ಕೊಡಗು | ಬಡವರಿಗೆ ದಕ್ಕಲಿಲ್ಲ ವಸತಿ ಯೋಜನೆ

Date:

Advertisements

ಕೊಡಗಿನಲ್ಲಿ ಅನ್ಯಾಯಕ್ಕೊಳಗಾಗಿರುವ ಶೋಷಿತ ಸಮುದಾಯಗಳು ಇಂದಿಗೂ ಲೈನ್ ಮನೆ ಜೀತದಲ್ಲಿ ಬದುಕುವುದಲ್ಲದೆ ನಾಗರೀಕ ಸಮಾಜದಲ್ಲಿ ನೆಲೆ ಕಂಡಿಲ್ಲ. ಜನ ಪ್ರತಿನಿಧಿಗಳ ಅವಕೃಪೆಗೊಳಗಾಗಿ ಕೇವಲ ಮತ ನೀಡುವುದಕ್ಕಿರುವ ಸರಕಾದ ಪರಿಸ್ಥಿತಿ. ಎಲ್ಲಿಯೂ ಕಾಣದ, ಕಂಡರಿಯದ ಹೀನಸ್ಥಿತಿ ಕೊಡಗಿನದ್ದು. ಸರ್ಕಾರಗಳು ಒಂದರ ಮೇಲೊಂದರಂತೆ ಹತ್ತು ಹಲವು ಯೋಜನೆ ತಂದರು ಕೊಡಗಿನ ಬಡವರಿಗೆ ದಕ್ಕಲಿಲ್ಲ ವಸತಿ ಯೋಜನೆ. ಸರ್ಕಾರ ಇದನ್ನೆಲ್ಲಾ ಗಮನಿಸದೆ, ಅಧಿಕಾರಿಗಳಿಂದ ವರದಿ ಪಡೆಯದೆ, ಅನುಷ್ಠಾನವಾಗದಿರುವುದಕ್ಕೆ ಆತ್ಮಾವಲೋಕನ ಮಾಡಿಕೊಳ್ಳದಿರುವುದು ಪ್ರಗತಿ ಕುಂಠಿತಕ್ಕೆ ಕಾರಣವೆನ್ನಬಹುದು.

” ರಾಜ್ಯದಲ್ಲಿ ಬಸವ ವಸತಿ ಯೋಜನೆ, ಇಂದಿರಗಾಂಧಿ ಆವಾಸ್ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಡಿ.ದೇವರಾಜ ಅರಸು ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ನಾನಾ ಹೆಸರಿನ ಯೋಜನೆಗಳು ಅನುಷ್ಠಾನದಲ್ಲಿವೆ. ಅವೆಲ್ಲವೂ ರಾಜ್ಯ, ಕೇಂದ್ರ ಸರ್ಕಾರಗಳ ಮಹತ್ತರ ಯೋಜನೆಗಳು. ಒಂದು ಹಂತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಹೇಳಿದ್ದು ದೇಶದಲ್ಲಿ 2022 ರ ಹೊತ್ತಿಗೆ ಯಾರಿಗೂ ಮನೆಯಿಲ್ಲ ಅನ್ನುವಂತಿಲ್ಲ.
ಎಲ್ಲರಿಗೂ ವಸತಿ ಕಲ್ಪಿಸುವ ಗುರಿ ಹೊಂದಿದ್ದೇವೆ ಎಂದಿತ್ತು. ಅದು ಕೇವಲ ರಾಜಕೀಯ ಪ್ರೇರಿತ ಎನ್ನುವುದನ್ನು ಇಲ್ಲಿನ ಜನರ ಸಂಕಷ್ಟ ನೋಡಿದವರಿಗೆ ಅರ್ಥ ಆಗುತ್ತದೆ.”

