ಉಡುಪಿ ನಗರದ ಉದ್ಯಾವರ ಪರಿಸರದಲ್ಲಿ ಮಹಾರಾಷ್ಟ್ರ ಮೂಲದ ಮಾನಸಿಕ ವ್ಯಕ್ತಿ ಓರ್ವನನ್ನು ಕಳ್ಳನೆಂದು ಭಾವಿಸಿ ಹಲ್ಲೆ ನಡೆಸಿದ್ದು ಸಕಾಲದಲ್ಲಿ ವಿಶು ಶೆಟ್ಟಿ ಅಂಬಲಪಾಡಿ ಆ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿ ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ ಘಟನೆ ಮೇ 18ರ ತಡರಾತ್ರಿ ನಡೆದಿದೆ.
ವ್ಯಕ್ತಿ ಯೂಸುಫ್ ಸುನ್ನಿ (40) ಮುಂಬೈಯ ಗೋರೆಗಾವ್ ಫಿಲ್ಮ್ ಸಿಟಿ ನಿವಾಸಿ ಹಾಗೂ ಮಡದಿ ಮಕ್ಕಳಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ವ್ಯಕ್ತಿ ಸಾರ್ವಜನಿಕರ ಮನೆಗಳಿಗೆ ರಾತ್ರಿ ಹೊತ್ತು ಹೋದ ಸಮಯ ಕಳ್ಳನೆಂದು ಭಾವಿಸಿ ಹಲ್ಲೆಗೊಳಗಾಗಿದ್ದಾನೆ. ದೇಹದಲ್ಲಿ ಏಟಿನ ಬಾಸುಂಡೆಗಳಿವೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
ಉದ್ಯಾವರದ ಜಯಶ್ರೀ ವ್ಯಕ್ತಿಗೆ ರಾತ್ರಿ ಊಟ ನೀಡಿ ಉಪಚರಿಸಿದ್ದು ವಿಶು ಶೆಟ್ಟಿಯವರ ನೆರವಿನಿಂದ ಸಂಭಾವ್ಯ ಅನಾಹುತ ತಪ್ಪಿದೆ ಎಂದು ತಿಳಿಸಿದ್ದಾರೆ. ಸಂಬಂಧಿಕರು ಅಥವಾ ಸಂಬಂಧಪಟ್ಟವರು ಸ್ವರ್ಗ ಆಶ್ರಮ ಅಥವಾ ಕಾಪು ಪೊಲೀಸ್ ಠಾಣೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
