ರಾಜ್ಯ ಕಾಂಗ್ರೆಸ್ ಸರ್ಕಾರ ಇಂದಿಗೆ (ಮೇ 20) ಎರಡು ವರ್ಷ ಪೂರೈಸಿದ್ದು, ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆಯ ಹಕ್ಕುಪತ್ರಗಳನ್ನು (ಭೂ ಗ್ಯಾರಂಟಿ) ನೀಡುವ ಮೂಲಕ ಎರಡನೇ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿತು.
ಹೊಸಪೇಟೆಯಲ್ಲಿ ಮಂಗಳವಾರ ನಡೆದ ‘ಸಮರ್ಪಣೆ ಸಂಕಲ್ಪ-2025’ ಸಮಾವೇಶದಲ್ಲಿ ಸಾಂಕೇತಿಕವಾಗಿ ಐದು ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿತರಿಸಿದರು.
ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರು, ಸಂಸದರು, ಶಾಸಕರು ಮತ್ತಿತರರು ಉಪಸ್ಥಿತರಿದ್ದರು.
ಹಾಲಿನ ಬೆಲೆ ವಾಟರ್ ಬೆಲೆ ಆಸ್ತಿ ಬೆಲೆ ಸ್ಟ್ಯಾಂಪರು ಬೆಲೆ ಆಲ್ಕೋಹಾಲ್ ಬೆಲೆ ಎಲೆಕ್ಟ್ರಿಸಿಟಿ ಬೆಲೆ ಎಲ್ಲಾ ಬೆಲೆಗಳು ಜಾಸ್ತಿ