ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ 2025-6ನೇ ಶೈಕ್ಷಣಿಕ ಸಾಲಿನ ಸ್ನಾತಕ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ನಾತಕ ವಿಭಾಗದಲ್ಲಿ ಲಭ್ಯವಿರುವ ಕೋರ್ಸ್‌ಗಳು: ಬಿಎ ಪದವಿಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮಹಿಳಾ ಅಧ್ಯಯನ, ಶಿಕ್ಷಣಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ತತ್ವಶಾಸ್ತ್ರ, ಹಿಂದೂಸ್ಥಾನಿ ಮ್ಯೂಸಿಕ್, ದೈಹಿಕ ಶಿಕ್ಷಣ, ಐಚ್ಛಿಕ ಕನ್ನಡ ಮತ್ತು ಇಂಗ್ಲಿಷ್, ಐಚ್ಛಿಕ ಹಿಂದಿ ಮತ್ತು ಉರ್ದು, ಬಿಎಸ್‌ಸಿ: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸಂಖ್ಯಾಶಾಸ್ತ್ರ, ಜೈವಿಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ ಮತ್ತು ಪೌಷ್ಟಿಕ, ಕಂಪ್ಯೂಟರ್ ಸೈನ್ಸ್ ಜತೆಗೆ ಬಿಕಾಂ, ಬಿಸಿಎ ಹಾಗೂ ಬಿಬಿಎ ಕೋರ್ಸ್‌ಗಳು ಲಭ್ಯ ಇವೆ.
ಿದನ್ನೂ ಓದಿದ್ದೀರಾ? ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್‌ಗಳ ಕಿಮೋಥೆರಪಿ ಚಿಕಿತ್ಸೆ ಘಟಕ ಆರಂಭ: ಡಾ. ಶಿವಾನಂದ ಮಾಸ್ತಿಹೊಳಿ
ಅತ್ಯಾಧುನಿಕ ಸೌಲಭ್ಯಗಳು: ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಸ್ಪತ್ರೆ ಸೌಲಭ್ಯ ಭದ್ರತೆಗೆ ಪೊಲೀಸ್ ಠಾಣೆ. ಭದ್ರತೆಗೆ ಸೆಕ್ಯೂರಿಟಿ ಸೌಲಭ್ಯ, ವಸತಿ ಸೌಲಭ್ಯ, ಕ್ಯಾಂಟಿನ್ ಸೌಲಭ್ಯ, ವಿಶ್ವವಿದ್ಯಾನಿಲಯದ ಬಸ್ ಸೌಲಭ್ಯ, ಸುಸಜ್ಜಿತ ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ಘಟಕಗಳು, ಸುಸಜ್ಜಿತ ಗ್ರಂಥಾಲಯ ಮತ್ತು ಡಿಜಿಟಲ್ ಸೌಲಭ್ಯ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ನುರಿತ ಹಾಗೂ ಅನುಭವಿ ಪ್ರಾಧ್ಯಾಪಕರಿಂದ ಪರಿಣಾಮಕಾರಿ ಬೋಧನೆ, ಎಲ್ಲ ರೀತಿಯ ಸರ್ಕಾರಿ ಮತ್ತು ಖಾಸಗಿ ಸ್ಕಾಲರ್‌ಶಿಫ್ ಸೌಲಭ್ಯ, ಉದ್ಯೋಗ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ, IQAC ಘಟಕದಿಂದ ಜ್ಞಾನಾರ್ಜನೆಗಾಗಿ ಕಾರ್ಯಕ್ರಮಗಳು, ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ(L.M.S) ಮುಂತಾದ ಸೌಲಭ್ಯಗಳಲ್ಲಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9845725944, 9916335837, 8904855764 2 9945208418 ಸಂಪರ್ಕಿಸಬಹುದು ಎಂದು ಮಹಿಳಾ ವಿವಿಯ ಕುಲ ಸಚಿವ ಶಂಕರಗೌಡ ಸೋಮನಾಳ ತಿಳಿಸಿದ್ದಾರೆ.