ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU) ಕೇಂದ್ರ ಸಮಿತಿ ಕರೆಯಂತೆ ಉಡುಪಿಯಲ್ಲಿ ಇಂದು ಜೆಸಿಟಿಯು ನೇತ್ರತ್ವದಲ್ಲಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ನಾಲ್ಕು ಸಂಹಿತೆಗಳ ಆದೇಶ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಮಾತಾನಾಡಿ, ಕೇಂದ್ರ ಸರಕಾರ ಜಾರಿಮಾಡಿರುವ ವೇತನ ಸಂಹಿತೆ-2019, ಕೈಗಾರಿಕಾ ಸಂಬಂಧಗಳ ಸಂಹಿತೆ-2020, ವ್ರತ್ತಿಆಧರಿತ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ-2020 ಮತ್ತು ಸಾಮಾಜಿಕ ಸುರಕ್ಷತಾ ಸಂಹಿತೆ-2020 ಕಾಯಿದೆಯನ್ನು ಸರಕಾರ ವಾಪಾಸು ಪಡೆಯಬೇಕು. ಬ್ಯಾಂಕ್ ಖಾಸಗೀಕರಣ ನಿಲ್ಲಿಸಬೇಕು, ಬ್ಯಾಂಕ್ ಗಳ ವಿಲಿನ ನಿಲ್ಲಿಸಬೇಕು. ಶ್ರೀಮಂತ ವರ್ಗದವರಿಗೆ ರಿಯಾಯಿತಿ ನೀಡಬಾರದು ಎಂದು ಒತ್ತಾಯಿಸುವುದರ ಜೊತೆಗೆ ಕೇಂದ್ರ ಸರ್ಕಾರದ ವಿರುದ್ದ ಮತ್ತೆ ಜುಲೈ 09ರಂದು ದೇಶಾದ್ಯಂತ ಹರಾತಳ, ಕಾರ್ಮಿಕ ಮುಷ್ಕರ ನಡೆಯಲಿದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ವಿಮಾ ನೌಕರರ ಸಂಘ ದ ಅಧ್ಯಕ್ಷ ರಾದ ವಿಶ್ವನಾಥ. ಕೆ, AITUC ಉಡುಪಿ ಮುಖಂಡರಾದ ಶಿವನಂದ, ಇಂಟಕ್ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಕಿರಣ್ ಹೆಗ್ಡೆ, AIBEA ಮುಖಂಡರಾದ ನಾಗೇಶ್ ನಾಯಕ್, ರಮೇಶ್, ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕರಾದ ಸಂಜೀವ ಬಳ್ಕೂರು, ಉಡುಪಿ ಬೀಡಿ ಸಂಘದ ಮುಖಂಡರಾದ ಉಮೇಶ್ ಕುಂದರ್, ನಳಿನಿ.ಎಸ್, ಗಿರಿಜಾ ಉಡುಪಿ ಕಟ್ಟಡ ಸಂಘದ ಜಿಲ್ಲಾ ಅಧ್ಯಕ್ಷ ರಾದ ಶೇಖರ್ ಬಂಗೇರ, ವಾಮನ ಪೂಜಾರಿ, ಸುಭಾಶ್ ನಾಯಕ್, ರಾಮಕಾರ್ಕಡ, ಸರೋಜ ಎಸ್, ಶೇಕರ್ ಪಡುಬಿದ್ರಿ, ಸೈಯದ್ ಅಲಿ, ರಮೇಶ್ ಉಡುಪಿ, ಸಂಜೀವ ನಾಯಕ್ ಉಪಸ್ಥಿತರಿದ್ದರು. JCTU ಉಡುಪಿ ಜಿಲ್ಲಾ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಸರಕಾರದ ವಿರುದ್ಧ ಘೋಷಣೆ ಕೂಗಿ ಪ್ರಾಸ್ತಾವಿಕವಾಗಿ ಮಾತಾನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ್ ಗೊಲ್ಲ ಮಾತಾನಾಡಿ ಧನ್ಯವಾದ ವಿತ್ತರು.