ವಿಜಯನಗರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹೊಸಪೇಟೆ ತಾಲೂಕಿನ ಬೈಲುವದ್ದಿಗೆರಿ ಗ್ರಾಮದ ಬಳಿ ಪ್ರವಾಹದ ರಭಸಕ್ಕೆ ವಿದ್ಯುತ್ ಇಲಾಖೆಯ ಮಹೇಂದ್ರ ಗೂಡ್ಸ್ ವಾಹನ ಕೊಚ್ಚಿ ಹೋಗಿದೆ. ಈ ವೇಳೆ ಸ್ಥಳೀಯ ಯುವಕರು ತಕ್ಷಣ ಧಾವಿಸಿ ಅದರಲ್ಲಿದ್ದ ನೌಕರರ ಪ್ರಾಣ ರಕ್ಷಿಸಿದ್ದಾರೆ.
ಜತೆಗೆ ಕೊಟ್ಟೂರು, ಕೂಡ್ಲಿಗಿ, ಹೊಸಪೇಟೆ ಸೇರಿದಂತೆ ಹಲವೆಡೆ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಳ್ಳ-ಕೊಳ್ಳಗಳೆಲ್ಲವೂ ತುಂಬಿ ಹರಿಯುತ್ತಿವೆ.

ಈ ಮಧ್ಯೆ ಹವಾಮಾನ ಇಲಾಖೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂದಿನ ಒಂದು ವಾರದವರೆಗೆ ಆರೆಂಜ್ ಅಲರ್ಟ್’ ಘೋಷಿಸಿದೆ.