ಉಡುಪಿ ಜಿಲ್ಲೆಯ ಮಣಿಪಾಲ- ಬಜಪೆ ರಾಜ್ಯ ಹೆದ್ದಾರಿ, ಆತ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಹಿರೇಬೆಟ್ಟು ಗ್ರಾಮದ, ಪಟ್ಲ ಬೈಲು ಪ್ರದೇಶದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಂಪರ್ಕ ರಸ್ತೆ ಕಡಿತಗೊಂಡಿರುತ್ತದೆ. ಯಾವುದೇ ವಾಹನಗಳು ಸಂಚರಿಸಲು ಆಗದ ಪರಿಸ್ಥಿತಿ ಇದೆ. ಪರ್ಯಾಯ ಸಂಪರ್ಕ ರಸ್ತೆ ಮಾಡಿದ್ದರೂ, ಅದು ಕೂಡ ನೆರೆ ನೀರಿನಿಂದ ಕೊಚ್ಚಿ ಹೋಗಿದೆ. ಜನರಿಗೆ ನಡೆದುಕೊಂಡು ಹೋಗಲು ಆಗುತ್ತಿಲ್ಲ.
ಈ ಸಮಸ್ಯೆಯನ್ನು ಮನಗಂಡು ಪಟ್ಲ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಪ್ರತಿಭಟನಕಾರರ ಜೊತೆ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ ಸೊರಕೆ, ಕಾಮಗಾರಿಯ ವಿಳಂಬ ನೀತಿಯನ್ನು ಖಂಡಿಸಿದರು. ತುರ್ತಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಮಂಜುನಾಥ ನಾಯಕ್ ಸ್ಥಳದಲ್ಲಿದ್ದರು. ರಸ್ತೆ ಸಂಪರ್ಕ ಕಡಿತದಿಂದ ಊರಿನ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿನಯ್ ಕುಮಾರ್ ಸೊರಕೆ ತರಾಟೆಗೆ ತೆಗೆದುಕೊಂಡರು. 20 ದಿನದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಾಜಿ ತಾಲೂಕ ಪಂಚಾಯತ್ ಸದಸ್ಯ ಗುರುದಾಸ ಭಂಡಾರಿ, ಆತ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಸುಧೀರ್ ಕುಮಾರ್ ಪಟ್ಲ, ಇಸ್ಮಾಯಿಲ್ ಆತ್ರಾಡಿ ಸುರೇಶ ನಾಯ್ಕ, ಯತೀಶ ಶೆಟ್ಟಿ, ಮಾಜಿ ತಾಪಂ ಸದಸ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಸಹನಾ ಕಾಮತ್, ಗಣೇಶ ಶೆಟ್ಟಿ, ಕೊಡಂಗಳ ವಿಠಲನಾಯಕ, ಉಡುಪಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಮಹಾದೇವ ನಾಯಕ್, ಗೋಪಾಲ ಮರ್ಣೆ, ಕೇಶವ ಭಂಡಾರಿ, ವಾಸುದೇವ ಭಟ್ಟ, ಗೋಪಾಲ ಮೂಲ್ಯ, ನಾಗೇಶ ನಾಯಕ್, ಮನೋಹರ ಕಾಮತ್, ಜಯಪ್ರಕಾಶ ಕಾಮತ್, ಜಗದೀಶ ಮೂಲ್ಯ ಮತ್ತಿದ್ದರು ಸ್ಥಳದಲ್ಲಿದ್ದರು.
