₹82,999 ಮೊತ್ತದ ಆಪಲ್ ವಾಚ್ ಅಲ್ಟ್ರಾವನ್ನು ಬೆಂಗಳೂರು ಮೂಲದ ಸ್ವಿಗ್ಗಿ ಜೀನಿ ಡೆಲಿವೆರಿ ಎಕ್ಸಿಕ್ಯೂಟಿವ್ ಕದ್ದಿದ್ದರು ಎಂದು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಆರೋಪಿಸಿ ಟ್ವೀಟ್ ಮಾಡಿದ್ದಾರೆ.
ಧೋಲಾಕಿಯಾ ಜಯದೀಪ್ ಎಂಬುವವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ಸ್ವಿಗ್ಗಿ ಜೀನಿ ಡೆಲಿವೆರಿ ಬಾಯ್ ನನ್ನ ಸ್ನೇಹಿತನಿಂದ ಆಪಲ್ ವಾಚ್ ಅಲ್ಟ್ರಾ ತೆಗೆದುಕೊಂಡಿದ್ದಾನೆ. ಅದನ್ನು ತೆಗೆದುಕೊಂಡು ಡೆಲಿವೆರಿ ಕೊಡಲು ನನ್ನ ಬಳಿ ಬರುತ್ತಿದ್ದನು. ಇದೇ ವೇಳೆ, ದಾರಿ ಮಧ್ಯೆ ಏಕಾಏಕಿ ಡೆಲಿವೆರಿ ಬಾಯ್ ಆರ್ಡ್ರ್ ರದ್ದು ಮಾಡಿದ್ದಾನೆ. ನನ್ನ ಮತ್ತು ನನ್ನ ಸ್ನೇಹಿತನ ನಂಬರ್ ಬ್ಲಾಕ್ ಮಾಡಿದ್ದಾನೆ” ಎಂದು ದೂರಿದ್ದಾರೆ.
“ಇದರಿಂದ ಗಾಬರಿಗೊಂಡ ನಾನು ನಂತರ ಐಫೋನ್ನಲ್ಲಿ ಸ್ಥಳ ಟ್ರ್ಯಾಕಿಂಗ್ ವೈಶಿಷ್ಟದ ಸಹಾಯದಿಂದ ರ್ಯಾಪಿಡೋ ಬೈಕ್ ಬುಕ್ ಮಾಡಿ ಅವರ ಸಹಾಯದಿಂದ ಆತನನ್ನು ಬೆನ್ನಟ್ಟಿದ್ದೇವೆ. ಬೆಳಗಿನ ಜಾವ 2 ಗಂಟೆಗೆ ಈ ಕಾರ್ಯಾಚರಣೆ ನಡೆಸಲಾಯಿತು. ಸ್ವಿಗ್ಗಿ ಜೀನಿ ಜತೆಗೆ ಇದು ನನ್ನ ಕೆಟ್ಟ ಅನುಭವ, ಹಾಗೂ ಕರಾಳ ರಾತ್ರಿ” ಎಂದು ಬರೆದುಕೊಂಡಿದ್ದಾರೆ.
“ಸ್ವಿಗ್ಗಿ ಜೀನಿ ಎಲ್ಲ ಸಮಯದಲ್ಲೂ ನಮಗೆ ಇಮೇಲ್ ಮಾಡಲು ಹೇಳುತ್ತದೆ” ಎಂದಿದ್ದಾರೆ.
ಈ ಟ್ವೀಟ್ಗೆ ಹಲವು ಜನ ಕಮೆಂಟ್ ಮಾಡಿದ್ದು, “ಕಥೆಯನ್ನು ಸಂಪೂರ್ಣ ಮುಗಿಸಿ, ನಿಮಗೆ ಕೊನೆದಾಗಿ ವಾಚ್ ಸಿಕ್ಕಿತಾ ಇಲ್ಲವಾ ಎಂಬುದನ್ನು ತಿಳಿಸಿರಿ” ಎಂದು ಅಭೀತ್ ಎಂಬುವವರು ಟ್ವೀಟ್ ಮಾಡಿದ್ದಾರೆ.
“ಇದು ಮಾಂತ್ರಿಕ ಸಂಜೆಯಂತೆ ಧ್ವನಿಸುತ್ತದೆ. ಕಾಣೆಯಾದ ವಸ್ತುಗಳೊಂದಿಗೆ ಬೆಳಗಿನ ಸಮಯದವರೆಗೆ ಕಣ್ಣಾಮುಚ್ಚಾಲೆ ಆಡಬಹುದಾದಾಗ ಗ್ರಾಹಕರ ಸೇವೆ ಯಾರಿಗೆ ಬೇಕು?” ಎಂದು ಶಿಂಗ್ ಎಂಬುವವರು ತಿಳಿಸಿದ್ದಾರೆ.
“ಹೀಗಾಗಬಾರದಿತ್ತು! ದಯವಿಟ್ಟು ಆರ್ಡರ್ ಐಡಿಯೊಂದಿಗೆ ನಮಗೆ ಸಹಾಯ ಮಾಡಬಹುದೇ? ನಾವು ಅದನ್ನು ಪರಿಶೀಲಿಸುತ್ತೇವೆ” ಎಂದು ಸ್ವಿಗ್ಗಿ ಕೇರ್ನ ಅಶ್ವಿನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಶಕ್ತಿ’ಯಿಂದಾದ ನಷ್ಟ ಸರಿದೂಗಿಸಲು ಪ್ರತಿ ತಿಂಗಳು ₹10 ಸಾವಿರ ನೀಡಲು ಸರ್ಕಾರಕ್ಕೆ ಆಟೋ ಚಾಲಕರ ಒತ್ತಾಯ
ಸ್ವಿಗ್ಗಿಯ ಜೀನಿ ಸೇವೆ ಆಹಾರದ ಹೊರತಾಗಿ ಇತರ ವಸ್ತು ವಿತರಣಾ ಕಾರ್ಯಗಳನ್ನು ನಿರ್ವಹಿಸುತ್ತದೆ. ಈಗ ನಡೆದ ಘಟನೆಯೂ ಸೇವೆಯ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ.