ಹಾಸನ ಜಿಲ್ಲೆ ಆಲೂರು ತಾಲೂಕಿನ ಕಿರಗಡಲು ಗ್ರಾಮದ ಶಾರದಾ ಕೆ ವೈ ಅವರಿಗೆ ರಾಜ್ಯ ಮಟ್ಟದ ಪಂಜ ಕುಸ್ತಿಯಲ್ಲಿ ಪ್ರಥಮ ಸ್ಥಾನ ಹಾಗೂ ಓವರ್ ಆಲ್ ಚಾಂಪಿಯನ್ ಶಿಪ್ ಕರ್ನಾಟಕ ಕಿತ್ತೂರು ಚೆನ್ನಮ್ಮ ಟೈಟಲ್ ಎಂಬ ಹೆಸರನ್ನು ಪಡೆದಿದ್ದಾರೆ.
ವೃತ್ತಿಯಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 25ರಂದು ಮೈಸೂರಿನ ಟೌನ್ ಹಾಲ್ ನಲ್ಲಿ ನಡೆದ 13ನೇ ರಾಜ್ಯ ಮಟ್ಟದ ಪಂಜ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿ, ಮೊದಲ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಭಾರಿ ಮಳೆ: ವಾಹನ ಸಂಚಾರ ಜಾಗೃತ ಅಗತ್ಯ; ಅಧಿಕಾರಿಗಳು
ಹಾಗೆಯೇ, ಓವರ್ ಆಲ್ ಚಾಂಪಿಯನ್ ಶಿಪ್ ಕರ್ನಾಟಕ ಕಿತ್ತೂರು ಚನ್ನಮ್ಮ ಟೈಟಲ್ ಎಂಬ ಬಿರುದು ಕೂಡ ದೊರಕಿದೆ. ಆಗಸ್ಟ್ ತಿಂಗಳ ಪಂಜಾಬನಲ್ಲಿ ನಡೆಯುವ ರಾಷ್ಟೀಯ ಮಟ್ಟದ ಪಂಜಾಕುಸ್ತಿ ಕ್ರೀಡೆಗೆ ಆಯ್ಕೆಯಾಗಿದ್ದಾರೆ.