ಚಾಮರಾಜನಗರ ಜಿಲ್ಲೆ, ಯಳಂದೂರು ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಅಂಬೇಡ್ಕರ್ ಸೇವಾ ಸಮಿತಿ ಮತ್ತು ಆಚರಣಾ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ವಡಗೆರೆ ದಾಸ್ ಮಾತನಾಡಿ ‘ ಯಳಂದೂರು ತಾಲ್ಲೂಕಿನಲ್ಲಿ ಶೇ 95.6 ರಷ್ಟು ಸಮೀಕ್ಷೆ ಮುಗಿದಿದೆ ಕೆಲವು ತಾಂತ್ರಿಕ ಕಾರಣಗಳಿಂದ 273 ಕುಟುಂಬ ಜಾತಿ ಗಣತಿ ನೋಂದಣಿಯಿಂದ ಹಿಂದುಳಿದಿದೆ ‘ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಏಕ ಸದಸ್ಯ ಆಯೋಗ ರಚಿಸಿ ನಿವೃತ್ತ ಜಸ್ಟಿಸ್ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಒಳಮೀಸಲಾತಿಯ ಅಂಗವಾಗಿ ಜಾತಿ ಗಣತಿ ಕಾರ್ಯವನ್ನು ರಾಜ್ಯಾದ್ಯಂತ ನಡೆಸುತ್ತಿದೆ. ಯಳಂದೂರು ತಾಲ್ಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಹೊಲಯ ( ಬಲಗೈ) ಸಮುದಾಯ ಶೇ 95.6% ಸಮೀಕ್ಷೆ ಮುಗಿದಿದೆ. ಸಮೀಕ್ಷೆ ದಿನವನ್ನು ಮತ್ತೇ 29 ರ ತನಕ ಮುಂದುವರೆಸಿರುವುದರಿಂದ ಶೇ 100% ರಷ್ಟು ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟು ಹೊಲಯ ಕುಟುಂಬ ಪಡಿತರ ಚೀಟಿಯ ಪ್ರಕಾರ 5,956 ಕುಟುಂಬಗಳಿವೆ. ಇದರಲ್ಲಿ ನೋಂದಾಯಸಿರುವ 5,683. ನೋಂದಣಿ ಆಗದೇ ಇರುವ 273. ಒಟ್ಟು ಶೇ 95.6% ಆಗಿದೆ. ಉಳಿದ 273 ಕುಟುಂಬದವರದು ತಾಂತ್ರಿಕ ದೋಷದಿಂದ ಕೂಡಿದೆ ಅದನ್ನು ಸರಿ ಪಡಿಸಿ ಉಳಿದ ದಿನಗಳಲ್ಲಿ ಸಂಪೂರ್ಣಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಯಳಂದೂರು ತಾಲ್ಲೂಕಿನಲ್ಲಿ ಕಿನಕಹಳ್ಳಿ, ಕಂದಹಳ್ಳಿ, ಮೆಲ್ಲಹಳ್ಳಿ, ಅಗರ, ರಾಮಾಪುರ, ಅಗ್ರಹಾರ, ಬಿ ಆರ್ ಹಿಲ್ಸ್ ಗಳಲ್ಲಿ ಪೂರ್ಣಗೊಂಡಿದೆ ಎಂದರು.

ಕಿನಕಹಳ್ಳಿ ರಾಚಯ್ಯ ಮಾತನಾಡಿ ಚಾಮರಾಜನಗರ ಜಿಲ್ಲೆ ಒಳಮೀಸಲಾತಿ ಜಾತಿ ಗಣತಿಯಲ್ಲಿ ಬಲಗೈ ಸಮುದಾಯದ ಪ್ರತಿಯೊಬ್ಬರೂ ‘ಹೊಲಯ’ ಎಂದು ನಮೂದಿಸಲು ತಿಳಿಸಲಾಗಿದೆ. ಈ ಹಿನ್ನಲೆಯಲ್ಲಿ ಯಳಂದೂರು ತಾಲ್ಲೂಕು ಶೇ 95% ಸಮೀಕ್ಷೆ ಮುಗಿದಿದೆ. ಜಿಲ್ಲೆಯಲ್ಲಿ ಪಡಿತರ ಚೀಟಿಯ ಪ್ರಕಾರ ಒಟ್ಟು 70,243 ಕುಟುಂಬವಿದೆ ಒಟ್ಟು ಸದಸ್ಯರ ಸಂಖ್ಯೆ 2,33,603 ” ಇದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಲಿಖಿತ ಸಂವಿಧಾನವಾದಿಗಳಿಂದ ಲಿಖಿತ ಸಂವಿಧಾನ ದುರ್ಬಲಗೊಳಿಸಲು ಹುನ್ನಾರ : ಸಚಿವ ಮಹದೇವಪ್ಪ
ಈ ಸಂದರ್ಭದಲ್ಲಿ ಕೆಸ್ತೂರು ಸಿದ್ದರಾಜು, ಗುಂಬಳ್ಳಿ ಮಹದೇವ್, ಯರಿಯೂರು ರಾಜಣ್ಣ, ಜಯರಾಮ್,ಹೊನ್ನೂರು ವೆಂಕಟೇಶ್, ಮಲ್ಲಿಕಾರ್ಜುನ, ಮದ್ದೂರು ಉಮಾಶಂಕರ್, ವೈ ಕೆ ಮೋಳೆ ನಂಜುಂಡ, ಯರಿಯೂರು ನಾಗೇಂದ್ರ, ಗೌತಮ್ ಬಡಾವಣೆ ವಜ್ರಮುನಿ, ಶಶಿ ಸೇರಿದಂತೆ ಇನ್ನಿತರರು ಇದ್ದರು.