ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮದಲ್ಲಿ ಧ್ವಜಸ್ತಂಭದ ಮುಂದೆ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ., ಅದನ್ನು ತೆರವುಗೊಳಿಸಬೇಕು ಎಂದು ಶ್ರೀನಿವಾಸಗೌಡ ಪಾಟೀಲ್ ಆಗ್ರಹಿಸಿದ್ದಾರೆ. ತೆರವುಗೊಳಿಸದಿದ್ದರೆ, ಆಗಸ್ಟ್ 1ರಿಂದ ಅನಿರ್ಧಿಷ್ಠಾವಧಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ್ಧಾರೆ.
“ಸಾರ್ವಜನಿಕ ಸರ್ಕಾರಿ ಆಸ್ತಿಗಳಾದ ಅಗಸಿ ಕಟ್ಟಡ, ಗ್ರಾಮ ಪಂಚಾಯತಿ ಕಚೇರಿ, ಧ್ವಜಸ್ತಂಭಗಳಿರುವ ಸರ್ಕಾರಿ ಜಾಗದಲ್ಲಿ2020ರ ಮಾರ್ಚ್ 14ರಂದು ರಾತ್ರೋರಾತ್ರಿ ಅಕ್ರಮವಾಗಿ ಅಂಗಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆ ಅಂಗಡಿಯಲ್ಲಿ ಮದ್ಯ ಮಾರಾಟವೂ ನಡೆಯುತ್ತಿದೆ. ಕಟ್ಟಡವನ್ನು ನೆಲಸಮಗೊಳಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಅಕ್ರಮ ಕಟ್ಟಡ ತೆರವಿಗೆ ಆಗ್ರಹಿಸಿ 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ದೂರು ಸಲ್ಲಿಸಿದ್ದೆವು. ಅದೇ ವರ್ಷ ಅಕ್ಟೋಬರ್‌ನಲ್ಲಿ ರಾಮದುರ್ಗ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದೆವು.ಮೂರು ದಿನದಲ್ಲಿ ಅಕ್ರಮ ಕಟ್ಟಡವನ್ನು ತೆರೆವುಗೊಳಿಸುತ್ತೇವೆಂದು ಅಂದಿನ ತಾಲೂಕ ಪಂಚಾಯತಿ ಇಓ ಮತ್ತು ತಹಶೀಲ್ದಾರರು ಭರವಸೆ ನೀಡಿದ್ದರು. ಆದರೆ, ಮೂರು ವರ್ಷ ಕಳೆದರೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಂಡಿಲ್ಲ. ಅಕ್ರಮ ಕಟ್ಟಡ ತೆರವುಗೊಳಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಅಕ್ರಮ ಕಟ್ಟಡವನ್ನು ತೆರವುಗೊಳಿಸಿ, ಕ್ರಮ ಕೈಗಗೊಳ್ಳದಿದ್ದರೆ, ಮುಂದಿನ ತಿಂಗಳು (ಆಗಸ್ಟ್) 1ರಿಂದ ಅನಿರ್ದಿಷ್ಟಕಾಲ ಅಹೋರಾತ್ರಿ ಧರಣಿ ಆರಂಭಿಸುತ್ತೇವೆ ಎಂದು ಶ್ರೀನಿವಾಸಗೌಡ ಪಾಟಿಲ್ ಎಚ್ಚರಿಕೆ ನೀಡಿದ್ಧಾರೆ.