ಶಿವಮೊಗ್ಗದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳು ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಮುದಾಯಗಳ ವಸತಿ ಸದೃಢತೆಗಾಗಿ ಸ್ಥಾಪಿಸಿರುವ ಅಹಿಂದ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಕಚೇರಿಗೆ ಮೇ 26 ರಂದು ಸೋಮವಾರ “ರಾಷ್ಟ್ರೀಯ ಅಹಿಂದ ಸಂಘಟನೆಯ” ರಾಜ್ಯದ್ಯಕ್ಷರಾದ ಮುತ್ತಣ್ಣ ಎಸ್ ಶಿವಳ್ಳಿ ರವರು ಭೇಟಿ ನೀಡಿ ಶುಭ ಹಾರೈಸಿದರು.
ಅಹಿಂದ ಸಮುದಾಯಕ್ಕಾಗಿ ವಸತಿಯ ಅಭಿವೃದ್ಧಿಗಾಗಿಯೇ ಸ್ಥಾಪಿತವಾಗಿರುವ ಅಹಿಂದ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಶಿವಮೊಗ್ಗದಲ್ಲಿ ಆರಂಭಿಸಿದ್ದು ಸ್ವಾಗತಾರ್ಹವಾಗಿದೆ ಎಂದರು.
ಈ ಸೊಸೈಟಿಯು ರಾಜ್ಯದಲ್ಲಿ ಮೊಟ್ಟಮೊದಲನೆ ಸೊಸೈಟಿ ಯಾಗಿದ್ದು, ಸೊಸೈಟಿಯ ಬೈಲವನ್ನು ಅನುಸರಿಸಿ ಈ ರೀತಿಯ ಮಾದರಿಯಲ್ಲಿ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅಹಿಂದ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಗಳನ್ನು ಹಂತ ಹಂತವಾಗಿ ಪ್ರಾರಂಭಿಸಲು ಕಾರ್ಯದಯೋಜನೆಯನ್ನು ರೂಪಿಸಲಾಗುತ್ತದೆ ಎಂದು ಮುತ್ತಣ್ಣ ಎಸ್ ಶಿವಳ್ಳಿರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬುದ್ಧ ಬಸವ ಅಂಬೇಡ್ಕರ್ ಅವರಗಳ ವಿಚಾರಧಾರೆಗಳು ಮುಂದಿಟ್ಟುಕೊಂಡು, ಅಹಿಂದ ಸಂಘಟನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕಟ್ಟಲಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಘಟನೆಯು ರಾಜ್ಯದಂತ ಒಂದು ಶಕ್ತಿಯಾಗಿ ಅಹಿಂದ ಸಮುದಾಯದ ಸಾಮಾಜಿಕ ನ್ಯಾಯದ ಧ್ವನಿಯಾಗಿ ರಾಜ್ಯಾದ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ರಾಷ್ಟ್ರೀಯ ಅಹಿಂದ ಸಂಘಟನೆಯನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಆಲೋಚಿಸಲಾಗಿದೆ ಎಂದು ಮುತ್ತಣ್ಣ ಎಸ್ ಶಿವಳ್ಳಿ ಹೇಳಿದರು.
ಅಹಿಂದ ಹೌಸಿಂಗ್ ಕೋ-ಆಪರೇಟಿವ್ಸೊಸೈಟಿ ಅಧ್ಯಕ್ಷರು ಮತ್ತು ಶಿವಮೊಗ್ಗ ಜಿಲ್ಲಾಮಟ್ಟದ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷರು ಸಿ.ಎಸ್.ಚಂದ್ರಭೂಪಾಲರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಅಹಿಂದ ಸಂಘಟನೆಯಮುಖಂಡರು ಡಾ.ಸಂಗಪ್ಪ ಹಡಪದರಶ್ರೀ ಲಕ್ಷ್ಮಣ ಧಾರವಾಡ , ತನ್ವೀರ್ರವರು ಆಗಮಿಸಿದ್ದರು.
ಅಹಿಂದ ಹೌಸಿಂಗ್ ಕೋ-ಆಪರೇಟಿವ್ಸೊಸೈಟಿಯ ನಿರ್ದೇಶಕರು ಎಸ್.ಎನ್ ಮೂರ್ತಿ,ಎಸ್.ಬಿ.ಅಶೋಕ್ ಕುಮಾರ್ಡಾ. ಡಿ. ಜೆ. ತಾನಾಜಿ , ಎಂ.ಮಂಜಪ್ಪ ,ಎಂ.ಪಿ.ದಿವಾಕರ ಶ್ರೀ ಮತಿ ನಾಜೀಮ ,ಶ್ರೀ ಮತಿ ವಿಜಯಲಕ್ಷ್ಮೀ ಹಾಜರಿದ್ದರು.
ರಾಷ್ಟ್ರೀಯ ಅಹಿಂದ ಸಂಘಟನೆಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರು ಮುಕುಬುಲ್ ಅಹ್ಮದ್,ಪ್ರಮುಖರಾದ ಮಹಮ್ಮದ್ ಆಲಿ ,ದಾದಾ ಕಲಂದರ್ , ಗೌಸ್ ಪೀರ್ , ಶ್ರೀಮತಿ ಪುಷ್ಪಲತಾರು ಉಪಸ್ಥಿತರಿದ್ದರು.