ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಹಾಗೂ ಅವರಿಗೆ ಜ್ಯೋತಿ ಸಂಜೀವಿನಿಯಡಿ ನೊಂದಾಯಿಸಿಕೊಳ್ಳಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ನೌಕರರ ಸಂಘದ ವತಿಯಿಂದ ಬಾಗಲಕೋಟೆ, ಇಲಕಲ್, ಜಿಲ್ಲೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ನೇರ ಪಾವತಿಗೆ ಒಳಪಡಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಖಾಯಂ ಮಾಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ವಿಶೇಷ ನೇಮಕಾತಿಯಡಿಯಲ್ಲಿ ಖಾಯಂಗೊಂಡ ನೌಕರರಿಗೆ ಎಸ್ಎಫ್‌ಸಿ ವೇತನ ಅನುದಾನದಿಂದ ವೇತನ ನೀಡಬೇಕು. ಕೆಜಿಐಡಿ ಸೇರಿ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಡ ಹಾಕಲಾಗಿದೆ.

ಇಲಕಲ್‌ನ ಹಲವಾರು ಸಾಮಾಜಿಕ ಕಾರ್ಯಕರ್ತರು, ಜನಾಬ್ ಲಾಲಸಾಬ ಬಂಡಾರಿ, ಶಾಮಿದ್, ರೇಶ್ಮ, ಮುಜಮ್ಮಿಲ ಹಕ್ಕಿ ಮತ್ತು ಇತರರು ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿ ನೌಕರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ | ಬಾಕಿ ಕಬ್ಬು ಬಿಲ್ ಪಾವತಿ ವಿಳಂಬ; ಕಾರ್ಖಾನೆ ಮಾಲಿಕರ ಮನೆಗೆ ಮುತ್ತಿಗೆ ಎಚ್ಚರಿಕೆ
ಮುಷ್ಕರ ಮುಂದುವರಿದರೆ ಮುಂದಿನ ದಿನಗಳಲ್ಲಿ ನಗರಕ್ಕೆ ನೀರಿನ ಪೂರೈಕೆ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನೌಕರರ ಸಂಘದ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಸರ್ಕಾರ ಗಮನಹರಿಸಿ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಮುಷ್ಕರದಲ್ಲಿ ಬಸವರಾಜ್ ಕಿರ್ಗಿ, ಬಡೆಸಾಬ, ಕಳಕಪ್ಪಾ, ರಾಜೂ, ಲುಕೇಶ್ ಸೇರಿದಂತೆ ಹಕವು ನೌಕರರು ಪಾಲ್ಗೊಂಡಿದ್ದರು.