‘ ಸರ್ವರಿಗೂ ಸೂರು ‘ ಯೋಜನೆ ಹೆಸರು ಮಾತ್ರ ಹೇಳಲು ಚೆಂದವಾಗಿ ಇದೇ ಹೊರತು ಬಡವರಿಗೆ ತಲುಪಿಲ್ಲ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುವ ಯೋಜನೆಗಳು ಕೊಡಗಿಗೆ ಮಾತ್ರ ಅನ್ವಯ ಆಗದೆ ಇರುವುದು ದುರಂತ. ರಾಜ್ಯದಲ್ಲಿ ಗ್ರಾಮ ಪಂಚಾಯತಿ ವಸತಿ ರಹಿತರ ಗುರುತಿಸುವುದು, ನಿವೇಶನ ರಹಿತರ ಪಟ್ಟಿ ಮಾಡುವುದು. ನಡಾವಳಿ ಮೂಲಕ ಆಯಾ ಯೋಜನೆ ಅನುಸಾರ ವಸತಿ ಯೋಜನೆಯಡಿ ಮನೆ ನಿರ್ಮಿಸುವುದು ಇಲ್ಲ ಹಣವನ್ನು ಫಲಾನುಭವಿ ಹೆಸರಿಗೆ ಕಂತುಗಳಲಿ ವರ್ಗಾಯಿಸಿ ಮನೆ
ನಿರ್ಮಾಣ ಮಾಡಿಸುವಂತಹ ವ್ಯವಸ್ಥೆಯಿದೆ.

Advertisements

ಕೊಡಗಿನಲ್ಲಿ ಅಧಿಕಾರಿಗಳು, ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಜನ ಪ್ರತಿನಿಧಿಗಳು ಇಲ್ಲವೇ ಅನ್ನುವುದು ಯಕ್ಷ ಪ್ರಶ್ನೆ? ಕೇವಲ ತಮ್ಮ ತಮ್ಮ ಅನುಕೂಲಕ್ಕೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಮುಗ್ದ ಜನರು ಬಲಿಪಶುವಾಗಿಸಿದ್ದಾರೆ. ಇಡೀ ಕೊಡಗಿನಲ್ಲಿ ಲಕ್ಷಾಂತರ
ಕುಟುಂಬ ಸೂರಿಲ್ಲದೆ ಲೈನ್ ಮನೆ ಜೀತದಲ್ಲಿ ನರಳುತ್ತಿದೆ. ವಾಸಕ್ಕೆ ಮನೆ ಹೋಗಲಿ ಸತ್ತರೆ ಹೂಣಲು ಜಾಗಬಿಟ್ಟಿಲ್ಲ. ಜನರ ಬವಣೆ ಅರ್ಥ ಮಾಡದಂತಹ ವಾತಾವರಣ ಕೊಡಗಿನಲ್ಲಿ ಕಾಣಬಹುದು.

” ರಾಜ್ಯದಲ್ಲಿ ಎಲ್ಲಾದರು ಒಂದು ಕುಟುಂಬ, ಸದಸ್ಯ ಜೀತಕ್ಕೆ ಸಿಲುಕಿ ನಲುಗಿದ್ದರೆ ದೊಡ್ಡ ವಿಷಯವಾಗಿ ಸುದ್ದಿಯಾಗುತ್ತೆ. ತಕ್ಷಣವೇ ಬಿಡುಗಡೆಗೊಳಿಸಿ ಧನ ಸಹಾಯ ಮಾಡಿ, ಜೀತ ಮುಕ್ತ ಪ್ರಮಾಣ ಪತ್ರ ಕೊಟ್ಟು ಹೊಸ ಬದುಕಿಗೆ ಆಧ್ಯತೆ, ವ್ಯವಸ್ಥೆ ಮಾಡುವುದು ಇದೇ. ಅದೇ ಕೊಡಗಿನಲ್ಲಿ ಇಡೀ ಕುಟುಂಬಗಳು ಗಾಣದ ಎತ್ತುಗಳಾಗಿ ದುಡಿಯುತ್ತಿವೆ. ಲೈನ್ ಮನೆ ಜೀತ ಕೊಡಗಿನಲ್ಲಿ ಜೀವಂತವಾಗಿದೆ. ಇದರಿಂದ ಲಕ್ಷಾಂತರ ಜನರ ಬದುಕು ಹಾಳಾಗಿದೆ. ಮಕ್ಕಳ ಭವಿಷ್ಯ ಅತಂತ್ರವಾಗಿದೆ. ವಿಧ್ಯೆ ಇಲ್ಲ, ಬುದ್ದಿ ಇಲ್ಲ. ಸಮಾಜದಲ್ಲಿ ನಾಲ್ಕರಂತೆ ಬದುಕಿಲ್ಲ, ಸ್ಥಾನಮಾನ ಅಂತೂ ಇಲ್ಲವೇ ಇಲ್ಲ.”

