ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿ, ಆರ್ಭಟಿಸುತ್ತಿರುವ ಮಳೆ ಹಾಸನದಲ್ಲೂ ಕೂಡ ಬಿಡುವಿಲ್ಲದೆ ಬರುತ್ತಿದೆ. ಕಳೆದ ರಾತ್ರಿಯಿಡೀ ಸುರಿದ ಮಳೆ, ಬೆಳಗ್ಗೆ ಸಹ ಜಿಲ್ಲೆಯ ವಿವಿಧ ಕಡೆ ಜೋರು ಮತ್ತು ಸಾಧಾರಣವಾಗಿದೆ.
ಹಾಸನ ಭಾಗದ ಬೇಲೂರು, ಸಕಲೇಶಪುರದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ನಗರದಲ್ಲಿಯೂ ಬಿರುಗಾಳಿ ಗುಡುಗು ಸಹಿತ ಮಳೆ ಆಗುತ್ತಿದೆ. ಬೆಳಿಗ್ಗೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ವಿದ್ಯಾರ್ಥಿಗಳಿಗೆ, ಕಚೇರಿಗಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಪರದಾಡುವ ಸ್ಥಿತಿ ಎದುರಾಗಿದೆ.
ಇದನ್ನೂ ಓದಿದ್ದೀರಾ?ಹಾಸನ l ನ್ಯಾ. ಧನಲಕ್ಷ್ಮಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ ವಕೀಲರ ಸಂಘ
ಹಾಗೆಯೇ, ಮಲೆನಾಡು ಭಾಗದಲ್ಲೂ ವರುಣನ ಅಬ್ಬರ ಜಾಸ್ತಿಯಾಗಿದ್ದು, ವಾಹನ ಸವಾರರು, ಸಾರ್ವಜನಿಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಎರಡು ದಿನಗಳವರೆಗೆ ಹಾಸನ ಜಿಲ್ಲೆಗೂ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.