‘ವಿಶೇಷಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಬಳ್ಳಾರಿ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಗೋವಿಂದಪ್ಪ ಅವರು ಹೇಳಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಆಯೋಜಿಸಿದ್ದ “ಭಾರತ ಸುಗಮ್ಯ ಯಾತ್ರಾ” ಅರಿವು ಮೂಡಿಸುವ ಜಾಥಾ ಕಾರ್ಯಕ್ರಮದ ನಡೆಯಿತು.
“ಭಾರತ ಸುಗಮ್ಯ ಯಾತ್ರಾ” ಅರಿವು ಮೂಡಿಸುವ ಜಾಥಾಗೆ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರರಾದ ಗೌಸಿಯಾ ಬೇಗಂ ಅವರು ಚಾಲನೆ ನೀಡಿದರು.
“ವಿಶೇಷಚೇತನರು ಸರ್ಕಾರಿ ಕಚೇರಿಗಳಲ್ಲಿ ಅವರಿಗಿರುವ ಸೌಲಭ್ಯಗಳ ಮಾಹಿತಿ ಹೊಂದಬೇಕು. ಮುಖ್ಯವಾಗಿ ಅವರಿಗೆ ಯಾವುದೇ ಅಡೆತಡೆ ಇಲ್ಲದಂತೆ ಓಡಾಡಲು ಪೂರಕ ಪರಿಸರ ಕಲ್ಪಿಸಿಕೊಟ್ಟು ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳಬೇಕು” ಎಂದರು.
ಇದನ್ನು ಓದಿದ್ದೀರಾ? ಬೆಂಗಳೂರು | ವಿಳಾಸ ತಪ್ಪಾಗಿದ್ದಕ್ಕೆ ವಾಗ್ವಾದ: ಹಲ್ಲೆ ನಡೆಸಿ ಪರಾರಿಯಾಗಿದ್ದ ಡೆಲಿವರಿ ಬಾಯ್ ವಿರುದ್ಧ ಎಫ್‌ಐಆರ್
ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಸಿಬಂದ್ದಿಗಳು ಸೇರಿದಂತೆ ವಿಶೇಷಚೇತನರು, ಹಿರಿಯ ನಾಗರಿಕರು ಮತ್ತು ಇತರರು ಭಾಗವಹಿಸಿದ್ದರು.
