ಪಾಕಿಸ್ತಾನದಲ್ಲಿ ಕುಳಿತು ಗಡಿಯುದ್ದಕ್ಕೂ ಭಾರತೀಯ ನಾಗರಿಕರನ್ನು ನಿರ್ಭಯದಿಂದ ಕೊಲ್ಲಬಹುದು ಎಂಬ ಕಲ್ಪನೆ ಬರಲು ನಾವು ಬಿಡಲಾರೆವು. ಏಕೆಂದರೆ ಭಾರತೀಯರನ್ನು ಕೊಂದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ನಾವು ಈಗಾಗಲೇ ತೋರಿಸಿಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಭಾರತದ ದೃಢಸಂಕಲ್ಪವವನ್ನು ತಿಳಿಸಲು ಮತ್ತು ಭಯೋತ್ಪಾದನೆಯೊಂದಿಗೆ ಪಾಕಿಸ್ತಾನದ ಸಂಪರ್ಕವನ್ನು ವಿಶ್ವಕ್ಕೆ ಒತ್ತಿ ಹೇಳುವ ನಿರ್ಧಾರವನ್ನು ಭಾರತ ಕೈಗೊಂಡಿದೆ. ಈ ನಿಟ್ಟಿನಲ್ಲಿ ರಚಿಸಲಾದ ಭಾರತೀಯ ಸಂಸದರ ನಿಯೋಗವನ್ನು ತರೂರ್ ಮುನ್ನಡೆಸುತ್ತಿದ್ದಾರೆ. ಈ ನಿಯೋಗ ಗಯಾನಾ, ಪನಾಮ, ಕೊಲಂಬಿಯಾ, ಬ್ರೆಜಿಲ್ ಮತ್ತು ಯುಎಸ್‌ಗೆ ಭೇಟಿ ನೀಡಲಿದೆ.
ಇದನ್ನು ಓದಿದ್ದೀರಾ? ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಅಭಿಯಾನ; ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗ ರಚನೆ
ವಿವಿಧ ದೇಶಗಳಿಗೆ ಭೇಟಿ ನೀಡುವ ಈ ಸರ್ವಪಕ್ಷ ನಿಯೋಗವು ಪಾಕಿಸ್ತಾನದೊಂದಿಗಿನ ಇತ್ತೀಚೆಗೆ ನಡೆದ ಸಂಘರ್ಷವು ಆಪರೇಷನ್ ಸಿಂಧೂರದಿಂದ ಆರಂಭವಾಗಿರುವುದಲ್ಲ. ಬದಲಾಗಿ 26 ಪ್ರವಾಸಿಗರನ್ನು ಕೊಂದ ಭಯೋತ್ಪಾದಕ ದಾಳಿಯಿಂದಾಗಿ ಪ್ರಾರಂಭವಾಗಿರುವುದು ಎಂದು ಈ ನಿಯೋಗಗಳು ಒತ್ತಿ ಹೇಳುತ್ತವೆ.
#WATCH | New York, US: During an interaction at the Consulate, Congress MP Shashi Tharoor says, " I don't work for the government, as you know. I work for an opposition party…I myself authored an op-ed…saying the time has come to hit hard but hit smart. I'm pleased to say… pic.twitter.com/9dPVuWzZJn
— ANI (@ANI) May 25, 2025
ಭಾರತೀಯ-ಅಮೆರಿಕನ್ ಸಮುದಾಯದ ಆಯ್ದ ಪ್ರಮುಖ ಸದಸ್ಯರು, ಪ್ರಮುಖ ಮಾಧ್ಯಮ ಮತ್ತು ಚಿಂತಕರೊಂದಿಗೆ ಶಶಿ ತರೂರ್ ಶನಿವಾರ ಸಂವಾದವನ್ನು ನಡೆಸಿದ್ದಾರೆ. “ನಾವು ಏನನ್ನೂ ನಾವಾಗಿಯೇ ಪ್ರಾರಂಭಿಸಲು ಬಯಸಿರಲಿಲ್ಲ. ಇದು ಪಾಕಿಸ್ತಾನಕ್ಕೆ ಭಾರತದ ಸ್ಪಷ್ಟ ಸಂದೇಶ” ಎಂದು ಹೇಳಿದ್ದಾರೆ.
