ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಹಾಗೂ ಆತನ ಕುಟುಂಬದ ಸದಸ್ಯರ ಮೇಲೆ ಕಬ್ಬಿಣದ ರಾಡ್‌ಗಳಿಂದ ಥಳಿಸಿ ಜಾತಿ ನಿಂದನೆ ಮಾಡಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಊಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅನೈಚ್ ಗ್ರಾಮದಲ್ಲಿ ನಡೆದಿದೆ.
ದೀಪಕ್ ಕುಮಾರ್ ಪಾಸಿ ಹಲ್ಲೆಗೆ ಒಳಗಾದ ಯುವಕ. ಇವರು ಸ್ಥಳೀಯ ಗ್ರಾಮಸ್ಥರೊಬ್ಬರ ಹೊಲದಲ್ಲಿ ಬೇಸಾಯ ಮಾಡುತ್ತಿದ್ದರು. ಹೊಲಕ್ಕೆ ರಾಜಾರಾಮ್ ಯಾದವ್ ಎಂಬಾತನ ಹಸುಗಳು ಬಂದು ಬೆಳೆಯನ್ನು ತಿಂದು ಹಾಕುತ್ತಿದ್ದವು. ಈ ಬಗ್ಗೆ ದೀಪಕ್ ಕುಮಾರ್ ಅವರು ರಾಜಾರಾಮ್ ಬಳಿ ಹೇಳಿದ್ದರು. ಇದೇ ವಿಚಾರಕ್ಕೆ ದೀಪಕ್, ಆತನ ಪತ್ನಿ ಸುಮಿತ್ರಾ, ಸಹೋದರ ಮತ್ತು ತಾಯಿಯ ಮೇಲೆ ರಾಜಾರಾಮ್ ಯಾದವ್, ದಿಲಜೀತ್ ಯಾದವ್, ಅರವಿಂದ್ ಯಾದವ್, ರಾಜೇಂದ್ರ ಯಾದವ್, ಪಾರ್ವತಿ ದೇವಿ ಮತ್ತು ತಾರಾ ದೇವಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ದೀಪಕ್ ಮತ್ತು ಸುಮಿತ್ರಾ ಅವರಿಗೆ ಗಂಭೀರವಾದ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸದಂತೆ ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!
ಈ ಜಗಳದಲ್ಲಿ ದೀಪಕ್ ಮತ್ತು ಸುಮಿತ್ರಾ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಒಬ್ಬ ಸದಸ್ಯರ ಪಕ್ಕೆಲುಬು ಮುರಿದ ಆರೋಪವೂ ಇದೆ.
ಘಟನೆಯ ನಂತರ, ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ಹೋದ ಸಂತ್ರಸ್ತರನ್ನು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ವಾಪಸ್ ಕಳುಹಿಸಿದ್ದರು. ಇದಾದ ನಂತರ, ದೀಪಕ್ ಕುಮಾರ್ ಕುಟುಂಬವು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿತು. ಆನಂತರದಲ್ಲಿ ಮುಂದಿನ ತನಿಖೆಯ ಜವಾಬ್ದಾರಿಯನ್ನು ಮತ್ತೊಬ್ಬ ಅಧಿಕಾರಿ ಚಮನ್ ಸಿಂಗ್ ಚಾವ್ಡಾ ಅವರಿಗೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.