ಇಂತಹ ಕೆಟ್ಟ ಪರಿಸ್ಥಿತಿ ಬಹುಷಃ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಮನೆಯೊಂದೆ ಅಲ್ಲಾ. ಜೀವನವು ದುರ್ಗಮವಾಗಿದೆ. ಲೈನ್ ಮನೆ ಬದುಕು ಕತ್ತಲಲ್ಲಿ ಕಳೆದು ಹೋಗುತ್ತಿದೆ. ಬೆಳಕಾಗಬೇಕಿದ್ದ ಕುಡಿಗಳು ಹೊಸಗಿ ಹೋಗಿವೆ. ಇಲ್ಲಿಯ ಸ್ಥಿತಿ ಘನಘೋರ. ಹೇಳಲು, ಕೇಳಲು ಯಾರಿಲ್ಲದ ಸ್ಥಿತಿ. ಒಂದು ರೀತಿಯಲ್ಲಿ ಆಧುನಿಕತೆ ವೇಷತೊಟ್ಟ ಇಲ್ಲಿನ ಅಧಿಕಾರದ ವ್ಯವಸ್ಥೆ, ಆಳುವ ವರ್ಗ, ಭೂ ಮಾಲೀಕರು ಇಲ್ಲಿನ ಜನರನ್ನು ವ್ಯವಸ್ಥಿತವಾಗಿ ಜೀತಕ್ಕೆ ದೂಡಿದ್ದಾರೆ. ಇದನ್ನ ಜೀತ ಪದ್ಧತಿ ಅಂತಲು ಹೇಳಲಾರದ ರೀತಿಯಲ್ಲಿ ‘ ಲೈನ್ ಮನೆ ‘ ( ಸಾಲುಮನೆ) ಹೆಸರಲ್ಲಿ ದುಡಿಸುತಿದ್ದಾರೆ.

” ಅಂತೋ ಇಂತೋ ಒಂದಷ್ಟು ಕುಟುಂಬಗಳು ಹೊರ ಬಂದು ಸ್ವಂತ ಕಾಲಮೇಲೆ ನಿಂತು ಜೀವನ ಮಾಡುತ್ತೇವೆ. ಬದುಕುತ್ತೇವೆ ನಮ್ಮನ್ನು ಬದುಕಲು ಬಿಡಿ. ಇರಲು ಜಾಗ ಕೊಡಿ ಅಂದರೆ ಈ ಕೆಟ್ಟ ಸರ್ಕಾರಗಳಿಗೆ, ಕೆಟ್ಟ ಅಧಿಕಾರಿಗಳಿಗೆ ಕಣ್ಣು, ಬಾಯಿ, ಕಿವಿ ಯಾವುದು ಇಲ್ಲ. ಅಧಿಕಾರದ ಮರ್ಜಿಗೆ, ಭೂ ಮಾಲೀಕರ ಪ್ರಭಾವಕ್ಕೆ ಮಣಿದು ಬಡ ಜನರ ಹಿತ ಕಾಯುವ ನಿಟ್ಟಿನಲ್ಲಿ
ಕ್ರಮಗಳು ಕೈಗೊಳ್ಳುತ್ತಿಲ್ಲ. ಎಲ್ಲಿ ಪ್ರತಿಭಟನೆ ಮಾಡಿದರು ಹತ್ತಿಕ್ಕುವ ವ್ಯವಸ್ಥೆ. ಧರಣಿ ಕುಳಿತರೆ ಪೊಲೀಸರಿಂದ ಎಫ್ಐಆರ್ ಹಾಕಿಸುವುದು. ಹೀಗೆ ಬಡವರ ಮೇಲೆ ಕಾನೂನಿನ ಅಸ್ತ್ರ ಪ್ರಯೋಗವಾಗುತ್ತದೆ.”

