ಗೌತಮ್, ರಣಧೀರ್ ಬೆನಿವಾಲ್ ಮತ್ತು ರಾಜಾ ರಾಮ್ ವರದಿಯಾಗಿದೆ.
ಇನ್ನು ಈ ಹಿಂದೆ ಮಾರ್ಚ್ 3ರಂದು ಮಾಯಾವತಿ, ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯಿಂದ ಹೊರಹಾಕಿದ್ದರು. ಅದಾದ ಕೇವಲ ನಲವತ್ತು ದಿನಗಳಲ್ಲಿ, ಏಪ್ರಿಲ್ 13ರಂದು ಆಕಾಶ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬಳಿಕ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದರು.
ಆಕಾಶ್ ಅವರನ್ನು ಯಾರಿಂದಲೂ ಪ್ರಭಾವಿತರಾಗದಂತೆ ಎಚ್ಚರಿಸಿ ಪಕ್ಷಕ್ಕೆ ಸೇರಿಸಿದ್ದರು. ಆಕಾಶ್ ಆನಂದ್ ತನ್ನ ಮಾವನ ಮಾತುಗಳಿಗೆ ಮಣಿಯುತ್ತಿಲ್ಲ ಎಂದು ಭರವಸೆ ನೀಡಿದ ಬಳಿಕ ಮತ್ತೊಂದು ಅವಕಾಶ ನೀಡಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದರು.
18-05-2025-BSP PRESSNOTE-ALL INDIA MEETING pic.twitter.com/z0IF3crxN3
— Mayawati (@Mayawati) May 18, 2025
ಹಾಗೆಯೇ ಅದಾದ ಬಳಿಕ ಮಾಯಾವತಿ 2023ರಲ್ಲಿ ಆಕಾಶ್ ಆನಂದ್ ಅವರನ್ನು ತನ್ನ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಇದಾದ ಒಂದು ವರ್ಷದ ನಂತರ ಮಾಯಾವತಿ, ಆಕಾಶ್ ಅವರನ್ನು ಪಕ್ಷದಿಂದ ಹೊರಹಾಕಿದರು. ಪ್ರಬುದ್ಧತೆ ಇಲ್ಲ ಎಂದು ಕಾರಣ ನೀಡಿದ್ದರು.
“ನಾನು ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕರು ಮತ್ತು ಅವರ ಉತ್ತರಾಧಿಕಾರಿ ಎಂದು ಘೋಷಿಸಿದ್ದೆ. ಆದರೆ ಪಕ್ಷ ಮತ್ತು ಚಳವಳಿಯ ಹಿತದೃಷ್ಟಿಯಿಂದ ಅವರು ಪೂರ್ಣ ಪ್ರಬುದ್ಧತೆಯನ್ನು ಪಡೆಯುವವರೆಗೆ ಈ ಎರಡೂ ಪ್ರಮುಖ ಜವಾಬ್ದಾರಿಗಳಿಂದ ಅವರನ್ನು ವಜಾಗೊಳಿಸಲಾಗುತ್ತಿದೆ” ಎಂದು ಹೇಳಿದ್ದರು. ಒಂದು ತಿಂಗಳ ನಂತರ ಆಂತರಿಕ ಹೊಂದಾಣಿಕೆ ಬಳಿಕ ಆಕಾಶ್ ಅವರನ್ನು ಮತ್ತೆ ಸೇರಿಸಲಾಗಿದೆ.
