ಜೆಕ್‌ನ ಪ್ರಸಿದ್ಧ ಸಾಹಿತಿ ಮಿಲನ್‌ ಕುಂದೇರಾ ನಿಧನ  

Date:

Advertisements

ಜೆಕ್‌ ಮೂಲದ ಸಾಹಿತಿ, “ದಿ ಅನ್‌ಬೇರಬಲ್‌ ಲೈಟ್‌ನೆಸ್‌ ಆಫ್‌ ಬೀಯಿಂಗ್” ಕಾದಂಬರಿಯ ಲೇಖಕ, ಕಾದಂಬರಿಕಾರ, ನಾಟಕಕಾರ ಮಿಲನ್‌ ಕುಂದೇರಾ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ತಮ್ಮ ಕಾದಂಬರಿಗಳು, ವಿಶಿಷ್ಟ ಬರವಣೆಗೆಯ ಶೈಲಿಯ ಮೂಲಕ ಜನಪ್ರಿಯರಾಗಿದ್ದ ಕುಂದೇರಾ ಅವರು ಜೆಕ್‌ನ ಬ್ರನೋ ಪಟ್ಟಣದಲ್ಲಿ ಏಪ್ರಿಲ್ 1, 1929 ರಂದು ಜನಿಸಿದ್ದರು.

1968ರಲ್ಲಿ ಜೆಕೊಸ್ಲೊವಾಕಿಯಾದ ಮೇಲೆ ಸೋವಿಯತ್‌ ಅತಿಕ್ರಮಣವನ್ನು ಟೀಕಿಸಿದ್ದಕ್ಕೆ ಬಹಿಷ್ಕಾರಗೊಂಡ ನಂತರ ಅವರು 1975ರಲ್ಲಿ ಫ್ರಾನ್ಸ್‌ಗೆ ವಲಸೆ ಹೋಗಿದ್ದರು.

Advertisements

ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಮಿಲೋಸ್ ಫಾರ್ಮನ್ ಸೇರಿದಂತೆ ಹಲವು ಖ್ಯಾತನಾಮರಿಗೆ ಅವರು ಸಿನಿಮಾ, ನಾಟಕಗಳ ಬಗ್ಗೆ ಪಾಠ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ? ದೇವರ ಹುಂಡಿಯಲ್ಲಿ 5 ಸಾವಿರ ರೂ. ಕದ್ದ ಕಳ್ಳ; ಕಾಣಿಕೆಯಾಗಿ ದೇವರ ಪಾದಕ್ಕೆ ಎಷ್ಟು ಹಣವಿಟ್ಟ ಗೊತ್ತಾ?

ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಸಿನಿಮಾ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಅವರು 1953 ರಿಂದ ಕಾದಂಬರಿಗಳು ಮತ್ತು ನಾಟಕಗಳನ್ನು ಬರೆಯಲು ಶುರು ಮಾಡಿದರು.

ದಿ ಜೋಕ್, ದಿ ಬುಕ್‌ ಆಫ್ ಲಾಫ್ಟರ್, ದಿ ಬುಕ್ ಆಫ್ ಲಾಫ್ಟರ್ ಅಂಡ್ ಫರ್ಗೆಟಿಂಗ್, ದಿ ಅನ್‌ಬೇರಬಲ್ ಲೈಟ್‌ನೆಸ್ ಆಫ್ ಬೀಯಿಂಗ್ ಮಿಲನ್‌ ಕುಂದೇರಾ ಅವರ ಪ್ರಸಿದ್ಧ ಕೃತಿಗಳಾಗಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

ಟ್ರಂಪ್‌ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ

ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ...

Download Eedina App Android / iOS

X