“ರಾಜ್ಯದಲ್ಲಿ ಹಿಟ್ಲರ್ ಸರ್ಕಾರದ ಆಡಳಿತ ಸಂಪೂರ್ಣ ಹಳಿ ತಪ್ಪಿದ್ದು, ಅರಾಜಕತೆ ತಾಂಡವವಾಡುತ್ತಿದೆ” ಎಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಪೂರ್ವನಿಯೋಜನೆಯಿಂದ ದುರುದ್ದೇಶಪೂರ್ವಕವಾಗಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಕಾಂಗ್ರೆಸ್ ತನ್ನ ಗೂಂಡಾಗಳನ್ನು ಬಿಡುವುದಷ್ಟೇ ಅಲ್ಲದೆ ರಕ್ಷಣೆಯನ್ನೂ ಕೊಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ಕುತಂತ್ರವನ್ನು ಇದೇ ರೀತಿ ಮುಂದುವರೆಸಿದರೆ, ನಾವು ಎಲ್ಲ ರೀತಿಯಲ್ಲೂ ಹೋರಾಡಲು ಸಿದ್ಧರಿದ್ದೇವೆ” ಎಂದು ಎಚ್ಚರಿಕೆ ನೀಡಿದೆ.

“ಗ್ಯಾರಂಟಿಯಲ್ಲೂ ಮೋಸ ಮಾಡಿ, ರಾಜ್ಯದ ಬೊಕ್ಕಸವನ್ನೂ ಖಾಲಿ ಮಾಡಿ, ಹಿಂದೆಂದೂ ಮಾಡಿರದಷ್ಟು ಸಾಲ ಮಾಡಿದ ಸಿದ್ದರಾಮಯ್ಯ ಅವರು ತಮ್ಮ ಅಭಿವೃದ್ಧಿ ಶೂನ್ಯತೆಯನ್ನು ಮರೆಮಾಚಲು ಅರಾಜಕತೆ ಸೃಷ್ಟಿಗೆ ದಾರಿ ಮಾಡಿಕೊಟ್ಟಿದ್ದಾರೆ. ಸಂಬಂಧವಿಲ್ಲದ ಮಂತ್ರಿಗಳೆಲ್ಲ ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿ ಅವರ ಆತ್ಮಸ್ಥೈರ್ಯವನ್ನು ಕುಂದಿಸಿದ್ದಾರೆ. ಎಟಿಎಂ ಸರ್ಕಾರದಿಂದಾಗಿ ರಾಜ್ಯಾದ್ಯಂತ ಹಿಂಸೆ ತಾಂಡವವಾಡುತ್ತಿದೆ” ಎಂದು ಬಿಜೆಪಿ ಆರೋಪಿಸಿದೆ.

“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯ ಅಪ್ರಬುದ್ಧ ಜಾರಿಯಿಂದಾಗಿ ನೂರೆಂಟು ಸಮಸ್ಯೆಗಳು ಎದುರಾಗಿವೆ. ಎಟಿಎಂ ಸರ್ಕಾರದಿಂದ ಸೂಕ್ತ ಅನುದಾನ ಸಿಗದೆ ರಾಜ್ಯದ ನಾಲ್ಕು ನಿಗಮಗಳು ಆರ್ಥಿಕ ಚೈತನ್ಯ ಕಳೆದುಕೊಂಡು ದಿವಾಳಿಯತ್ತ ಮುಖಮಾಡಿವೆ” ಎಂದು ದೂರಿದೆ.
“ಇದರ ನಡುವೆ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು, ನಿರ್ವಾಹಕರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಪರ್ಯಾಯ ಮಾರ್ಗ ಕಂಡುಕೊಡದೆ. ಸಿದ್ದರಾಮಯ್ಯ ಅವರ ಸರ್ಕಾರ ಇವರನ್ನೆಲ್ಲ ಬೀದಿಗೆ ತಳ್ಳಿ ಈಗ ಸಂಭ್ರಮಿಸುತ್ತಿದೆ” ಎಂದು ಬಿಜೆಪಿ ಕಿಡಿಕಾರಿದೆ.

ಈ ಸುದ್ದಿ ಓದಿದ್ದೀರಾ? ನಮ್ಮ ಪ್ರಧಾನಿಗಳನ್ನು ಕೇಳುವ ಧೈರ್ಯ ನಮಗಿದೆ; 15 ಲಕ್ಷ ರೂ.ಗೆ ದಾಖಲೆ ಕೊಡಿ: ಯತ್ನಾಳ್ ಸವಾಲು
“ಕಳಪೆ ಆಹಾರ ಕೊಡುವುದೂ ಒಂದೇ, ಕೈಯಾರೆ ವಿಷ ಉಣಿಸುವುದೂ ಒಂದೇ. ಅದರಲ್ಲೂ ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕತೆ ಹೆಸರಲ್ಲಿ ವಿಷ ಪೂರಣವು ನಾಗರಿಕ ಸಮಾಜವೇ ತಲೆತಗ್ಗಿಸುವ ಕೆಲಸ. ಆದರೆ, ಸಾಮಾಜಿಕ ಪ್ರಜ್ಞೆಯನ್ನೇ ಮರೆತ ಸಿದ್ದರಾಮಯ್ಯ ನೇತೃತ್ವದ ಅಮಾನುಷ ಸರ್ಕಾರಕ್ಕೆ ವಾರದ ಕಲೆಕ್ಷನ್ ಸಂದಾಯವಾದರೆ ಆಯಿತು” ಎಂದು ಟೀಕಿಸಿದೆ.
ಅವರು ಇನ್ನೂ ಕನಸಿನ ಲೋಕದಿಂದ ಹೊರ ಬಂದಿಲ್ಲ,. ಒಟ್ಟು ನಿರಾಶೆ ಮತ್ತು ಹತಾಶರಾಗಿ
ಹೇಳುವುದರ ಅರಿವಿಲ್ಲದೆ ಮಾತನಾಡುತ್ತಿದ್ದಾರೆ.