ದುರಂತ ಅಂದರೆ ಇಂತಹ ಮಳೆಯಲ್ಲಿ ನೂರಾರು ಮಂದಿ ಪ್ಲಾಸ್ಟಿಕ್ ಹೊದಿಕೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅವರೇನು ಕೇಳಬಾರದ್ದು ಕೇಳಿಲ್ಲ. ಸರ್ಕಾರಗಳೇ ಹೇಳಿರುವ, ಬೊಗಳೆ ಬಿಡುತ್ತಿರುವ ವಸತಿ ಯೋಜನೆಯಡಿ ನಮಗೂ ಜಾಗ ಕೊಡಿ, ಒಂದು ಸೂರು ಕೊಡಿ ಅಂತ. ಆದರೆ, ಇಲ್ಲಿಯ ಜನರಿಗೆ ಸರ್ಕಾರದ ಸವಲತ್ತು ಸಿಗಲ್ಲ. ಜನರು ತತ್ತಿರಿಸಿ ಹೋಗಿದ್ದಾರೆ. ಭೂ ಮಾಲೀಕರ ಅಟ್ಟಹಾಸ. ಅವರ ಕಪಿಮುಷ್ಟಿಯಿಂದ ಹೊರಬರಲಾರದೆ. ನಲುಗಿದ್ದಾರೆ. ಹೊರ ಬಂದವರು ಅತಂತ್ರ ಆಗಿದ್ದಾರೆ. ದುಡಿಮೆಯಿಲ್ಲ, ಬದುಕಿಲ್ಲ. ಇರಲು ಜಾಗವಿಲ್ಲ.ಧ್ವನಿ ಮಾಡಿದರೆ ಉಳಿಗಾಲವಿಲ್ಲ.

” ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನದಡಿಯಲ್ಲಿ ಎಲ್ಲರಿಗೂ, ಎಲ್ಲಾ ರೀತಿಯಲ್ಲಿ ಸಮಾನ ಹಕ್ಕನ್ನು ನೀಡಿದ್ದಾರೆ. ಮೂಲಭೂತ ಸೌಲಭ್ಯ ಪಡೆಯುವುದು ಈ ದೇಶದ ನಾಗರೀಕನ ಹಕ್ಕಾಗಿದೆ. ಆದರೆ, ಯಾವ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಕೊಡಗಿನ ದಾಸ್ಯ ಎಲ್ಲಿ ಕೊನೆಯಾಗಿದೆ? ಕೊಡಗಿನಲ್ಲಿ ದಲಿತರು, ಶೋಷಿತರು, ಆದಿವಾಸಿ, ಬುಡಕಟ್ಟು ಜನರು ಕೇಳುತ್ತಾ ಇರೋದು ಇರಲು ಜಾಗ, ಮನೆ ಕೊಡಿ. ಒಂದಿಷ್ಟು ಭೂಮಿ ಕೊಡಿ. ಆದರೆ, ಇದುವರೆಗೆ ಯಾರು ಸ್ಪಂದಿಸಲಿಲ್ಲ. ಎಲ್ಲರೂ ಬಡ ಜನರನ್ನ ದುರುಪಯೋಗ ಮಾಡಿಕೊಂಡಿದ್ದೆ ಹೆಚ್ಚು.”

ಗೆಯ್ಯಲು ಬೇಕು ಇಲ್ಲಿಯ ಜನ, ಬದುಕುವುದಕ್ಕೆ ಬೇಡ ಅನ್ನುವಂತಿದೆ ಪರಿಸ್ಥಿತಿ. ಬಡವರಾಗಿ ಹುಟ್ಟಿದ್ದೇ ತಪ್ಪು ಅನ್ನುವಂತಿದೆ. ದುಡಿದು ನೆಮ್ಮದಿಯಾಗಿ ಬದುಕಲು ಆಗದ ಪರಿಸ್ಥಿಯಾಗಿದೆ. ಹೀಗಿರುವಾಗ ಸರ್ಕಾರಿ ಇಲಾಖೆಗಳು, ಅಧಿಕಾರಿಗಳು ಜನರು ಚಳಿ, ಮಳೆಯಲ್ಲಿ ಇದ್ದ ತಕ್ಷಣ ಸ್ಪಂದಿಸುತ್ತಾರೆ ಅನ್ನುವುದು ಭ್ರಮೆಯಷ್ಟೇ. ಅಧಿಕಾರಿಗಳಿಗೆ ಏನಾದರೆ ಏನು? ಮನುಷ್ಯರಂತೆ
ಕಾಣದೆ ಇರುವಾಗ ಬಡವರ ಕಷ್ಟ ಅರಿಯಲು ಸಾಧ್ಯವು ಇಲ್ಲ.

