ಜೋಳ ಖರೀದಿ ಸಂಬಂಧ ರೈತರ ಪ್ರತಿಭಟನೆಯ ಮನವಿ ಸ್ವೀಕರಿಸಲು ಬಂದ ಆಹಾರ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರಾ ಅವರನ್ನು ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಸಾರ್ವಜನಿಕರ ಎದುರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಿನ್ನೆ ಮಾನ್ವಿ ನಗರದಲ್ಲಿ ರೈತ ಸಂಘದ ವತಿಯಿಂದ ಜೋಳ ಖರೀದಿ ಸಂಬಂಧಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಹೋರಾಟದ ಮನವಿ ಸ್ವೀಕರಿಸಲು ಆಹಾರ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಹೋದಾಗ ಸಾರ್ವಜನಿಕರ ಮುಂದೆ ಇಲ್ಲಸಲ್ಲದ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಕೆಲಸಕ್ಕೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಇದರಿಂದ ನೌಕರರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ನೌಕರರು, ತಾಲ್ಲೂಕು ಹಂತದ ಅಧಿಕಾರಿಗಳು ಮತ್ತು ನೌಕರರು ಸರ್ಕಾರದ ನಿಯಮಾವಳಿಗಳಂತೆ ಉತ್ತಮವಾದ ಕೆಲಸ ಕಾರ್ಯಗಳು ಮಾಡುತ್ತಿದ್ದರು ಸಹ ಕೆಲವೊಂದು ಸಂಘ ಸಂಸ್ಥೆಯವರು ಅನಗತ್ಯವಾಗಿ ಪ್ರತಿಭಟನೆ ಹಾಗೂ ಅನಾಮೇಧ ದೂರಿನ ಹೆಸರಿನಲ್ಲಿ ನೌಕರರಿಗೆ ಕಿರುಕುಳ ನೀಡುತ್ತಾ, ಪದೇ ಪದೇ ಇಂತಹ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಾಳೆಯಿಂದ ಚಿಂತನ-ಮಂಥನ ಕಾರ್ಯಕ್ರಮ
ಪೂರಕ ದಾಖಲೆಗಳಲ್ಲದೇ ಕೇವಲ ದೂರಿನ ಆಧಾರದ ಮೇಲೆ ಸರ್ಕಾರಿ ನೌಕರರಿಗೆ ಕಿರುಕುಳ ನೀಡುತ್ತಿರುವುದನ್ನು ತಪ್ಪಿಸಿ ಸದರಿಯವರೆಲ್ಲರ ಮೇಲೆ ಸೂಕ್ತ ಕ್ರಮಕೈಗೊಂಡು ಸರ್ಕಾರಿ ನೌಕರರು ನಿರ್ಭಯದಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಶಿವಣ್ಣ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ, ಪ್ರಮುಖರಾದ ಶಂಕರಗೌಡ ಪಾಟೀಲ್, ಭೀಮೇಶ, ಮಲ್ಲೇಶ ಭಂಡಾರಿ, ಚಂದ್ರಶೇಖರ ರೆಡ್ಡಿ, ಆಂಜನೇಯ್ಯ, ರಾಜವರ್ಧನ ರೆಡ್ಡಿ, ಮಲ್ಲಿಕಾರ್ಜುನ, ಮಹಾದೇವ ಪಾಟೀಲ್, ಯಂಕಪ್ಪ ಪಿರಂಗಿ, ಹನುಮಂತ್ರಾಯ, ಧನಲಕ್ಷ್ಮಿ ಛಾಯಾದೇವಿ, ಮಹೇಶ್ವರಿ, ವೈ.ಕೆ.ಯಶೋದಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.