ಮಹಾರಾಷ್ಟ್ರ ಸರ್ಕಾರ ಹಾಗೂ ಆ ಭಾಗದ ಜನಸಾಮಾನ್ಯರ ಹೋರಾಟಕ್ಕೆ ಕರ್ನಾಟಕ ಸರ್ಕಾರ ಮಣಿಯದೆ ಆಲಮಟ್ಟಿ ಜಲಾಶಯದ ಮಟ್ಟವನ್ನು 524.256ಕ್ಕೆ ಹೆಚ್ಚಿಸಲು ಶೀಘ್ರ ಕ್ರಮ ಕೈಗೊಳ್ಳವಂತೆ ಆಗ್ರಹಿಸಿ ರೈತ ಸಂಘಟನೆ ಮುಖಂಡರು ವಿಜಯಪುರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, “ಆಲಮಟ್ಟಿ ಡ್ಯಾಂ ನೀರಿನ ಮಟ್ಟವನ್ನು 524.256ಕ್ಕೆ ಹೆಚ್ಚಿಸಿ ನೀರು ನಿಲ್ಲಿಸಲು ಗೇಟ್ ಅಳವಡಿಸದಂತೆ ಇತ್ತೀಚಿಗೆ ಮಹಾರಾಷ್ಟ್ರದ ರೈತರು ಕರ್ನಾಟಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. 524.256ಕ್ಕೆ ನೀರು ಎತ್ತರಿಸಿದರೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಹಿನ್ನೀರಿನಿಂದ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆಂದಬ ತಪ್ಪು ತಿಳುವಳಿಕೆಯಿಂದ ಹೋರಾಟಮಾಡುತ್ತಿದ್ದಾರೆ” ಎಂದು ಹೇಳಿದರು.
“ಕಳೆದ 2019ರಲ್ಲಿಯೇ ಪ್ರವಾಹ ಬಂದಾಗ ಆಲಮಟ್ಟಿಯ ಡ್ಯಾಂ ಮೇಲೆ ಗೂಬೆ ಕೂರಿಸಿದ್ದರು. 519.60 ಮೀ.ಗೆ ನೀರು ನಿಲ್ಲಿಸಿದ್ದರಿಂದಲೇ ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆಯೆಂದು ಕ್ಯಾತೆ ತೆಗೆದಿದ್ದರು. ಆಗ ಮಹಾರಾಷ್ಟ್ರ ಸರ್ಕಾರ ಒಡ್ನರ ನೇತೃತ್ವದ ತಂಡವನ್ನು ಆಲಮಟ್ಟಿಗೆ ಕಳುಹಿಸಿತ್ತು. ಆ ತಂಡ ಪರಿಸ್ಥಿತಿ ಅವಲೋಕಿಸಿ ಆಲಮಟ್ಟಿ ನೀರಿನಿಂದ ಪ್ರವಾಹ ಉಂಟಾಗಿಲ್ಲವೆಂದು ಸ್ಪಷ್ಟ ವರದಿ ನೀಡಿತ್ತು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ ಅಭಿವೃದ್ಧಿಯಲ್ಲಿ ಶಿವಾನಂದ ಪಾಟೀಲರ ಪಾತ್ರ ಎಳ್ಳಷ್ಟೂ ಇಲ್ಲ: ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ
ರೈತ ಮುಖಂಡ ವಿಜಯ ಪೂಜಾರ್ಹಿ ಮಾತನಾಡಿ, “ಕರ್ನಾಟಕ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಮಹಾರಾಷ್ಟ್ರ ಸರ್ಕಾರದ ಒತ್ತಡಕ್ಕೆ ಮಣಿಯದೆ ಆಲಮಟ್ಟಿ ಡ್ಯಾಂ ನೀರಿನ ಮಟ್ಟವನ್ನು 524.256ಕ್ಕೆ ನಿಲ್ಲಿಸಲು ಕೂಡಲೇ ಗೇಟ್ ಅಳವಡಿಸಬೇಕು. ನೀರು ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ರೈತ ಮುಖಂಡರಾದ ವಿಠಲ ಬಿರಾದಾರ, ರಾಜೇಸಾಬ ವಾಲಿಕಾರ, ದಾವಲಸಾಬ ನದಾಫ, ಗುರುಲಿಂಗಪ್ಪ ಪಡಸಲಗಿ, ನಾಗಪ್ಪ ಬೂದಗೊಳಿ, ಶ್ರೀಶೈಲಕೂರಿನದ ಮಲ್ಲಪ್ಪಪಡಿಸಲಿಗೆ ಲಾಲಸಾಬ ಹಾಗರ, ಜವರೇಗೌಡ ಪೋಲೇಶಿ, ಮಲಿಗೆಪ್ಪ ಸಾಸನೂರ, ಸಿದ್ದಿಂಗಪ್ಪ ಬಿರಾದಾರ, ಶಾರದಾ- ಕಾಳನ್ನವರ, ಸುಜಾತಾ ವಡ್ಡರ, ಗುರುಬಸಮ್ಮ ಡವಳಗಿ, ರೇವತಿ ಬಡಿಗೇರ, ಈ ಚೇತನ ಗೌಡರ ಸೇರಿದಂತೆ ಇತರರು ಇದ್ದರು.