‘ ಜಡ್ಡು ಹಿಡಿದ ವ್ಯವಸ್ಥೆ ಕೊಡಗಿಗೆ ಬೇರೆಯ ಕಾನೂನು ಅನ್ನುವಂತೆ ನಡೆದುಕೊಳ್ಳುತ್ತಿದೆ. ಇದನ್ನೇ ಲಾಭ ಮಾಡಿಕೊಂಡವರು ಕಾಲಾನು ಕಾಲದಲ್ಲಿ ಬಳಸಿಕೊಳ್ಳುತ್ತಾ, ಅಧಿಕಾರ ಹೊಂದುತ್ತ. ನಮಗೂ ಇದಕ್ಕೂ ಸಂಬಂಧವಿಲ್ಲ ಅನ್ನುವಂತೆ ಏನು ಅರಿಯದಂತೆ, ಗೊತ್ತಿಲ್ಲದಂತೆ ನಡೆದುಕೊಳ್ಳುತ್ತಾ ಇರುವುದು ಶೋಚನಿಯ. ಒಂದು ರೀತಿ ಅಲ್ಲಾ ಬಡ ಜನ ನಾನಾ ರೀತಿ ಮೋಸ ಹೋಗುತ್ತಿದ್ದಾರೆ. ತಾನು ಹುಟ್ಟಿದ, ತಾನು ಮೆಟ್ಟಿದ ನೆಲದಲ್ಲಿ ಒಂಚೂರು ಜಾಗ ಕೊಡಿ ಅನ್ನುವ ಪರಿಸ್ಥಿತಿ ನಿಜಕ್ಕೂ ಭಾಧನೀಯ ‘.

ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ನಾಡಕಛೇರಿ ಮುಂದೆ ನಿವೇಶನ ರಹಿತ ಕುಟುಂಬಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದಿಗೆ 24 ನೇ ದಿನಕ್ಕೆ ಕಾಲಿಟ್ಟಿದೆ. ಎಷ್ಟೇ ಹೋರಾಟ ಮಾಡಿದರು, ನೆಲ ಮೂಲದವರಾದರೂ ಬಡವರಿಗೆ ದಕ್ಕಲಿಲ್ಲ ವಸತಿ ಯೋಜನೆ. ರಾಜ್ಯದಲ್ಲಿ ಎಲ್ಲೂ ಇರದ ಎನ್ ಜಿ ಓ ಸಂಸ್ಥೆಗಳು ಇಲ್ಲಿ ಹುಟ್ಟಿಕೊಂಡಿವೆ. ಎಲ್ಲವೂ ಇಲ್ಲಿನ ಬಡ ಜನರ ಏಳಿಗೆ ಮಾಡುವ, ಜನ ಹಿತ, ಜನರ ಅಗತ್ಯತೆಗೆ ಕೆಲಸ ಮಾಡುವುದಾಗಿ. ಆದರೆ. ಇದುವರೆಗೆ ಅಂತಹ ಬದಲಾವಣೆ ಖಂಡಿತೆ ಎಂದರೆ
ಅದು ಶೂನ್ಯ.

ಅಮ್ಮತ್ತಿ ಹಾಗೂ ಕರ್ಮಾಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ನೂರಾರು ಕುಟುಂಬಗಳು ವಸತಿ ರಹಿತರಾಗಿದ್ದು ನಿವೇಶನ ಕಲ್ಪಿಸುವಂತೆ ಆಗ್ರಿಹಿಸಿ ನಾಡಕಚೇರಿ ಆವರಣದಲ್ಲಿ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೆ ಯಾರು ಸ್ಪಂದಿಸಿಲ್ಲ. ಹೋರಾಟದಲ್ಲಿ ಪುಟ್ಟ ಕಂದಮ್ಮಗಳು, ವಯಸ್ಸಾದವರು, ಅನಾರೋಗ್ಯ ಸಮಸ್ಯೆ ಇರುವವರು ಇದ್ದಾರೆ. ಇದರ ಅರಿವು ಜಿಲ್ಲಾಡಳಿತಕ್ಕೆ ಇಲ್ಲ.

