ದಲಿತರ ವಿರುದ್ಧ ಹಿಂಸಾತ್ಮಕ ಆಚರಣೆ ಒಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋಣಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ದಲಿತರಿಗೆ ಪ್ರತ್ಯೇಕತೆಯ ಆರೋಪ ಕೇಳಿ ಬಂದಿದ್ದು ವ್ಯವಸ್ಥೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಗ್ರಾಮದ ಪ್ರಮುಖ ಹೋಟೆಲ್ ಒಂದರಲ್ಲಿ ದಲಿತರಿಗೆ ಪ್ರತ್ಯೇಕ ಪೇಪರ್ ಹಾಗೂ ನೀರು ಕುಡಿಯಲು ಗ್ಲಾಸ್ ಬಳಕೆ ಮಾಡುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಗ್ರಾಮದಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದ ದಲಿತ ಯುವಕನಿಗೆ ಹೋಟೆಲ್ ಕಾರ್ಮಿಕ ಇದು ನಮ್ಮೂರಿನ ಪದ್ಧತಿ, ಇಲ್ಲಿ ದಲಿತರಿಗೆ ಪೇಪರ್‌ನಲ್ಲಿ ಹಾಗೂ ಮೇಲ್ವರ್ಗದವರಿಗೆ ಪ್ಲೇಟ್‌ನಲ್ಲಿ ತಿಂಡಿ ಕೊಡಲಾಗುತ್ತದೆ ಎಂದು ಹೇಳಿದ್ದಾನೆ.
ಹಾಗೆ ಗ್ರಾಮದ ದೇವಸ್ಥಾನದಲ್ಲಿ ದಲಿತರಿಗೆ ಒಳ ಪ್ರವೇಶ ನಿಷೇಧಿಸಲಾಗಿದೆ. ಕ್ಷೌರಿಕರು ಸಹ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ದಲಿತ ವಿರೋಧಿ ನೀತಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