ರಾಯಚೂರಿನ ಹಟ್ಟಿ ಚಿನ್ನದ ಗಣಿ – ಅನ್ವರಿ ಗ್ರಾಮದ ಮಧ್ಯೆ ಕೆ ಎಸ್ ಆರ್ ಟಿ ಸಿ ಬಸ್ ಒಂದು ಕೆಸರಿನಲ್ಲಿ ಸಿಲುಕಿಕೊಂಡ ಪರಿಣಾಮ ಸುಮಾರು ಹೊತ್ತು ಪ್ರಯಾಣಿಕರು ಪರದಾಡುವಂತಾಯಿತು.
ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣ ಹಾಗೂ ಅನ್ವರಿ ಗ್ರಾಮಗಳ ಮಧ್ಯೆ ಸೇತುವೆ ನಿರ್ಮಾಣ ಮಾಡುತ್ತಿದ್ದ ಸ್ಥಳದಲ್ಲಿ ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿ ಬಸ್ ಸಿಲುಕಿಕೊಂಡಿತ್ತು.
ಹಳೆಯ ಸೇತುವೆ ಕಿತ್ತು ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ವಾಹನಗಳು ಚಲಿಸಲು ಪಕ್ಕದಲ್ಲಿ ಬದಲಿ ರಸ್ತೆ ನಿರ್ಮಿಸಲಾಗಿದೆ.
ಬಸ್ ಮುಂದೆ ಹೋಗಲು ಸಹ ಸಾಧ್ಯವಾಗದೆ ಸಂಕಷ್ಟ ಪಡುವಂತಾಯಿತು. ಸ್ಥಳೀಯರು ಸ್ಥಳಕ್ಕೆ ತೆರಳಿ ಜೆಸಿಬಿ ಸಹಾಯದಿಂದ ಬಸ್ಸನ್ನು ಕೆಸರಿನಿಂದ ಹೊರ ತರಲು ಸಹಕರಿಸಿದರು.
ಬಸ್ ಹಟ್ಟಿ ಹಾಗೂ ಹೈದ್ರಾಬಾದ ರಾಜ್ಯಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
