ಕರ್ನಾಟಕದ ನೂತನ ಪೊಲೀಸ್ ಮುಖ್ಯಸ್ಥ ಎಂ.ಎ ಸಲೀಂ ಯಾರು?

Date:

Advertisements

ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ(ಡಿಜಿ-ಐಜಿಪಿ) ಹುದ್ದೆಗೆ ಎಂ.ಎ ಸಲೀಂ ಅವರು ನೇಮಕಗೊಂಡಿದ್ದಾರೆ. ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಬರೋಬ್ಬರಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಸುಮಾರು 26 ವಿಭಿನ್ನ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಈಗ, ರಾಜ್ಯದ ಪೊಲೀಸ್‌ ಪಡೆಯನ್ನು ಮುನ್ನಡೆಸುವ ಉನ್ನತ ಹುದ್ದೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಎಂ.ಎ ಸಲೀಂ ಅವರು ಮೂಲತಃ ಕರ್ನಾಟಕದವರು. ಕನ್ನಡಿಗರು. ಸಲೀಂ ಅವರು ಜನಿಸಿದ್ದು 1966ರ ಜೂನ್‌ 25ರಂದು. ಅವರ ಹುಟ್ಟೂರು ಅಂದು ಕುಗ್ರಾಮವಾಗಿದ್ದ, ಇಂದು ಜನನಿಬಿಡ ಉಪನಗರವಾಗಿ ಬೆಳೆದುನಿಂತಿರುವ ಬೆಂಗಳೂರಿನ ಚಿಕ್ಕಬಾಣಾವರ.

1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಲೀಂ ಅವರು ವಾಣಿಜ್ಯ ಮತ್ತು ಪೊಲೀಸ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಸಂಚಾರ ನಿರ್ವಹಣೆಗೆ ಸಂಬಂಧಿಸಿದಂತೆ ತೀವ್ರ ಆಸಕ್ತಿ ಹೊಂದಿದ್ದ ಅವರು, ಇದೇ ವಿಷಯದ ಮೇಲೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿಯನ್ನೂ ಪಡೆದಿದ್ದಾರೆ.

Advertisements

ಪೊಲೀಸ್ ಇಲಾಖೆಗೆ ಸೇರಿದ ಹೊಸತರಲ್ಲಿ ಸಲೀಂ ಅವರು ಉಡುಪಿ ಮತ್ತು ಹಾಸನ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ನಂತರ ಪೊಲೀಸ್ ಮಹಾನಿರ್ದೇಶಕರಾಗಿ (ಪೂರ್ವ ವಲಯ) ಮತ್ತು ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಉಪ ಪೊಲೀಸ್ ಆಯುಕ್ತರಾಗಿ (ಸಂಚಾರ, ಪೂರ್ವ), ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಸಂಚಾರ ಮತ್ತು ಭದ್ರತೆ), ವಿಶೇಷ ಪೊಲೀಸ್ ಆಯುಕ್ತರಾಗಿ (ಸಂಚಾರ) ಸೇವೆ ಸಲ್ಲಿಸಿದ್ದಾರೆ.

ಭಷ್ಟ್ರಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿಯೂ, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿಯೂ (ಅಪರಾಧ ಮತ್ತು ಆಡಳಿತ) ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಅವರು ಅಪರಾಧ ತನಿಖಾ ಇಲಾಖೆ (ಸಿಐಡಿ), ಬೆಂಗಳೂರಿನ ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಮಹಾನಿರ್ದೇಶಕರಾಗಿದ್ದರು. ಇದೀಗ, ಅವರನ್ನು ಪೊಲೀಸ್‌ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಬೆಂಗಳೂರಿನ ತೀವ್ರ ಸಂಚಾರ ಸಮಸ್ಯೆಯನ್ನು ಪರಿಹರಿಸಲು ಸಲೀಂ ಅವರನ್ನು ವಿಶೇಷ ಪೊಲೀಸ್ ಆಯುಕ್ತರಾಗಿ 2022ರ ನವೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇಮಿಸಿದ್ದರು. ಬೆಂಗಳೂರಿನ ಸಂಚಾರ ದಟ್ಟಣೆಯ ಬಗ್ಗೆ ಆಳವಾಗಿ ಅರಿತಿದ್ದ ಅವರು ನಗರದ ಸಂಚಾರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ.

