ಪತ್ರಕರ್ತನಿಗೆ ಜಾತಿ ನಿಂದನೆ ಮಾಡಿ ಹಲ್ಲೆ ಎಸಗಿರುವ ಆರೋಪದ ಮೇಲೆ ತುಮಕೂರು ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿಯನ್ನು ಬಂಧಿಸಲಾಗಿದೆ. ಸದ್ಯ ತಾಳಮಕ್ಕಿಯನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಝೀ ಕನ್ನಡ ನ್ಯೂಸ್ ವರದಿಗಾರ ಜಿ. ಎನ್. ಮಂಜುನಾಥ್ (ಸಮಯ ಮಂಜು) ನೀಡಿದ ದೂರಿನ ಆಧಾರದಲ್ಲಿ ತಿಲಕ್ ಪಾರ್ಕ್ ಠಾಣೆ ಪೊಲೀಸರು ಮಂಜುನಾಥ್ ತಾಳಮಕ್ಕಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಗಣೇಶನ ಗಲಾಟೆ: ಪೊಲೀಸರ ನಿರ್ಲಕ್ಷ್ಯ, ರಾಜಕಾರಣಿಗಳ ಸ್ವಾರ್ಥಕ್ಕೆ ನಲುಗಿದ ನಾಗಮಂಗಲ
ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಮೇ 21ರಂದು ಇಡಿ ದಾಳಿ ನಡೆದಿದೆ. ಇದರ ವರದಿ ಮಾಡಲು ಝೀ ಕನ್ನಡ ನ್ಯೂಸ್ ವರದಿಗಾರ ಮಂಜುನಾಥ್ ತೆರಳಿದ್ದರು. ಈ ವೇಳೆ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
“ಏನಲೇ ನೀನು ಬಂದಿದ್ದೀಯಾ, ನಿನಗೆ ನೀನೇ ಮಹಾ ಬುದ್ಧಿವಂತ ಅಂದ್ಕೊಂಡಿದ್ದೀಯಾ, ಏನೇ ಮಾಡಿದರೂ ಕೀಳು ಜಾತಿನೇ, ಕೀಳು ಜಾತಿ ಬುದ್ಧಿ ಬಿಡಲ್ಲ, ಮಾದಿಗರ ಬುದ್ಧಿ ಲದ್ದಿ” ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಗೆಯೇ ಲೋಗೋ ಇರುವ ಮೈಕ್‌ನಿಂದ ತಲೆ, ಕಿವಿಗೆ ಹಲ್ಲೆ ನಡೆಸಿದ್ದು ಹಲ್ಲೆಯಿಂದ ಗಾಯಗೊಂಡ ಜಿ.ಎನ್.ಮಂಜುನಾಥ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಾಗೆಯೇ ತಿಲಕ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಈ ದೂರಿನ ಆಧಾರದಲ್ಲಿ ಮಂಜುನಾಥ್ ತಾಳಮಕ್ಕಿಯನ್ನು ತನಿಖಾಧಿಕಾರಿ ಮಧುಗಿರಿ ಡಿವೈಎಸ್‌ಪಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
