ಭದ್ರಾವತಿ ತಾಲ್ಲೂಕಿನ ಹಳೇಜೇಡಿಕಟ್ಟೆಯಲ್ಲಿ ಶಾಂತಿನಿಕೇತನ ಚಾರಿಟಬಲ್ ಸೊಸೈಟಿ (ರಿ) ವತಿಯಿಂದ ನಡೆಯುತ್ತಿರುವ ಮದರ್ ತೆರೇಸಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗೆ 2024-25 ನೇ ಸಾಲಿನ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆಗೆ ಒಟ್ಟು 14 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 2 ವಿದ್ಯಾರ್ಥಿನಿಯರು ಹಾಗೂ 12 ವಿದ್ಯಾರ್ಥಿಗಳಿದ್ದರು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡಯಾಗಿರುತ್ತಾರೆ. ಅದರಲ್ಲಿ 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್(ಅತ್ಯುನ್ನತ ಶ್ರೇಣಿ) ಪಡೆದಿದ್ದು, ಉಳಿದ 10 ವಿದ್ಯಾರ್ಥಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ.
ವಿಶೇಷತೆಯೇನೆಂದರೆ, ರಾಜ್ಯದಲ್ಲಿಯೇ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದವರಲ್ಲಿ, ಪ್ರಥಮ ಸ್ಥಾನವನ್ನು ಹೇಮಾ ಮತ್ತು ದ್ವಿತೀಯ ಸ್ಥಾನವನ್ನು ಜೀವನ್ ಜ್ಯೋತಿ ಪಡೆದಿರುತ್ತಾರೆ. ಇವರ ಸಾಧನೆಗೆ ಕಾರಣಕರ್ತರಾದ ಆಡಳಿತ ಮಂಡಳಿ, ಶಾಲಾ ಶಿಕ್ಷಕರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ರೆವರೆಂಡ್ ಫಾದರ್ ರಾಬಿಟ್ ಮಾಧೂರವರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.