ಮಲೆನಾಡು ಭಾಗದಲ್ಲಿ ಕಾಡಾನೆಗಳ ಜೊತೆಗೆ ಕಾಡೆಮ್ಮೆಗಳ ಹಾವಳಿ ಮಿತಿ ಮೀರಿದ್ದು, ಹಿಂಡು ಹಿಂಡಾಗಿ ಬೆಳೆ ನಾಶ ಮಾಡುತ್ತಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.
ಮಲೆನಾಡಿನಲ್ಲಿ ಕಾಡೆಮ್ಮೆಗಳ ಹಿಂಡು ಕಾಣಿಸಿಕೊಂಡಿದ್ದು ಬೆಳೆ ನಾಶದ ಜೊತೆಗೆ ಜನರ ಮೇಲೂ ದಾಳಿ ಮಾಡಿ ಜೀವ ತೆಗೆಯುತ್ತಿವೆ. ಇದರಿಂದಾಗಿ ಒಂಟಿಯಾಗಿ ಓಡಾಡಲು ಕಾಫಿ ಬೆಳೆಗಾರರು, ರೈತರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆಯಾಗುತ್ತಲೇ ರೈತರ ಬೆಳೆಗಳತ್ತ ಧಾವಿಸಿ ಬರುತ್ತಿರುವ ಕಾಡೆಮ್ಮೆಗಳು ಬೆಳೆಯನ್ನು ತಿಂದು, ತುಳಿದು ನಾಶಪಡಿಸುತ್ತಿವೆ.
ಇದನ್ನೂ ಓದಿದ್ದೀರಾ?ಹಾಸನ | ಮಡಬ ಗ್ರಾಮದಲ್ಲಿ 27 ಎಕರೆ ಅರಣ್ಯ ಒತ್ತುವರಿ ತೆರವು
ಈ ಘಟನೆ ಕುರಿತು ಕಾಡೆಮ್ಮೆಗಳ ಹಾವಳಿ ತಡೆಗೆ ಕ್ರಮ ವಹಿಸುವಂತೆ ಅರಣ್ಯ ಇಲಾಖೆಯನ್ನು ಸ್ಥಳೀಯರು ಆಗ್ರಹಿಸಿದ್ದಾರೆ.