ತಮ್ಮ ನುಡಿಯನ್ನು ಉಳಿಸಿಕೊಳ್ಳಲೇಬೇಕಾದ ತೀವ್ರ ಹಂಬಲದಲ್ಲಿ ನಡೆದ ಭಾಷಾ ಚಳವಳಿಗಳಿಗೆ ಹಲವು ಆಯಾಮದ ಇತಿಹಾಸವಿದೆ. ಭಾಷಾ ಚಳವಳಿಯೇ ಒಂದು ಪ್ರತ್ಯೇಕ ರಾಷ್ಟ್ರ ಚಳವಳಿಯಾಗಿ ಬದಲಾಗಿ ಬಾಂಗ್ಲಾದೇಶ ಎಂಬ ಹೊಸ ದೇಶ ನಿರ್ಮಾಣವಾಗಿದ್ದನ್ನು ನಾವು ನೋಡಿದ್ದೇವೆ. ಜನರ ತಾಯ್ನುಡಿಗಳನ್ನು ಅವರ ಭಾವಕೋಶದಿಂದ ಪ್ರತ್ಯೇಕಿಸಿ ನೋಡಲಾಗದು. ಹೀಗಾಗಿಯೇ ಆತನ/ಆಕೆಯ ನುಡಿಗೆ ಸಂಚಕಾರ ಬಂದಾಗೆಲ್ಲ ಅವರು ಸಿಡಿದುನಿಂತಿದ್ದಾರೆ. ಮನುಷ್ಯ ಧಾರ್ಮಿಕವಾಗಿ ಬೇರೆ ಬೇರೆ ಮತಪಂಥ ಧರ್ಮಗಳನ್ನು ಅನುಸರಿಸಬಹುದು, ತನ್ನ ಧರ್ಮನಿಷ್ಠೆಯನ್ನು ಬೇಕೆಂದಾಗೆಲ್ಲ ಬದಲಾಯಿಸಬಹುದು. ಆದರೆ ನುಡಿ ಹಾಗಲ್ಲ, ಅದು ಕರುಳಿನ ಬಂಧ….

ದಿನೇಶ್ ಕುಮಾರ್ ಎಸ್.ಸಿ.
ದಿನೂ ಎಂದೇ ಪರಿಚಿತರಾದ ದಿನೇಶ್ ಕುಮಾರ್ ಎಸ್ ಸಿ ಮೂಲತಃ ಸಕಲೇಶಪುರದವರು. ಸಾಮಾಜಿಕ ಕಾಳಜಿ ಬೆರೆತ ಪತ್ರಿಕೋದ್ಯಮವನ್ನು ಮಾಡುತ್ತಾ, ಬಹಳ ಚಿಕ್ಕ ವಯಸ್ಸಿನಲ್ಲಿಯೇ ಇಂದು ಸಂಜೆ ಎಂಬ ಸಂಜೆ ಪತ್ರಿಕೆಯ ಸಂಪಾದಕರಾಗಿ ಹೆಸರು ಮಾಡಿದರು. ನಂತರ ಕರವೇ ನಲ್ನುಡಿಯ ಸಂಪಾದಕರಾಗಿ, ಕನ್ನಡ ಚಳವಳಿಯ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡರು. ತಮ್ಮ ಚುರುಕಾದ ತೀಕ್ಷ್ಣ ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧರಾದ ಅವರು, ಕನ್ನಡ ಚಳವಳಿಯೊಳಗೆ ಸಾಮಾಜಿಕ ನ್ಯಾಯದ ಮತ್ತು ಬ್ರಾಹ್ಮಣಶಾಹಿ ವಿರುದ್ಧದ ಆಲೋಚನೆಗಳನ್ನೂ ಪಸರಿಸಿದವರಲ್ಲಿ ಪ್ರಮುಖರು. ಸದ್ಯ ಕನ್ನಡ ಪ್ಲಾನೆಟ್ ವೆಬ್‌ಸೈಟ್‌ನ ಪ್ರಧಾನ ಸಂಪಾದಕರಾಗಿದ್ದಾರೆ.