ಬಿರುಗಾಳಿ ಸಹಿತ ಮಳೆ ಸಂಭವಿಸಿದ್ದು, ತೋಟ ಕಾರ್ಮಿಕರ ಲೈನ್ ಮನೆಯ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ನಡೆದಿದೆ.
ಸುನಂದ ಎಂಬ ಕಾರ್ಮಿಕ ಮಹಿಳೆ ಮನೆಯಲ್ಲಿ ಮಲಗಿದ್ದ ವೇಳೆ ಮಧ್ಯ ರಾತ್ರಿ ಹೆಚ್ಚಿನದಾಗಿ ಮಳೆ ಹಾಗೂ ಗಾಳಿಯಿಂದ ಬೃಹತ್ ಗಾತ್ರದ ಮರ ಮನೆಯ ಮೇಲೆ ಬಿದ್ದ ಪರಿಣಾಮದಿಂದ ಕಾರ್ಮಿಕ ಮಹಿಳೆ ಗಂಭೀರವಾಗಿದ್ದರಿಂದ, ಸ್ಥಳೀಯರು ಮಹಿಳೆಯನ್ನು ಬಣಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಆಟೋ ಮೇಲೆ ಮರ ಬಿದ್ದು ಚಾಲಕ ಸಾವು
ಬಿರುಗಾಳಿ ಮಳೆಯ ತೀವ್ರತೆಗೆ ಎಸ್ಟೇಟ್‌ನ ಹಲವು ಭಾಗಗಳಲ್ಲಿ ಹಾನಿಯಾಗಿದ್ದು, ಮರಗಳು ಹಾಗೂ ತಾಳೆಗಳು ನೆಲಕ್ಕುರುಳಿವೆ. ಸ್ಥಳೀಯ ಕಾರ್ಮಿಕರು ಆತಂಕ ವ್ಯಕ್ತಪಡಿಸಿದರು, ಈ ಘಟನೆ ಕುರಿತು ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.