ಜನಿವಾರ ವಿವಾದ ವಿದ್ಯಾರ್ಥಿಗೆ 2.06 ಲಕ್ಷ ರ್‍ಯಾಂಕ್: ನೆಟ್ಟಿಗರಿಂದ ಅಪಹಾಸ್ಯ

Date:

Advertisements

ಉನ್ನತ ಕೋರ್ಸ್‌ಗಳ ಪ್ರವೇಶಕ್ಕಾಗಿ ಬರೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ವೇಳೆ ಜನಿವಾರ ಧರಿಸಿ ಹಾಜರಾಗುವ ವಿಚಾರವಾಗಿ ವಿವಾದ ಸೃಷ್ಟಿಸಿದ್ದ ವಿದ್ಯಾರ್ಥಿ ಸುಚಿವ್ರತ ಕುಲಕರ್ಣಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್‌ಗೆ ಕುಲಕರ್ಣಿ ಪಡೆದಿರುವ ರ್‍ಯಾಂಕ್ ಕಾರಣವಾಗಿದೆ.

ಶನಿವಾರ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಬೀದರ್‌ನ ಸುಚಿವ್ರತ ಕುಲಕರ್ಣಿ ಅವರು 2.06 ಲಕ್ಷದ ರ್‍ಯಾಂಕ್ ಪಡೆದಿದ್ದಾರೆ. ಹೀಗಾಗಿ, ಲಕ್ಷಗಳಷ್ಟು ಹಿಂದಿನ ರ್‍ಯಾಂಕ್ ಗಳಿಸುವ ಬಗ್ಗೆ ತಿಳಿದೇ, ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಜನಿವಾರ ವಿವಾದ ಸೃಷ್ಟಿಸಿರಬೇಕೆಂದು ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.

ವಿದ್ಯಾರ್ಥಿ ಸುಚಿವ್ರತ ಕುಲಕರ್ಣಿ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 56% ಅಂಕ ಗಳಿಸಿದ್ದರು. ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳಲ್ಲಿ ಗಳಿಸಿದ್ದ ಅಂಕಗಳು ಮತ್ತು ಸಿಇಟಿಯಲ್ಲಿ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ವಿಷಯಗಳಲ್ಲಿ ಪಡೆದಿರುವ ಅಂಕಗಳನ್ನು ಒಟ್ಟುಗೂಡಿಸಿ ಅವರಿಗೆ 2,00,006ನೇ ರ್‍ಯಾಂಕ್ ನೀಡಲಾಗಿದೆ.

Advertisements

ಬೀದರ್‌ನಲ್ಲಿ ಸಿಇಟಿ ಬರೆಯಲು ಸುಚಿವ್ರತ ಕುಲಕರ್ಣಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾಗ, ಆತನಿಗೆ ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಪರೀಕ್ಷಾ ಸಿಬ್ಬಂದಿ ಸೂಚಿಸಿದ್ದರು. ಆದರೆ, ಜನಿವಾರ ತೆಗೆಯಲು ಕುಲಕರ್ಣಿ ನಿರಾಕರಿಸಿದ್ದರು. ಅದಕ್ಕೂ ಮುನ್ನವೇ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಕುಲಕರ್ಣಿಗೆ ವಿವಾದದಿಂದಾಗಿ ಮತ್ತೊಂದು ವಿಷಯದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.

ಪರೀಕ್ಷಾ ಕೇಂದ್ರದಲ್ಲಾದ ಗೊಂದಲದಿಂದ ಪರೀಕ್ಷೆ ಬರೆಯಲಾಗದ ಕುಲಕರ್ಣಿ ಮತ್ತು ಅವರ ತಾಯಿಯೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಮಾತನಾಡಿದ್ದರು. ಅವರ ಮುಂದೆ ಎರಡು ಆಯ್ಕೆ ಇಟ್ಟಿದ್ದರು. 1) ಪರೀಕ್ಷೆ ಬರೆಯುವುದು. 2) ಸರಾಸರಿ ಅಂಕದ ಆಧಾರದ ಮೇಲೆ ರ್‍ಯಾಂಕ್ ನೀಡುವುದು. ವಿದ್ಯಾರ್ಥಿ ಕುಲಕರ್ಣಿ 2ನೇ ಆಯ್ಕೆಯನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಸಚಿವ ಸುಧಾಕರ್ ಅವರೇ ಮಾಹಿತಿ ನೀಡಿದ್ದರು.

