- ಆಂಜನಪ್ಪ ಗಾರ್ಡನ್, ವಿದ್ಯಾಪೀಠ, ಶ್ರೀನಿವಾಸ ನಗರದಲ್ಲಿ ನೀರು ವ್ಯತ್ಯಯ
- ಜಲರೇಚಕ ಯಂತ್ರಗಾರಗಳ ದುರಸ್ತಿ ಹಾಗೂ ಕವಾಟಗಳ ದುರಸ್ತಿ ಕಾಮಗಾರಿ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ 1 ಮತ್ತು 2ನೇ ಹಂತದ ಜಲರೇಚಕ ಯಂತ್ರಗಾರಗಳ ದುರಸ್ತಿ ಕಾರ್ಯ ಹಾಗೂ ಕವಾಟಗಳ ದುರಸ್ತಿ ಕಾಮಗಾರಿ ಸಲುವಾಗಿ ಕಾವೇರಿ 4ನೇ ಹಂತದ 1ನೇ ಘಟ್ಟದ ಎರಡು ಪಂಪ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಹಾಗಾಗಿ, ಜುಲೈ 13ರಂದು ನಗರದ ಕೆಲವೆಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಡ್ಲ್ಯೂಎಸ್‌ಎಸ್‌ಬಿ, “ನಗರದ ನೇತಾಜಿನಗರ, ನಾಗಮ್ಮನಗರ, ಕೇಶವನಗರ, ಕೆ.ಪಿ.ಅಗ್ರಹಾರ, ರಾಘವೇಂದ್ರ ಕಾಲೋನಿ, ಟಿಪ್ಪುನಗರ, ಆನಂದಪುರ, ಚಾಮರಾಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶನಗರ, ಕನ್ನೀರ್ ಕಾಲೋನಿ, ನಂಜಾಂಬ ಅಗ್ರಹಾರ, ವಾಲ್ಮೀಕಿ ನಗರ, ವಿ.ಎಸ್ ಗಾರ್ಡನ್, ಹರಿಕುಂಟೆ, ಪಾದರಾಯನಪುರ ಪ್ಲವರ್ ಗಾರ್ಡನ್, ಬನ್ ಕಾಲೋನಿ, ಆಂಜನಪ್ಪ ಗಾರ್ಡನ್, ಬಿನ್ನಿ ಲೇಔಟ್, ನ್ಯೂ ಬಿನ್ನಿ ಲೇಔಟ್, ವಿದ್ಯಾಪೀಠ, ಶ್ರೀನಿವಾಸ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ವ್ಯತ್ಯಯವಾಗಲಿದೆ” ಎಂದು ಹೇಳಿದೆ.
“ಹಾಗೇಯೆ, ಬ್ಯಾಂಕ್ ಕಾಲೋನಿ, ಐಟಿಐ ಲೇಔಟ್, ಗುರುರಾಜ್ ಲೇಔಟ್, ವಿವೇಕಾನಂದ ನಗರ, ಖಾದಿಮಿಷನ್ ಲೇಔಟ್, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಶಾಸ್ತ್ರೀನಗರ, ಎನ್.ಆರ್.ಕಾಲೋನಿ, ಬೈರಪ್ಪ ಬ್ಲಾಕ್, ಮೌಂಟ್ ಜಾಯ್ ಎಕ್ಸ್ ಟೆನ್‌ಷನ್, ಅಶೋಕ್ ನಗರ, ಬನಶಂಕರಿ ಒಂದನೇ ಹಂತ, ಶ್ರೀನಗರ, ಬೃಂದಾವನನಗರ, ಸುಂಕೇನಹಳ್ಳಿ, ಕುಮಾರಸ್ವಾಮಿ ಲೇಔಟ್ ೧ನೇ ಹಂತ ಮತ್ತು ೨ ನೇ ಹಂತ, ಇಸ್ರೋ ಲೇಔಟ್, ಸಮೃದ್ಧಿ ಲೇಔಟ್, ಇಲಿಯಾಸ್ ನಗರ, ರಾಜ್ಯೋತ್ಸವ ನಗರ, ವಿಠಲ್ ನಗರ, ಶಾಂತಲಾ ನಗರ, ಶಾಂತಿನಗರ, ವಿನಾಯಕನಗರ, ಆನೆಪಾಳ್ಯ, ಎಲ್.ಆರ್.ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್ ಟೌನ್, ಈಜೀಪುರ, ವಿವೇಕ್ ನಗರ, ಅಶೋಕ್ ನಗರ, ರಿಚ್‌ಮಂಡ್ ಟೌನ್, ಎಂಜಿ.ರೋಡ್, ಬ್ರಿಗೇಡ್ ರಸ್ತೆ, ಜೆ.ಕೆ ಪುರಂ, ಎಂ.ವಿ ಗಾರ್ಡನ್, ವಿಕ್ಟೋರಿಯಾ ಲೇಔಟ್, ಮಾಯಾ ಬಜಾರ್, ದೊಮ್ಮಲೂರು, ದೊಮ್ಮಲೂರು ವಿಲೇಜ್ ಪ್ರದೇಶಗಳಲ್ಲಿ ನಾಳೆ ನೀರು ವ್ಯತ್ಯಯವಾಗಲಿದೆ” ಎಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕರ್ತವ್ಯದ ವೇಳೆ ಮಲಗಿದ್ದ ಇಬ್ಬರು ಪೊಲೀಸ್ ಪೇದೆ ಅಮಾನತು
“ದೊಮ್ಮಲೂರು ಲೇಔಟ್, ಕಮಾಂಡ್ ಆಸ್ಪತ್ರೆ, ದೊಮ್ಮಲೂರು ೨ನೇ ಹಂತ, ಎಚ್‌ಎಎಲ್ ೨ನೇ ಹಂತ ಅಮರಜ್ಯೋತಿ ಲೇಔಟ್, ಕಾರ್ಪೋರೇಷನ್ ಕ್ವಾರ್ಟಸ್, ಕೊಡಿಹಳ್ಳಿ, ಎಂ.ಜಿ.ರಸ್ತೆ, ಹನುಮಂತಪ್ಪ ಲೇಔಟ್, ಗಂಗಾಧರ್ ಚೆಟ್ಟಿ, ರಸ್ತೆ, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗು ಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಗೌತಮಪುರ, ಧೀನಬಂಧುನಗರ, ರಾಜೇಂದ್ರ ನಗರ, ರಾಜೇಂದ್ರ ನಗರ ಸ್ಲಮ್, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ನಂಜಪ್ಪ ರೆಡ್ಡಿ ಲೇಔಟ್, ಕೆ.ಆರ್. ನಂಜಪ್ಪ ಲೇಔಟ್, ಎನ್.ಆರ್.ಡಿ.ಐ. ಕ್ಯಾಂಪಸ್, ಆಡುಗೋಡಿ, ಕಾವೇರಿ ಸಂಕಿರ್ಣ, ಪೋಲಿಸ್ ಕ್ವಾಟರ್ಸ್, ನೇತ್ರಾವತಿ 1 ರಿಂದ 10 ಬ್ಲಾಕ್‌ಗಳು, ನಂದಿ ಸಂಕೀರ್ಣ1 ರಿಂದ 32 ಬ್ಲಾಕ್‌ಗಳು ಮತ್ತು ಟಿಪ್ಪು ಬ್ಲಾಕ್‌ಗಳು, ಕೋರಮಂಗಲ, ಕೆ.ಆರ್.ಗಾರ್ಡನ್, ಕೆ.ಹೆಚ್ ಬಿ ಕಾಲೋನಿ, ಜಾನ್ ನಗರ, ಕೋರಮಂಗಲ ವಿಲೇಜ್, ಕೋರಮಂಗಲ 8ನೇ ಬ್ಲಾಕ್, ಪಾರ್‌ಸಿಯಲ್ ಎನ್.ಜಿ.ವಿ, ಜಯನಗರ 3ನೇ ಬ್ಲಾಕ್, 4ನೇ ಬ್ಲಾಕ್ ಮತ್ತು 4ನೇ ‘ಟಿ’ ಬ್ಲಾಕ್, ತಿಲಕ್ ಎಸ್.ಆರ್ ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್ ಮತ್ತು ಆಡುಗೋಡಿ, ವೆಂಕಟೇಶ್ವರ ಲೇಔಟ್, ಎಸ್.ಜಿ.ಪಾಳ್ಯ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೋನಿ, ಸೆಂಟ್ ವುಡ್ ಅಪಾರ್ಟ್ ಮೆಂಟ್, ಚಿಕ್ಕ ಆಡುಗೋಡಿ, ಬೃಂದಾವನಗಳಲ್ಲಿ ನೀರಿನ ಕೊರತೆ ಇರಲಿದೆ” ಎಂದು ತಿಳಿಸಿದೆ.