ಗುಬ್ಬಿ | ಸರ್ವೋದಯ ಪರಿಕಲ್ಪನೆಯಲ್ಲಿ ಜೆಡಿಯು ಚುನಾವಣೆ : ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ನಾಗರಾಜ ಪರ ಮಹಿಮಾ ಪಟೇಲ್ ಪ್ರಚಾರ

Date:

Advertisements

ಪರಿಸರ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಆಡಳಿತ ಈ ಐದಂಶದ ಪರಿಕಲ್ಪನೆಯಲ್ಲಿ ಜೆಡಿಯು ಸರ್ವೋದಯ ಆಲೋಚನೆಯನ್ನು ಮುಂಬರುವ ಚುನಾವಣೆಯಲ್ಲಿ ಹೊಸ ಅಲೆಯನ್ನು ಎಬ್ಬಿಸುವ ಕೆಲಸ ಮಾಡಲಿದೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರ ವಿರುದ್ಧ ಹಾಗೂ ಜನತಾ ಪಕ್ಷದ ಸಿದ್ಧಾಂತ ಅಳವಡಿಸಿ ಸಾವಯವ ರಾಜ್ಯ ಕಟ್ಟಲು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯಾಗಿ ಡಾ.ಕೆ.ನಾಗರಾಜ ಅವರನ್ನು ಆಯ್ಕೆ ಮಾಡಿ ಜಿಲ್ಲೆಯಲ್ಲಿ ತಾಲ್ಲೂಕಿನ ಪ್ರವಾಸ ಗುಬ್ಬಿಯಿಂದ ಆರಂಭಿಸಿದ್ದೇವೆ ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮ.ಜ.ಪಟೇಲ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾದ ಈ ಸಮಯದಲ್ಲಿ ಇಡೀ ಜಗತ್ತು ಗಾಬರಿಯಿಂದ ಕೂಡಿದೆ. ಈ ಜೊತೆಗೆ ನಮ್ಮ ದೇಶ, ರಾಜ್ಯದ ರಾಜಕಾರಣ ಸಹ ಗಾಬರಿ ಎನಿಸಿದೆ. ಈ ಕೆಟ್ಟ ವಾತಾವರಣದಲ್ಲಿ ತಂಗಾಳಿಯಾಗಿ ಜೆಡಿಯು ಪಕ್ಷ ಜನರಿಗೆ ಸಮಾಧಾನ ತರಲು ಸರ್ವೋದಯ ಪರಿಕಲ್ಪನೆಯ ಯೋಜನೆ ರೂಪಿಸಿಕೊಂಡಿದೆ. ಮುಂದಿನ ಎಲ್ಲಾ ಚುನಾವಣೆಯಲ್ಲಿ ಹಣ ಹೆಂಡ ಇಲ್ಲದೆ ಗೆಲ್ಲುವ ಚಿಂತನೆ ಜನರಲ್ಲಿ ಮೂಡಿಸಲು ಬದಲಾವಣೆ ಜಗದ ನಿಯಮ ಅಂತ ಜಾಗೃತಿ ನಡೆಸಿದ್ದೇವೆ ಎಂದರು.

1001493401

ಜಾತಿ ಗಣತಿ ಎಂಬುದು ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಅಂಶ ಹೊಂದಿದೆ. ಸಮಾನತೆ ಸಾರುವ ನಾವುಗಳೇ ಜಾತಿ ಮೂಲಕ ಗುರುತಿಸಿ ಗುಂಪು ಕಟ್ಟುವ ಕೆಲಸ ಮಾಡಲಾಗಿದೆ. ಇಂತಹ ಪರಿಸ್ಥಿತಿಯಿಂದ ದೂರು ಉಳಿದು ಜನತಾ ಪಕ್ಷದ ತತ್ವವನ್ನು ಅಳವಡಿಸಲು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಮೂಲಕ ಜೆಡಿಯು ಸರ್ವೋದಯ ಆಲೋಚನೆ ಹಾಗೂ ಸಾವಯವ ರಾಜ್ಯ ಕಟ್ಟುವ ಕೆಲಸ ಮಾಡುತ್ತೇವೆ ಎಂದ ಅವರು ಗ್ಯಾರಂಟಿ ಯೋಜನೆ ಬಡವರ ಪರ ನಿಲ್ಲಬೇಕಿದೆ. ಆದರೆ ಮತಗಳ ಕ್ರೂಢೀಕರಣಕ್ಕೆ ಬಳಸಿರುವ ಲಕ್ಷಣ ಕಂಡಿದೆ. ಪದವೀಧರರಿಗೆ ಹಣ ನೀಡುವ ಬದಲು ಖಾಲಿ ಇರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿದರೆ ನಿರುದ್ಯೋಗ ನಿವಾರಣೆ ಆಗುತ್ತಿತ್ತು. ಸಾಮಾಜಿಕ ಬದ್ದತೆ ಮಾಯ ಆಗುವ ಮುನ್ನ ಜೆಡಿಯು ಬದ್ಧತೆ ಹೊಂದಿರುವ ರಾಜಕಾರಣಿಗಳನ್ನು ಮರಳಿ ಪಕ್ಷಕ್ಕೆ ಕರೆ ತರಲು ಪ್ರಯತ್ನ ಮಾಡುತ್ತಿದೆ. ಜಿಲ್ಲೆಯ ಮಾಧುಸ್ವಾಮಿ ಅವರು ಒಳ್ಳೆಯ ವ್ಯಕ್ತಿ. ನಮ್ಮ ಜನತಾ ಪಕ್ಷದ ಆಲೋಚನೆ ಕೈಗೂಡಿಸಿಕೊಂಡಿದ್ದರು. ಬಿಜೆಪಿಯಲ್ಲಿ ಇದ್ದಾರೆ. ಜೆಡಿಯು ಪಕ್ಷಕ್ಕೆ ಬರದಿದ್ದರೂ ಪರವಾಗಿಲ್ಲ. ಆದರೆ ನಮ್ಮ ಸರ್ವೋದಯ ಆಲೋಚನೆಗೆ ಕೈ ಜೋಡಿಸಲು ಮನವಿ ಮಾಡುತ್ತೇವೆ ಎಂದರು.

Advertisements

ಸಮಾನತೆ ಎಂದು ಹೇಳಿ ಜಾತಿ ವಿಂಗಡನೆ ಸರಿಯಲ್ಲ. ಸಿದ್ದರಾಮಯ್ಯ ಅವರು ಜನತಾ ಪಕ್ಷದ ಆದರ್ಶ ಒಪ್ಪಿದ್ದವರು. ಈಗ ಪಕ್ಷ ಬದಲಿಸಿ ದಾರಿ ತಪ್ಪಿದ್ದಾರೆ. ಮರಳಿ ಬರುವುದು ಕಷ್ಟ ಎನಿಸಿದೆ. ಬಿಜೆಪಿ ಕಾಂಗ್ರೆಸ್ ಒಬ್ಬರ ಮೇಲೆ ಒಬ್ಬರು ದೂರು ಹೇಳುವುದು ಅಷ್ಟೇ ರಾಜಕಾರಣ ಎಂದು ತಿಳಿದಿದ್ದಾರೆ. ಈ ಎಲ್ಲಾ ಕೆಟ್ಟ ವಾತಾವರಣದಲ್ಲಿ ಜನರಿಗೆ ನಂಬಿಕೆ ಎಂಬುದು ಬರುತ್ತಿಲ್ಲ. ಹಾಗಾಗಿ ಜೆಡಿಯು ಹೊಸ ಅಲೆಯನ್ನು ಎಬ್ಬಿಸುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಪ್ರವಾಸ ಕೈಗೊಂಡು ಸರ್ವೋದಯ ಆಲೋಚನೆಯನ್ನು ಚುನಾವಣಾ ಪ್ರಚಾರ ಮಾದರಿಯಲ್ಲಿ ಮಾಡುತ್ತೇವೆ ಎಂದ ಅವರು ಹಣ ಹೆಂಡ ಹಂಚದೆ ನಾನು ಕೂಡ ಶಾಸಕನಾಗಿ ಆಯ್ಕೆಯಾಗಿದ್ದೆ. ಆಮ್ ಆದ್ಮಿ ಪಕ್ಷ ಕೂಡಾ ದೆಹಲಿಯಲ್ಲಿ ಹಣ ವೆಚ್ಚ ಮಾಡದೆ ಅಧಿಕಾರ ಪಡೆದಿತ್ತು. ಈಗ ದಿಕ್ಕು ತಪ್ಪಿ ಅಧಿಕಾರ ಕಳೆದುಕೊಂಡಿತು ಎಂದರು.

ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜ ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಕ್ಲಸ್ಟರ್ ತೆರೆದು ಸೇವೆಯಲ್ಲಿ ತೊಡಗಿ ಈಗ ಮಹಿಮಾ ಪಟೇಲ್ ಅವರ ಆದರ್ಶ ಒಪ್ಪಿ ಜೆಡಿಯು ಸೇರಿದ್ದೇನೆ. ಈ ಹಿಂದೆ 2014 ರಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಹಾಗೂ 2017 ರ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೂಡಾ ಸ್ಪರ್ಧಿಸಿ ಜಿಲ್ಲೆಯ ಜನರಿಗೆ ಪರಿಚಿತವಾಗಿದ್ದೇನೆ. ಸರ್ವೋದಯ ಆಲೋಚನೆ ಮೂಲಕ ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹ, ಎನ್ ಪಿಎಸ್ ಬದಲಿಗೆ ಓಪಿಎಸ್ ಪದ್ಧತಿ ಜಾರಿಗೆ ಒತ್ತಾಯ, ಅತಿಥಿ ಉಪನ್ಯಾಸಕರ ಹಾಗೂ ಶಿಕ್ಷಕರ ಸೇವಾ ಭದ್ರತೆ, ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಹಾಗೂ ಐಎಎಸ್ ಐಪಿಎಸ್ ಶಿಕ್ಷಣಕ್ಕೆ ಉಚಿತ ತರಬೇತಿ ಕೇಂದ್ರ ತೆರೆಯಲು ಒತ್ತಾಯಿಸಿ ಮತ್ತಷ್ಟು ಬೇಡಿಕೆ ಈಡೇರಿಕೆಗೆ ಬದ್ಧನಾಗಿ ದುಡಿಯುತ್ತೇನೆ. ಈ ನಿಟ್ಟಿನಲ್ಲಿ ಆಶೀರ್ವದಿಸಿ ಎಂದು ಮನವಿ ಮಾಡಿದ ಅವರು ರಾಜ್ಯದಲ್ಲಿ ಸರ್ವೋದಯ ಪರಿಕಲ್ಪನೆ ಅನುಷ್ಠಾನಕ್ಕೆ ಆಗಸ್ಟ್ 15 ರಂದು ಬೃಹತ್ ಪಾದಯಾತ್ರೆ ಮೂಲಕ ಜೆಡಿಯು ಹೊಸ ಅಲೆಯನ್ನು ಎಬ್ಬಿಸಲಿದೆ. ರಾಜ್ಯದ ಜನತೆಗೆ ಉತ್ತಮ ಸಂದೇಶ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಯು ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ, ಪ್ರಧಾನ ಕಾರ್ಯದರ್ಶಿಗಳಾದ ರಂಗನಾಥ್, ಯಶೋಧ, ಯುವ ಘಟಕದ ರಾಜ್ಯ ಉಪಾಧ್ಯಕ್ಷೆ ಮೈನಾವತಿ, ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ, ತಾಲ್ಲೂಕು ಅಧ್ಯಕ್ಷ ಯೋಗೀಶ್, ಕೋಲಾರ ಜಿಲ್ಲೆಯ ಜೆಡಿಯು ಮುಖಂಡರಾದ ಸುಮಾ, ಮಲ್ಲಮ್ಮ, ನಾರಾಯಣಸ್ವಾಮಿ ಗೌಡ, ಶಶಿಕುಮಾರ್, ವಕೀಲ ಮರಿಯಣ್ಣ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X