ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ಮನರೇಗಾ) ಕೈಗೊಳ್ಳುವ ಎಲ್ಲ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ನಾಮ ಫಲಕದಲ್ಲಿ ಅಳವಡಿಸಬೇಕು. ಆ ಮೂಲಕ ಜನರಿಗೆ ಮಾಹಿತಿ ದೊರಕುವಂತೆ ಮಾಡುವುದು ಗ್ರಾಮ ಪಂಚಾಯತಿ ಹಂತದ ಸಿಬ್ಬಂದಿಗಳ ಕರ್ತವ್ಯ ಎಂದು ಗದಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ. ಸುಶೀಲಾ ಬಿ ಹೇಳಿದರು.
ರೋಣ ತಾಲೂಕಿನ ಮಲ್ಲಾಪುರ, ಮಾರನಬಸರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ರಸ್ತೆ ಕಾಮಗಾರಿ, ಸಿಸಿ ರಸ್ತೆಗಳ ಕಾಮಗಾರಿಗಳನ್ನು ಅವರು ಪರಿಶೀಲಿಸಿದರು. “ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ನಾಮಫಲಕದಲ್ಲಿ ಅಳವಡಿಸಿ, ಜನರಿಗೆ ಮಾಹಿತಿ ದೊರಕುವಂತೆ ಮಾಡುವುದು ಸಿಬ್ಬಂಗಿಳ ಕರ್ತವ್ಯ. ಯಾವುದೇ ರೀತಿಯಲ್ಲಿ ಅಪೂರ್ಣ ಮಾಹಿತಿ ಇದ್ದಲ್ಲಿ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಹೆಚ್ಚು ಆಸ್ತಿ ಸೃಜನೆ ಮಾಡುವ ಮೂಲಕ ಅವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗ (ಪಿಡಿಒ) ಕೆಲಸ ಮಾಡಬೇಕು. ಪಂಚಾಯತಿ ನಿರ್ಮಾಣ ಮಾಡುವ ಸಿಸಿ ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪ ಆಗದಂತೆನಿಗಾವಹಿಸುವ ಮೂಲಕ ಕಾಮಗಾರಿ ಲಾಭ ಜನ ಸಾಮಾನ್ಯರಿಗೆ ತಲುಪಿಸಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಇಓ ಆಪ್ತ ಸಹಾಯಕ ಬಿ.ಎಸ್ ಕಪರದ, ಪಿಡಿಒ ಅಧಿಕಾರಿ ಲೋಹಿತ ಎಮ್.ಎಸ್, ಸಂಕನೂರ, ತಾಂತ್ರಿಕ ಸಹಾಯಕ ಪ್ರವೀಣ ಸೂಡಿ, ಐಇಸಿ ಮಂಜುನಾಥ, ತಾಂತ್ರಿಕ ಇಂಜಿನಿಯರ ಲಿಂಗರಾಜಗೌಡ ಮುದಿಗೌಡ್ರ, ಅಜಯ ಅಬ್ಬಿಗೇರಿ, ಬಿಎಫ್‌ಟಿ ಈರಣ್ಣ ಬೇಲೆರಿ, ಶಿವು ಯಲಿಗಾರ. ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.