ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ ಗ್ರಾಮದಲ್ಲಿ ಮಹಿಳೆಯ ಭೀಕರ ಕೊಲೆಗೈದು ಇದು ಕೊಲೆಯಲ್ಲ, ಬೈಕ್ ಅಪಘಾತವೆಂದು ಬಿಂಬಿಸಿಸಲು ಯತ್ನಿಸಿದ ಹಂತಕರನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ಅಥಣಿ ತಾಲೂಕಿನ ಮಲಬಾದ ಗ್ರಾಮದ ರೇಣುಕಾ ಸಂತೋಷ ಹೋನಕಾಂಡೆ (27) ಕೊಲೆಯಾದ ಮಹಿಳೆ. ನಿನ್ನೆ ತಡ ರಾತ್ರಿ 9:00 ಗಂಟೆ ಸುಮಾರಿಗೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಅಥಣಿಯಿಂದ ಬೈಕ್ ಮೇಲೆ ಹೊರಟಾಗ ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಮಹಿಳೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಹೊರಟ ಹಂತಕರನ್ನ ಬಂಧಿಸಿದ ಪೊಲೀಸರು ತನಿಖೆ ಶುರು ಮಾಡಿ ಇದು ಅಪಘಾತವಲ್ಲ ಕೊಲೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.