“ನಾವು ಭಯೋತ್ಪಾದಕರಿಗೆ ಸಂದೇಶವನ್ನು ಕಳುಹಿಸುತ್ತಿದ್ದೆವು. ನೀವು ಪ್ರಾರಂಭಿಸಿದ್ದೀರಿ, ನಾವು ಉತ್ತರಿಸಿದ್ದೇವೆ. ನೀವು ನಿಲ್ಲಿಸಿದರೆ, ನಾವು ನಿಲ್ಲಿಸುತ್ತೇವೆ. ಈಗ ನೀವು ನಿಲ್ಲಿಸಿದ್ದೀರಿ. 88 ಗಂಟೆಗಳ ಕಾಲ ಯುದ್ಧ ನಡೆದಿದೆ. ನಾವು ಈ ಬಗ್ಗೆ ಹತಾಶೆ ಹೊಂದಿದ್ದೇವೆ. ಯಾಕೆಂದರೆ ಯುದ್ಧ ನಡೆಯಬಾರದು. ಹಲವು ಸಾವುನೋವು ಸಂಭವಿಸಿದೆ. ಆದರೆ ನಾವು ಇವೆಲ್ಲವನ್ನೂ ನಾವು ದೃಢ ಮತ್ತು ದೃಢನಿಶ್ಚಯದಿಂದ ಹಿಂದಿರುಗಿ ನೋಡುತ್ತೇವೆ” ಎಂದು ತಿಳಿಸಿದ್ದಾರೆ.
ಇದನ್ನು ಒದಿದ್ದೀರಾ? ಆಪರೇಷನ್ ಸಿಂಧೂರ | ಕಾಂಗ್ರೆಸ್ – ತರೂರ್ ನಡುವೆ ವಾಗ್ಯುದ್ಧ; ಬೇಳೆ ಬೇಯಿಸಿಕೊಳ್ಳುತ್ತಿದೆ ಬಿಜೆಪಿ
“ಪಾಕಿಸ್ತಾನದಲ್ಲಿ ಕುಳಿತಿರುವ ಯಾರೂ ಗಡಿಯನ್ನು ದಾಟಿ ಬಂದು ನಮ್ಮ ನಾಗರಿಕರನ್ನು ಸುಲಭವಾಗಿ ಕೊಲ್ಲಬಹುದು ಎಂದು ನಂಬಲು ನಾವು ಬಿಡಲಾರೆವು. ಭಾರತೀಯರನ್ನು ಕೊಂದರೆ ಬೆಲೆ ತೆರಬೇಕಾಗುತ್ತದೆ. ನಾವು ಕೆಲವು ವರ್ಷಗಳಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮುಕ್ತ ಮಾರುಕಟ್ಟೆ ಪ್ರಜಾಪ್ರಭುತ್ವವಾಗುವುದರ ಮೇಲೆ ಗಮನ ಇರಿಸಿದ್ದೇವೆ. ನಮ್ಮ ಆರ್ಥಿಕತೆಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೇವೆ. ತಂತ್ರಜ್ಞಾನ ಮತ್ತು ತಾಂತ್ರಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ” ಎಂದರು.
ತರೂರ್ ನೇತೃತ್ವದ ನಿಯೋಗದಲ್ಲಿ ಸರ್ಫರಾಜ್ ಅಹ್ಮದ್(ಜೆಎಂಎಂ), ಗಂಟಿ ಹರೀಶ್ ಮಧುರ್ ಬಾಲಯೋಗಿ(ಟಿಡಿಪಿ), ಶಶಾಂಕ್ ಮಣಿ ತ್ರಿಪಾಠಿ(ಬಿಜೆಪಿ), ಭುವನೇಶ್ವರ ಕಲಿತಾ(ಬಿಜೆಪಿ), ಮಿಲಿಂದ್ ದಿಯೋರಾ(ಶಿವಸೇನೆ), ತೇಜಸ್ವಿ ಸೂರ್ಯ(ಬಿಜೆಪಿ), ಮತ್ತು ಅಮೆರಿಕದ ಮಾಜಿ ರಾಯಭಾರಿ ತರಂಜಿತ್ ಸಂಧು ಇದ್ದಾರೆ. ನಿಯೋಗ ಶನಿವಾರ ನ್ಯೂಯಾರ್ಕ್ ತಲುಪಿದ್ದು ಗಯಾನಾಗೆ ಪ್ರಯಾಣಿಸಲಿದೆ. ಜೂನ್ 3ರಂದು ಅಮೆರಿಕಕ್ಕೆ ಹಿಂತಿರುಗಲಿದೆ.