ವಿದ್ಯಾರ್ಥಿಯ ಆಯ್ಕೆಯಂತೆ ಪಿಯುಸಿ ಮತ್ತು ಸಿಇಟಿ ಅಂಕಗಳನ್ನು ಪರಿಗಣಿಸಿ, ಸರಾಸರಿ ಅಂಕದೊಂದಿಗೆ 2,00,006ನೇ ರ್‍ಯಾಂಕ್ ನೀಡಲಾಗಿದೆ.

ಈ ಲೇಖನ ಓದಿದ್ದೀರಾ?: ಹಾರೋಹಳ್ಳಿ | ಬನವಾಸಿಯಲ್ಲಿ ಅಸ್ಪೃಶ್ಯತೆ ಆಚರಣೆ: ರಾಜಿ, ಮಾತುಕತೆ ನೆಪದಲ್ಲಿ ಆರೋಪಿಗಳ ರಕ್ಷಣೆ

ಆತನ ಫಲಿತಾಂಶ ಬಂದ ಬೆನ್ನಲ್ಲೇ, ಆತನನ್ನು ನೆಟ್ಟಿಗರು ಅಪಹಾಸ್ಯ ಮಾಡುತ್ತಿದ್ದಾರೆ. “ಮುಂದಿನ ಸಾರಿ ಎಲ್ಲರೂ ಏನಾದ್ರು ನೆಪ ಇಟ್ಕೊಂಡು ಪರೀಕ್ಷೆಗೆ ಗೈರಾಗೋದು ಒಳ್ಳೇದು. ರ್‍ಯಾಂಕ್ ಬರುತ್ತೇವೆ. ಪುಕ್ಸಟ್ಟೆ ಮೀಸಲಾತಿ ನೋಡಿ ಇದು” ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

“ಕುಣಿಯೋಕೆ ಬರದವರು ನೆಲ ಡೊಂಕು ಎಂದರಂತೆ, ಜನಿವಾರ ಹೆಚ್ಚು ದಿನ ಬಾಳಿಕೆ ಬರೊಲ್ಲ. ಸುಳ್ಳು ಯಾವತ್ತೂ ಸತ್ಯವಾಗಲ್ಲ” ಎಂಬಿತ್ಯಾದಿಯಾಗಿ ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.

ಆದಾಗ್ಯೂ, “ರ್‍ಯಾಂಕ್‌ಗೂ ಜನಿವಾರಕ್ಕೂ ಏನೂ ಸಂಬಂಧ. ಇಂತಹ ವಿಚಾರಗಳನ್ನು ಮುನ್ನೆಲೆ ತಂದು ವಿದ್ಯಾರ್ಥಿಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಬೇಡಿ” ಎಂದು ಕೆಲವರು ಕಿವಿ ಮಾತು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

10 COMMENTS

  1. Rank ಗೂ ಜನಿವಾರ ಕ್ಕೂ ಏನೂ ಸಂಬಂಧಾನೇ ಇಲ್ಲ
    ಇದು ತುರುಕ ಕಾಂಗಿಯ ಎಡಚರರ ಮಾಧ್ಯಮ
    ಹಾಗಾಗಿ ಬುರ್ಖಾ ಹಿಜಾಬ್ ಹಾಕಿದ್ದ ತುರುಕ ಹುಡುಗಿಯರು ಅದು ಏನು ಕಡದು ಗುಡ್ಡೆ ಹಾಕಿದ್ರು ಅಂತಾ ಸ್ವಲ್ಪ ನ್ಯೂಸ್ ಹೇಳೋಕೆ ಆಗದೇ ಇರೋ ಈ ಮಾಧ್ಯಮ ಹಿಂದುಗಳ ತೇಜೋವಧೆ ಮಾಡಲು ಎಂಥಾ ನೀಚ ಕೆಲಸಕ್ಕೆ ಬೇಕಾದ್ರೂ ಹೇಸೋದಿಲ್ಲ ಅನ್ನೋದಕ್ಕೆ ಈ ಹುಡುಗನ ತೇಜೋವಧೆ ಮಾಡುತ್ತಿದೆ.
    ಥೂ… ನಿಮ್ಮ ಹಂದಿಗಿಂತ ಕಡೆ ಈ ಸೂ ಮಕ್ಕಳು

    • ಹಿಂದೂಗಳೇ ಹಿಂದೂಗಳ ಶತ್ರುಗಳು ಅನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಇಲ್ಲ…..

