ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಯ ಒಳಗೆ ನುಗ್ಗಿ ನೀರು ರಾತ್ರಿ ಎಲ್ಲಾ ಮಲಗಲು ಆಗಿಲ್ಲ. ಅಲ್ಲಿನ ಜನರು ಏನು ಮಾಡಬೇಕು ಎಂದು ಭಯದಿಂದ ಬೇರೆಯವರ ಮನೆಗೆ ಹೋಗಿ ಆಶ್ರಯ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಹಿರೇಹಣಜಿ ಗ್ರಾಮದಲ್ಲಿ ನಿನ್ನೆ ಸುರಿದ ಮಳೆ ನೀರು ಮೆನೆಗೆ ಹೋಗಿದ್ದು ಜನರು ಕಂಗಾಲಾಗಿದ್ದಾರೆ.
“ಜನಪ್ರತಿನಿಧಿಗಳು, ಹಾಗೂ ಅಧಿಕಾರಿ ವರ್ಗದವರು ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು” ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿ-ಕೊಂಡಿದ್ದಾರೆ. ಚಂದ್ರಪ್ಪ ಬಿಳಕಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಿರೇಹಣಜಿ, ಹನುಮಗೌಡ್ರು ಅಡವಿಯವರು, ಪುಟ್ಟವ್ವ ಬಸವರಾಜ ಹರಿಜನ, ಗ್ರಾಮ ಪಂಚಾಯತಿ ಸದಸ್ಯರು ಶಿವಪ್ಪ ಹರಿಜನ, ಈರಪ್ಪ ಹರಿಜನ, ಪ್ರಕಾಶ ಹರಿಜನ, ಇನ್ನು ಮುಂತಾದವರು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಮಳೆಗೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಹಣಜಿ ಗ್ರಾಮದ ಅಂಬೇಡ್ಕರ್ ಕಾಲೋನಿ ಗೆ ನೀರು ನುಗ್ಗಿ ಅಂಬೇಡ್ಕರ್ ಕಾಲೋನಿಯು ನೀರಿನಿಂದ ಜಲಾವೃತಗೊಂಡಿದೆ. ಬಾರಿ ಮಳೆಯಿಂದಾಗಿ ಮನೆಗಳು ಬಿದ್ದಿದ್ದು ಮನೆಯಲ್ಲಿನ ದವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಬಡ ಕುಟುಂಬಗಳು ಬೀದಿಗೆ ಬಂದಿವೆ.