ಸಿಪಿಐಎಂಎಲ್ ಪಕ್ಷದ ಮುಖಂಡರಾದ ಡಿ. ಎಸ್. ನಿರ್ವಾಣಪ್ಪ ಮಾತನಾಡಿ ” ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಬಡವರು ಬೀದಿ ಪಾಲಾಗಿದ್ದಾರೆ. ಬಡವರಿಗೆ ವಸತಿ ಯೋಜನೆಗಳು ತಲುಪುತ್ತಿಲ್ಲ. ಅಂದರೆ, ಯಾರು ಕಾರಣ? ಇದಕ್ಕೆಲ್ಲ ಅಧಿಕಾರಿಗಳೇ ನೇರ ಹೊಣೆ. ಬಡವರನ್ನ ಗುರುತಿಸಿ ಫಲಾನುಭವಿ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಿದ್ದಪಡಿಸಿ ನಡಾವಳಿ ಮೂಲಕ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ನೀಡಬೇಕು. ಅದರಂತೆ, ಮೇಲಾಧಿಕಾರಿಗಳು ಸರ್ಕಾರಗಳ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಆದರೆ, ಕೊಡಗಿನಲ್ಲಿ ಇದುವರೆಗೆ ಅಂತಹ ಉತ್ತಮವಾದ ಸ್ಥಿತಿ ನಿರ್ಮಾಣವಾಗಿಲ್ಲ. ಕೊಡಗಿನ ಶೋಷಿತ ಕುಟುಂಬಗಳು ಲೈನ್ ಮನೆಯಲ್ಲಿ ಇರಬೇಕು. ಅದನ್ನ ಬಿಟ್ಟರೆ ಶಕ್ತಿ ಅನುಸಾರ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕು. ಅದು ಸಾಧ್ಯ ಆಗಲಿಲ್ಲ ಅಂದಾಗ ಸರ್ಕಾರಿ ಜಾಗಗಳಲ್ಲಿ ಸ್ಥಳೀಯ ಆಡಳಿತದ ವಿರೋಧದ ನಡುವೆ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲಿ ಬದುಕಬೇಕು. ಅದನ್ನ ಅಧಿಕಾರಿಗಳು ಕಿತ್ತು ಹಾಕಿದರೆ ಹೀಗೆ ಬೀದಿಯಲ್ಲಿ ಕುಳಿತು ಪ್ರತಿಭಟಸಬೇಕಾದ ಪರಿಸ್ಥಿತಿ ಇಲ್ಲಿಯದ್ದಾಗಿದೆ ” ಎಂದು ವಿಷಾದ ವ್ಯಕ್ತಪಡಿಸಿದರು.

ಸಿಪಿಐಎಲ್ ಪಕ್ಷದ ಪ್ರಕಾಶ್ ಮಾತನಾಡಿ ‘ ಬಡವರ ಪರವಾಗಿ ಯಾವುದೆ ಸರಕಾರಗಳು ಕೆಲಸ ಮಾಡಲ್ಲ. ಅದರಲ್ಲೂ ಕೊಡಗಿನಲ್ಲಿ ಭೂ ಮಾಲೀಕರ ಪರವಾಗಿ ಆಗುವಂತಹ ಕೆಲಸಗಳು ಅದೇ ಬಡ ಜನರಿಗೆ ಆಗೋದೇ ಇಲ್ಲ. ಯಾವುದೇ ಕಾನೂನು ಬರಲಿ ಅದೆಲ್ಲವೂ ಉಳ್ಳವರ ಪರವಾಗಿ ಇರುತ್ತದೆ ವಿನ್ಹ ಇಲ್ಲಿಯ ಬಡವ ಕಣ್ಣಿಗೆ ಕಾಣುವುದೇ ಇಲ್ಲ ‘ ಎಂದರು.

ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ಕೆ. ಮೊಣ್ಣಪ್ಪ ಮಾತನಾಡಿ ” ನಿವೇಶನ ರಹಿತ ಬಡ ಜನರ ಸ್ಥಿತಿಗತಿಗಳು ತೀರಾ ಶೋಚನೀಯವಾಗಿದೆ. ಸರಕಾರ, ಸ್ಥಳೀಯ ಆಡಳಿತ ನಿವೇಶನ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸಬೇಕು. ಎಲ್ಲರಿಗೂ ಯೋಜನೆಗಳನ್ನು ಹೊಂದುವ ಹಕ್ಕಿದೆ. ಆದರೆ, ಕೊಡಗಿನಲ್ಲಿ ಭಿನ್ನಾವಾಗಿದ್ದು. ಯಾವುದೇ ಅರ್ಜಿ ಸಲ್ಲಿಸಿದರು ಅಧಿಕಾರಿಗಳಿಂದ ಸ್ಪಂದನೆ ಇರುವುದಿಲ್ಲ. ಯಾವುದೇ ಕೆಲಸ ಆಗುವುದು ಇಲ್ಲ. ಸರ್ಕಾರ ಪ್ರತ್ಯೇಕವಾಗಿ ಯಾವುದೇ ಯೋಜನೇ ಘೋಷಣೆ ಮಾಡಲ್ಲ. ಎಲ್ಲರಿಗೂ ಅನ್ವಯವಾಗುವಂತೆ ಜಾರಿಯಲ್ಲಿ ಇರುತ್ತದೆ. ಆದರೆ, ಅಧಿಕಾರಿಗಳು ಕೊಡಗಿನ ಮಟ್ಟದಲ್ಲಿ ಪ್ರಗತಿ ಸಾಧಿಸುವುದಿಲ್ಲ. ಕಾರ್ಯಗತ ಆಗುವುದು ಇಲ್ಲ.

ನಿವೇಶನ ರಹಿತರ ಪಟ್ಟಿ ದೊಡ್ಡದಿದೆ ಕಾರಣ ಬಡವರ ಹತ್ತಿರ ಭೂಮಿ ಇಲ್ಲ. ಇರುವುದೆಲ್ಲ ಭೂ ಮಾಲೀಕರ ಬಳಿ. ಹೀಗಾಗಿ, ಬಡ ಜನರು ನೀವೇಶನಕ್ಕಾಗಿ, ವಸತಿಗಾಗಿ ಹೋರಾಡುತ್ತಲೆ ಬರುತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಅಮ್ಮತ್ತಿಯಲ್ಲಿನ ಹೋರಾಟ ಕೂಡ ನಡೆಯುತ್ತಿದೆ. ಈಗಲಾದರೂ ಗಮನ ಹರಿಸಬೇಕು ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕು ” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ದಲಿತ ಯುವಕನ ಜೀವಂತ ದಹನ; ಆರೋಪಿ ನಾಪತ್ತೆ

ಸರ್ಕಾರ, ಜಿಲ್ಲಾಡಳಿತ, ವಸತಿ ಯೋಜನೆ ಅಧಿಕಾರಿಗಳು, ತಾಲ್ಲೂಕು ಆಡಳಿತ, ಸ್ಥಳೀಯ ಆಡಳಿತ ಬಡ ಜನರ ಕಷ್ಟ ಅರಿತು ಸ್ಥಳಕ್ಕೆ ಭೇಟಿ ನೀಡಿ ನಿವೇಶನ ಕಲ್ಪಿಸುವುದೇ ಕಾದು ನೋಡಬೇಕಿದೆ. ಈದಿನ.ಕಾಮ್ ಅಧಿಕಾರಿಗಳು, ಜನ ಪ್ರತಿನಿಧಿಗಳ ಪ್ರತಿಕ್ರಿಯೆ ಪಡೆದು ಹೆಚ್ಚಿನ ಮಾಹಿತಿಯೊಡನೆ ಮುಂದಿನ ಸಂಚಿಕೆಯಲ್ಲಿ ವರದಿ ಮಾಡಲಿದೆ.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X