ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹನ್ನೊಂದು ವರ್ಷಗಳಾಗಿದ್ದು, “ಅಘೋಷಿತ ತುರ್ತು ಪರಿಸ್ಥಿತಿ ಆರಂಭವಾಗಿ 11 ವರ್ಷ” ಆಗಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಹನ್ನೊಂದು ವರ್ಷಗಳಲ್ಲಿ ‘ಅಚ್ಛೇ ದಿನ’ ಎಂಬ ಭರವಸೆಯು ದುಃಸ್ವಪ್ನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್ ಮಾಡಿದ್ದಾರೆ. “2014 ಮಾರ್ಚ್ 24. ಈ ಹನ್ನೊಂದು ವರ್ಷಗಳಲ್ಲಿ ಬೃಹತ್ ಭರವಸೆಗಳನ್ನು ನೀಡಿದರು. ಆದರೆ ಎಲ್ಲವೂ ಪೊಳ್ಳಾಯಿತು. ‘ಅಚ್ಛೇ ದಿನ’ ಎಂಬುದು ಈಗ ದುಃಸ್ವಪ್ನ ಎಂಬುದು ಈ ಹನ್ನೊಂದು ವರ್ಷದಲ್ಲಿ ಸಾಬೀತಾಗಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಘೋಷಿತ ತುರ್ತು ಪರಿಸ್ಥಿತಿ | ಅಂಬೇಡ್ಕರ್ ರಚಿತ ಸಂವಿಧಾನ ನಾಶಕ್ಕೆ ಬಿಜೆಪಿ ಪಿತೂರಿ: ಶರದ್ ಪವಾರ್
ಹಾಗೆಯೇ ಯುವಕರಿಗೆ, ರೈತರಿಗೆ, ಮಹಿಳೆಯರಿಗೆ, ಹಿಂದುಳಿದ ವರ್ಗ, ಅರ್ಥವ್ಯವಸ್ಥೆ, ವಿದೇಶಾಂಗ ನೀತಿ, ಪ್ರಜಾಪ್ರಭುತ್ವದ ಸ್ಥಿತಿ ಹೇಗಿದೆ ಎಂಬುದನ್ನೂ ಖರ್ಗೆ ಅವರು ಒಂದೊಂದೇ ವಾಕ್ಯದಲ್ಲಿ ವಿವರಿಸಿದ್ದಾರೆ.
“ಯುವಜನರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಭರವಸೆ ನೀಡಲಾಗಿತ್ತು. ಆದರೆ ವಾಸ್ತವದಲ್ಲಿ ಕೋಟ್ಯಾಂತರ ಉದ್ಯೋಗಿಗಳು ಕಡಿಮೆಯಾಗಿದೆ. ರೈತರ ಆದಾಯ ದ್ವಿಗುಣಗೊಳ್ಳಲಿಲ್ಲ. ಜೊತೆಗೆ ರೈತರು ಕೇಂದ್ರದ ದಾಳಿಗೆ ಗುರಿಯಾಗಬೇಕಾಗಿದೆ” ಹೇಳಿದರು.
26 मई 2014
— Mallikarjun Kharge (@kharge) May 26, 2025
11 सालों में बड़े-बड़े “वादों” को खोखले “दावों” में बदलकर मोदी सरकार ने देश की ऐसी दुर्दशा की, कि “अच्छे दिन” की बात अब एक “डरावने सपने” की तरह साबित हुए।
युवा — सालाना दो करोड़ नौकरियों का वादा, असलियत में करोड़ों की ग़ायब
किसान — न आय हुई दोगुनी, ऊपर से खाने…
“ಮಹಿಳೆಯರಿಗೆ ಹೆಸರಿಗೆ ನೀಡುವ ಮೀಸಲಾತಿಗೂ ಷರತ್ತುಗಳು ವಿಧಿಸಲಾಗುತ್ತದೆ. ಮಹಿಳೆಯರಿಗೆ ಭದ್ರತೆಯೂ ಇಲ್ಲ. ದುರ್ಬಲ ವರ್ಗಗಳಾದ ಎಸ್‌ಸಿ/ಎಸ್‌ಟಿ/ಒಬಿಸಿ/ಅಲ್ಪಸಂಖ್ಯಾತರು ಭೀಕರ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಆರ್ಥಿಕತೆ ವಿಚಾರಕ್ಕೆ ಬಂದಾಗ ಈ ಹನ್ನೊಂದು ವರ್ಷಗಳಲ್ಲಿ ಹಣದುಬ್ಬರ ಉತ್ತುಂಗಕ್ಕೆ ಏರಿದೆ. ನಿರುದ್ಯೋಗ ಏರಿಕೆಯಾಗಿದೆ. ಅನುಬೋಗ ಸ್ಥಗಿತವಾಗಿದೆ. ಮೇಕ್ ಇನ್ ಇಂಡಿಯಾ ವಿಫಲವಾಗಿದೆ. ಅಸಮಾನತೆ ಉತ್ತುಂಗಕ್ಕೇರಿದೆ” ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ: ಮಾಜಿ ಸಚಿವ ಬಿ.ಸಿ ನಾಗೇಶ್
“ವಿಶ್ವಗುರು ಆಗುವ ಭರವಸೆಯನ್ನು ಕೇಂದ್ರದ ಮೋದಿ ಸರ್ಕಾರ ನೀಡಿದೆ. ಆದರೆ ಎಲ್ಲಾ ದೇಶಗಳೊಂದಿಗಿನ ಸಂಬಂಧವನ್ನು ಹಾಳು ಮಾಡಿಕೊಂಡಿದೆ. ಪ್ರಜಾಪ್ರಭುತ್ವದ ಪ್ರತಿಯೊಂದು ಸ್ತಂಭದ ಮೇಲೆ ಆರ್‌ಎಸ್‌ಎಸ್ ದಾಳಿ ನಡೆಸುತ್ತಿದೆ. ಇಡಿ/ಸಿಬಿಐ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸಂಸ್ಥೆಗಳ ಸ್ವಾಯತ್ತತೆ ನಾಶವಾಗಿದೆ” ಎಂದು ಆರೋಪಿಸಿದ್ದಾರೆ.
“140 ಕೋಟಿ ಜನಸಂಖ್ಯೆಯ ಪ್ರತಿಯೊಂದು ವರ್ಗವೂ ತೊಂದರೆಗೀಡಾಗಿದೆ. 11 ವರ್ಷಗಳಲ್ಲಿ ಕಮಲದ ಚಿಹ್ನೆ ಈ ರೀತಿಯಾಗಿದೆ” ಎಂದು ಹನ್ನೊಂದು ವರ್ಷಗಳ ಅವಧಿಯನ್ನು ಕಾಂಗ್ರೆಸ್ ವಿವರಿಸಿದೆ.
Today is May 26 2025.
— Jairam Ramesh (@Jairam_Ramesh) May 26, 2025
Today is Undeclared Emergency@11
ಇನ್ನು ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರೂ ಪೋಸ್ಟ್ ಮಾಡಿದ್ದಾರೆ. “ಇಂದು 2025ರ ಮೇ 26.ಅಘೋಷಿತ ತುರ್ತು ಪರಿಸ್ಥಿತಿ ಆರಂಭವಾಗಿ 11 ವರ್ಷ” ಎಂದು ಹೇಳಿದ್ದಾರೆ.
2014ರ ಮೇ 26ರಂದು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದಾದ ಬಳಿಕ ಕಳೆದ ವರ್ಷ ಜೂನ್ 9ರಂದು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ.