    • ಹಿಂದುಗಳು ಇದ್ದರೆ ಅವರೆಲ್ಲರಿಗೂ ತಾವು ಜನಿವಾರ ಧರಿಸುವ ಅವಕಾಶ ಎಲ್ಲಿ ನೀಡುವಿರಿ ಸ್ವಾಮಿ. ಜನಿವಾರ ಎಂಬುವುದು ಮೇಲ್ಜಾತಿಯ ಸವರ್ಣೀಯರ ಅಥವ ಬ್ರಾಹ್ಮಣರ ಸಂಕೇತ ಮಾತ್ರವಲ್ಲವೇ

    • ಸರಿಯಾಗಿ ಉಗಿದಿದ್ದೀರಾ!..ಬ್ರದರ್…ಮುಂದೊಂದು ದಿನ ಬೇರೆಯವರು ಮನಗೆ ಹೊಕ್ಕು ಇವರ ಎದುರಿಗೇ ಹೆಂಗಸರ ಅತ್ಯಾಚಾರ ಮಾಡಿದಾಗ ಇವರಿಗೆ ಅರ್ಥವಾಗುತ್ತೆ

  2. ಅವನ ರ್ಯಾಂಕ್ ಗೆ , ಜನಿವಾರಕ್ಕೆ ಜೋಡಿಸಬೇಡಿ,.

    ಜನಿವಾರ ನಂಬಿಕೆ ,/ ಬಟ್ಟೆ ಬೇಡ ಅಂತ ಹೇಳಿದರೆ?

  3. ನಿಮಗೆ ಮಾಡೋಕೆ ಕೆಲಸ ಇಲ್ಲ ಅಂತ ಕಾಣುತ್ತೆ ಆ ಹುಡುಗನ ತೇಜೋವಧೆ ಮಾಡೋದು ಬಿಟ್ಟು ದೈರ್ಯ ಹೇಳಿ ಅದು ಬಿಟ್ಟು ಕೆಲಸಕ್ಕೆ ಬಾರದ ಕಾಮೆಂಟ್ ಮಾಡ್ತಿರಲ್ಲ ನಿಮಗೆ ನಾಚಿಕೆ ಆಗೋದಿಲ್ವ ಜನಿವಾರಕ್ಕೂ ರ್ಯಾಂಕ್ ಗೂ ಏನ್ ಸಂಬಂಧ

  4. ಸತ್ಯ ಗೊತ್ತಿದ್ದೂ, ಕೇವಲ ಅಪಹಾಸ್ಯದ ದೃಷ್ಟಿಯಿಂದಲೇ ಸುಚಿವ್ರತ ಹಿಂದೆ ಬಿದ್ದಿರುವ ಕುರುಡು ಕುನ್ನಿಗಳಿಗೆ ತಿಳಿ ಹೇಳುವ ಕಾರ್ಯ ಮಾಡಬೇಡಿ

  5. ಏನೇ ಆಗಲಿ,ಹುಡುಗ ಧರ್ಮಕ್ಕೆ ಚ್ಯುತಿ ಬರದಂತೆ ನಡೆದಿದ್ಧಾನೆ. ಮೀಸಲಾತಿ ಇಲ್ಲದ ಹುಡುಗ ಪಾಪ, 35 ಪರ್ ವೆಂಟ್ ಗಿಂತ 56 ಪರ್ ವೆಂಟ್ ವಾಸಿ

  6. We haven’t learnt lessons from the history. Hindus are enemies of Hindus. Instead of geting united and condemning the heinous act we are only targetting the poor student.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X