ಸಭಾಧ್ಯಕ್ಷ ಸ್ಥಾನಕ್ಕೇರಲು ಟ್ರೋಲರ್‌ ಕಾರಣ, ಧೈರ್ಯದಿಂದ ಮಾತನಾಡಿ: ನೂತನ ಶಾಸಕರಿಗೆ ಖಾದರ್‌ ಕಿವಿಮಾತು

Date:

Advertisements
  • ‘ನಮ್ಮನ್ನು ಟ್ರೋಲ್‌ ಮಾಡುತ್ತಾರೆ ಎಂದು ಹಿಂಜರಿಕೆಯಲ್ಲಿ ಮಾತನಾಡಬೇಡಿ’
  • ‘ನಾವು ದೊಡ್ಡ ಸ್ಥಾನಕ್ಕೆ ಏರಲು ಇಂತಹ ಟ್ರೋಲ್‌ಗಳ ಪಾತ್ರ ಇರುತ್ತದೆ’

ಯಾರೋ ನಮ್ಮನ್ನು ಟ್ರೋಲ್‌ ಮಾಡುತ್ತಾರೆ ಎಂಬ ಹಿಂಜರಿಕೆಯಲ್ಲಿ ಮಾತನಾಡಬೇಡಿ. ಟ್ರೋಲ್‌ ಮಾಡುವವರ ಬಗ್ಗೆ ಯಾವತ್ತೂ ಹೆದರಬೇಡಿ. ನಾನು ಈ ಸಭಾಧ್ಯಕ್ಷ ಸ್ಥಾನದ ಕುರ್ಚಿಯಲ್ಲಿ ಬಂದು ಕುಳಿತುಕೊಳ್ಳಲು ಈ ಟ್ರೋಲ್‌ ಮಾಡಿದವರು ಕೂಡ ಕಾರಣ. ನಾವು ದೊಡ್ಡ ಸ್ಥಾನಕ್ಕೆ ತಲುಪಬೇಕಾದರೆ ಇಂತಹ ಟ್ರೋಲ್‌ಗಳ ಪಾತ್ರ ಇರುತ್ತದೆ ಎಂದು ಸಭಾಧ್ಯಕ್ಷ ಯು ಟಿ ಖಾದರ್‌ ಹೇಳಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಶಾಸಕರಿಗೆ ಮಾತನಾಡಲು ಸಭಾಧ್ಯಕ್ಷರು ಬುಧವಾರ ನಡೆದ ಎಂಟನೇ ದಿನದ ಕಲಾಪದಲ್ಲಿ ಅವಕಾಶ ಮಾಡಿಕೊಟ್ಟರು. ಈ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಶಾಸಕ ಪ್ರದೀಪ್‌ ಈಶ್ವರ್‌ ಭಾಷಣ ಆರಂಭಿಸಿದರು. ಅವರ ಭಾಷಣದಲ್ಲಿನ ಹಿಂಜರಿಕೆ ಕಂಡ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ ನೂತನ ಶಾಸಕರಿಗೆ ಮಾತನಾಡುವ ಬಗ್ಗೆ ಧೈರ್ಯತುಂಬಿ ಪ್ರೋತ್ಸಾಹಿಸಿದರು.

“ಹೊಸದಾಗಿ ಶಾಸಕರಾದವರು ಆತ್ಮವಿಶ್ವಾಸದಿಂದ ಮಾತನಾಡಬೇಕು. ಮಾತಿನಲ್ಲಿ ಹೆಚ್ಚು ಕಡಿಮೆ ಆದರೆ ತೊಂದರೆ ಇಲ್ಲ. ಇದೇನು ಪರೀಕ್ಷೆ ಅಥವಾ ಕೋರ್ಟ್‌ ಅಲ್ಲ. ಮುಕ್ತ ಮನಸ್ಸಿನಿಂದ, ಆರಾಮವಾಗಿ ಸಂವಿಧಾನಬದ್ಧವಾಗಿ ಮಾತನಾಡಿ” ಎಂದು ಸಭಾಧ್ಯಕ್ಷರು ಸಲಹೆ ನೀಡಿದರು.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಪೀಕರ್ ಖಾದರ್, ಕನ್ನಡ ಮತ್ತು ಬೆತ್ತಲಾದ ಬಿಜೆಪಿ

“ಎಲ್ಲ ನೂತನ ಶಾಸಕರು ತಮಗೇನು ಹೇಳಬೇಕು ಅನ್ನಿಸುತ್ತದೆಯೋ ಅದನ್ನು ಮುಕ್ತವಾಗಿ ಹೇಳಿ. ಸಕಾರಾತ್ಮಕ ವಿಚಾರಗಳನ್ನು ಸದನದಲ್ಲಿ ಧೈರ್ಯವಾಗಿ ಹೇಳಿ. ಯಾವುದಕ್ಕೂ ಹಿಂಜರಿಯಬೇಡಿ” ಎಂದು ಕಿವಿಮಾತು ಹೇಳಿದರು.

“ಬಡಕುಟುಂಬದ ಹುಡಗ ಕೂಡ ವಿಧಾನಸೌಧ ತಲುಪುವುದಕ್ಕೆ ಪ್ರೇರಣೆಯಾದ ಅಂಬೇಡ್ಕರ್‌, ಅನಾಥ ಹುಡುಗರಿಗೆ ಅನ್ನವಿಟ್ಟು ಬೆಳೆಸಿದಂತಹ ಸಿದ್ಧಗಂಗಾ ಶ್ರೀಗಳನ್ನು ಸ್ಮರಿಸುತ್ತ ನನ್ನ ಭಾಷಣ ಪ್ರಾರಂಭಿಸಿರುವೆ” ಎಂದು ಪ್ರದೀಪ್‌ ಈಶ್ವರ್‌ ಮಾತು ಪ್ರಾರಂಭಿಸಿ ಅನ್ನಭಾಗ್ಯ ಯೋಜನೆ ಮತ್ತು ಸರ್ಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿ ಸದನದ ಗಮನ ಸೆಳೆದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X