ಶಿವಮೊಗ್ಗ ನಗರದ ನೆಹರೂ ಮೈದಾನದಲ್ಲಿ ಪಂದ್ಯಗಳು ನಡೆಯುತ್ತಿರುವ ವೇಳೆ ಗಲಾಟೆಯಾಗಿದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ರಾಜ್ಯ ಸರ್ಕಾರಿ ಮಹಿಳಾ ನೌಕರರ ಮೇಲೆ ದರ್ಪ ತೋರಿದ್ದು, ʼಇದು ಶಿವಮೊಗ್ಗ, ಗಾಂಚಾಲಿ ಬೇಡʼವೆಂದು ಗದರಿರುವುದಾಗಿ ವಿಜಯನಗರ ಜಿಲ್ಲಾ ಸರ್ಕಾರಿ ಮಹಿಳಾ ನೌಕರರು ಹಾಗೂ ರಾಜ್ಯ ಉಪಾಧ್ಯಕ್ಷೆ ಪದ್ಮಲತಾ ಅವರು ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಗಳು ಭಾನುವಾರದಿಂದ ಪ್ರಾರಂಭವಾಗಿದ್ದು, ಇಂದು ಬೆಳಿಗ್ಗೆ ಪಂದ್ಯಗಳು ನಡೆಯುವ ವೇಳೆ ನಡೆದ ಗಲಾಟೆ ಸಂಬಂಧ ಮಹಿಳಾ ನೌಕರರ ಮೇಲೆ ದರ್ಪ ತೋರಿಸಿದ್ದಾರೆಂದು ದೂರಿದ್ದಾರೆ.


“ವಿಜಯನಗರ ಜಿಲ್ಲೆಯಲ್ಲಿ ಬೇರೆ ಬೇರೆ ಕಾರಣಕ್ಕೆ ಗುಂಪು ಆಟಗಳನ್ನು ಆಡಿಸಿಲ್ಲದ ಕಾರಣ ಅವರ ಆಣತಿಯಂತೆ ತಮಗೆ ಬೇಕಾದವರ ಹೆಸರುಗಳನ್ನು ಕಳುಹಿಸಿ ರಾಜ್ಯಮಟ್ಟದ ಕ್ರೀಡೆಗಳಲ್ಲಿ ವಿಜಯನಗರ ಜಿಲ್ಲೆಯ ಕೆಲವು ನೌಕರರನ್ನು ಭಾಗವಹಿಸಲು ಖೋಟಾ ಸರ್ಟಿಫಿಕೇಟ್ ಸೃಷ್ಟಿಸಿ ವಿಜಯನಗರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರು ಹಾಗೂ ಯುವಜನ ಸೇವ ಕ್ರೀಡಾ ಇಲಾಖೆ ಅಧಿಕಾರಿಗಳು ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಕೆಲವರಿಗೆ ಮಾತ್ರ ಆಟದಲ್ಲಿ ಭಾಗವಹಿಸಲು ಅವಕಾಶ ನೀಡಿರುತ್ತಾರೆಂಬ ಆರೋಪ ಕೇಳಿಬಂದಿದೆ” ಎಂದರು.
“ಕೆಲವು ದಿನಗಳಲ್ಲಿ ಕ್ರೀಡೆಗಳನ್ನು ನಡೆಸುವ ಬಗ್ಗೆ ವಿಜಯನಗರ ಜಿಲ್ಲಾ ಕ್ರೀಡಾ ಆಯೋಜಕರು ತಿಳಿಸಿದರು. ಕ್ರೀಡೆಗಳನ್ನು ಆಯೋಜನೆ ಮಾಡುವಂತೆ ಯುವಜನ ಸೇವಾ ಕ್ರೀಡಾ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬೆಂಗಳೂರಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಿಗೆ ಮನವಿಯನ್ನೂ ಸಲ್ಲಿಸಿದೆವು” ಎಂದು ಹೇಳಿದರು.
“ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ತಮಗೆ ಬೇಕಾದ ನೌಕರರನ್ನು ಕಳುಹಿಸಿ ಆಟ ಆಡಿಸುವಂಥದ್ದನ್ನು ಖಂಡಿಸಿ ಪ್ರಶ್ನಿಸಿದಕ್ಕೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ʼಇದು ಶಿವಮೊಗ್ಗ ಗಾಂಚಾಲಿ ಮಾಡಬೇಡಿʼ ಹಾಗೆ ಹೀಗೆ ಎಂದು ಮಹಿಳಾ ನೌಕರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕ ಸರ್ಕಾರ ಅನುದಾನವನ್ನು ನೀಡುವುದು ಹಾಗೂ ಅನ್ಯ ಕಾರ್ಯ ನಿಮಿತ್ತ ರಜೆ ಸೌಲಭ್ಯ ಮುಂಜೂರು ಮಾಡುವುದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನನ್ನು ಮೆರೆಸುವುದಕ್ಕೋ ಅಥವಾ ನೌಕರರಿಗೆ ಕಾರ್ಯದಕ್ಷತೆ ಉಂಟಾಗಲು ಕ್ರಿಯಾಶೀಲತೆ ಹೆಚ್ಚಾಗಲು ಕ್ರೀಡೆಗಳನ್ನು ಆಯೋಜಿಸುವುದಕ್ಕೋ ಎಂಬುದನ್ನು ಯೋಚಿಸಬೇಕಿದೆ” ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ ಪದ್ಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ಭ್ರಷ್ಟಾಚಾರದ ಸರ್ಕಾರಿ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷನನ್ನು ಮೊದಲು ಕಾನೂನಿನ ರೀತಿಯಲ್ಲಿ ಕ್ರಮ ಜರುಗಿಸಬೇಕು