ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ಧಾರವಾಡದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಪದವಿ ಮಹಾವಿದ್ಯಾಲಯದ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕಾಲೇಜಿನ ಪ್ರಾಚಾರ್ಯ ಡಾ. ಐ.ಎಂ.ಮುಲ್ಲಾ ಹೇಳಿದರು.
ಜಿಮಖಾನ ಚಟವಟಿಕೆಗಳ ಅಧ್ಯಕ್ಷ ಡಾ. ಎಸ್.ಎಸ್.ಅದೋನಿ ಮಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ. ಕೇವಲ ಅಂಕಗಳಿಂದ ಮಾತ್ರವಲ್ಲದೇ, ಕ್ರೀಡೆಗಳಿಂದಲೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎನ್ನುತ್ತಾ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಸಾಧಕರ ಉದಾಹರಣೆ ನೀಡಿದರು.
ಇದನ್ನು ಓದಿದ್ದೀರಾ? ಧಾರವಾಡ | ಕವಿಸಂ ಚುನಾವಣೆ; ಗೆಲುವು ಸಾಧಿಸಿದ ಬೆಲ್ಲದ ಬಣ; ಅಧ್ಯಕ್ಷರಾಗಿ ಬೆಲ್ಲದ ಮರು ಆಯ್ಕೆ
ಈ ವೇಳೆ ವಿವಿಧ ವಿಭಾಗಗಳ ತಂಡಗಳಿಗೆ ಜರ್ಸಿ ವಿತರಿಸಿದರು. ಐಕ್ಯುಎಸಿ ಸಂಯೋಜಕ ಡಾ.ಎನ್.ಬಿ.ನಾಲತವಾಡ, ಡಾ.ಆಸ್ಮಾ ಬಳ್ಳಾರಿ, ಡಾ.ನಾಗರಾಜ ಗದಗನವರ, ಡಾ ಸೈಯದ ತಾಜುನ್ನಿಸಾ, ದೈಹಿಕ ನಿರ್ದೇಶಕ ಇಸ್ಮಾಯಿಲ್ ಕೋಟೆಕಲ್, ಡಾ. ಗೌರಿ, ವಿಶಾಲ್ ಪೋಳ, ಡಾ.ಎಸ್.ವಿ.ಜಾಧವ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಇದ್ದರು.