ವಿವಾಹೇತರ ಸಂಬಂಧಕ್ಕಾಗಿ ಹತ್ತು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕರಗುಂದ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತ ವ್ಯಕ್ತಿ ಸುದರ್ಶನ್(35), ಕಳೆದ ಶುಕ್ರವಾರ ಅನುಮಾನಾಸ್ಪದವಾಗಿ ಕರಗುಂದ ಬಸ್ ನಿಲ್ದಾಣದಲ್ಲಿ ಸಾವನ್ನಪ್ಪಿದ್ದರು. ಈ ಕುರಿತು ಮೃತನ ಹೆಂಡತಿ ಕಮಲ ತಾನೇ ಹೋಗಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಳು. ನಂತರ ಪೊಲೀಸರಿಗೆ ಮೃತನ ಹೆಂಡತಿಯ ಮೇಲೆ ಅನುಮಾನ ಬಂದು ತನಿಖೆ ನಡೆಸಿದ ಬಳಿಕ, ಮದುವೆಯಾಗಿದ್ದರು. ಸಂಸಾರದಲ್ಲಿ ಹೊಂದಾಣಿಕೆ ಬಾರದೇ ಬೇರೊಬ್ಬ ಗಂಡಸಿನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಅವನ ಜೊತೆ ಹೋಗಲು ತನ್ನ ಗಂಡನನ್ನು ಕೊಲ್ಲಲು ಸಂಚು ನಡೆಸಿರುವುದು ತಿಳಿದುಬಂದಿದೆ. ಸುಮಾರು ವರ್ಷಗಳಿಂದ ಪರಿಚಯವಿದ್ದ ಸ್ನೇಹಿತ ಶಿವರಾಜ್ ಸೇರಿದಂತೆ ನಾಲ್ವರು ಸೇರಿ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರಸಿ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ದಾಳಿ: ಬೈಕ್ ಸವಾರ ಗಂಭೀರ
ಈ ಪ್ರಕರಣದಲ್ಲಿ ಶಿವರಾಜ್ ಎಸ್, ಬಿ ಆರ್ ಹರೀಶ, ಬಿ ಎಸ್ ಚನ್ನಕೇಶವ ಹಾಗೂ ಮೃತನ ಹೆಂಡತಿ ಕಮಲ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತು ಕಾರ್ಯಾಚಾರಣೆಯಲ್ಲಿ ಎನ್ ಆರ್ ಪುರ ಪೊಲೀಸ್ ಠಾಣೆಯ ಪಿಎಸ್ಐ ಬಿ.ಎಸ್ ನಿರಂಜನ್ ಗೌಡ, ಜ್ಯೋತಿ ಪಿಎಸ್‌ಐ(ತನಿಖೆ) ಮತ್ತು ಸಿಬ್ಬಂದಿಗಳಾದ ನಾಗರಾಜ್, ಬಿನು ಪಿ ಎ ಅಮಿತ್ ಚೌಗುಲೆ, ಸೋಮೇಶ ಕೆ, ಮಧು ಎಸ್ ಜಿ, ಈಶ್ವರಪ್ಪ ಸೇರಿದಂತೆ ಇತರರು ಇದ್ದರು.