ಬೆಂಗಳೂರಿನ ಸಂಚಾರ ಪೊಲೀಸ್ ಮುಖ್ಯಸ್ಥರಾಗಿ, 122 ರಸ್ತೆಗಳಲ್ಲಿ ಏಕಮುಖ ರಸ್ತೆಗಳನ್ನಾಗಿ ಬದಲಾವಣೆ, ಶಾಲೆಗಳ ಆಸು-ಪಾಸಿನ ರಸ್ತೆಗಳನ್ನು ಸುರಕ್ಷಿತ ಮಾರ್ಗಗಳನ್ನಾಗಿ ಪರಿವರ್ತನೆ, ಸ್ವಯಂಚಾಲಿತ ಸಂಚಾರ ಚಲನ್ ವ್ಯವಸ್ಥೆ, ಸ್ಥಳೀಯ ಪ್ರದೇಶ ಸಂಚಾರ ನಿರ್ವಹಣಾ ಯೋಜನೆಗಳು ಹಾಗೂ ಸಂಚಾರ ನಿಯಮ ಜಾರಿಗಾಗಿ ‘ಪಬ್ಲಿಕ್ ಐ’ನಂತಹ ನಾಗರಿಕ ಸಹಭಾಗಿತ್ವದ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಸಲೀಂ ಅವರದ್ದು.

ಅಲ್ಲದೆ, ಮಹಿಳೆಯರು (ಸ್ಪಂದನ), ಮಕ್ಕಳು (ಮಕ್ಕಳ ಸಹಾಯವಾಣಿ) ಹಾಗೂ ವೃದ್ಧರಿಗಾಗಿ (ಆಸರೆ ಮತ್ತು ಅಭಯ) ಸಹಾಯವಾಣಿಗಳು, ಗರುಡ ಪೊಲೀಸ್ ಗಸ್ತುಗಾಗಿ ಸಹಾಯವಾಣಿಗಳನ್ನು ತೆರೆದ ಹೆಗ್ಗಳಿಕೆಯೂ ಸಲೀಂ ಅವರದ್ದೇ ಆಗಿದೆ.

ಸಲೀಂ ಅವರು ಗಂಭೀರ ಪ್ರಕರಣಗಳು ಮತ್ತು ಭಾರೀ ಹಗರಣಗಳ ತನಿಖೆಯನ್ನೂ ನಡೆಸಿದ್ದಾರೆ. ಅವುಗಳಲ್ಲಿ 74,000ಕ್ಕೂ ಹೆಚ್ಚು ಜನರಿಗೆ ವಂಚಿಸಲಾಗಿದ್ದ ಐಎಂಎ ಹಗರಣ, ತನ್ನ ಕಾಮವಾಂಛೆಗಾಗಿ ಹಲವಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 94 ಕೋಟಿ ರೂ.ಗಳ ದುರುಪಯೋಗ ಹಗರಣ ಹಾಗೂ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ ಮೊದಲಾದವು.

ಇದನ್ನೂ ಓದಿದ್ದೀರಾ? ಹೇಡಿಯ ಕೊನೆಯ ಅಸ್ತ್ರವೇ ಅಪಪ್ರಚಾರ, ವೈಯಕ್ತಿಕ ನಿಂದನೆ: ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ತಿರುಗೇಟು

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಸಲೀಂ ಅವರು 2017ರಲ್ಲಿ ವಿಶಿಷ್ಟ ಸೇವೆಗಳಿಗಾಗಿ ‘ರಾಷ್ಟ್ರಪತಿಗಳ ಪೊಲೀಸ್ ಪದಕ’, 2009ರಲ್ಲಿ ಪ್ರತಿಭಾನ್ವಿತ ಸೇವೆಗಳಿಗಾಗಿ ‘ರಾಷ್ಟ್ರಪತಿಗಳ ಪೊಲೀಸ್ ಪದಕ’, ಭಾರತ ಸರ್ಕಾರದಿಂದ ‘ಇ-ಆಡಳಿತ ರಾಷ್ಟ್ರೀಯ ಪ್ರಶಸ್ತಿ’ ಹಾಗೂ 2021ರಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋದಿಂದ ‘ಪ್ರಶಂಸಾ ಪತ್ರ’ಗಳಿಗೆ ಭಾಜನರಾಗಿದ್ದಾರೆ.

ರಸ್ತೆ ಸುರಕ್ಷತೆಗೆ ನೀಡಿದ ಕೊಡುಗೆಗಾಗಿ ಅವರಿಗೆ ಐಆರ್‌ಟಿಇ ಸಂಸ್ಥೆಯು ‘ಪ್ರಿನ್ಸ್ ಮೈಕೆಲ್ ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಶಸ್ತಿ’ ನೀಡಿ ಗೌರವಿಸಿದೆ. ಸಲೀಂ ಅವರು ಅಮೆರಿಕದ ಲೂಸಿಯಾನ ರಾಜ್ಯ ಪೊಲೀಸ್ ಅಕಾಡೆಮಿಯಲ್ಲಿ ಭಯೋತ್ಪಾದನಾ ವಿರೋಧಿ ಸಹಾಯ ಕಾರ್ಯಕ್ರಮದಡಿಯಲ್ಲಿ ತರಬೇತಿ ಪಡೆದ ಭಾರತೀಯ ಪೊಲೀಸ್ ಅಧಿಕಾರಿಗಳ ನಿಯೋಗದ ನಾಯಕರೂ ಆಗಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X