ಏಕಾಏಕಿ ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಯುವಕನೊಬ್ಬ ಏಕಾಂಗಿಯಾಗಿ ಸೆರೆ ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಘಟನೆ ನಡೆದಿದೆ. ಗ್ರಾಮದ ವೇಣುಗೋಪಾಲ್ ಚಿರತೆಯನ್ನು ಸೆರೆ ಹಿಡಿದ ಸಾಹಸಿ ಯುವಕ ಎಂದು ತಿಳಿದುಬಂದಿದೆ.
ತೋಟದ ಬಳಿ ತೆರಳುತ್ತಿದ್ದ ವೇಣುಗೋಪಾಲ್ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದೆ. ಯುವಕ ಭಯಭೀತನಾಗದೆ, ಚಿರತೆಯನ್ನು ಸೆರೆ ಹಿಡಿದು, ಹನಿ ನೀರಾವರಿಗೆ ಅಳವಡಿಸಲಾಗಿದ್ದ ಪೈಪುಗಳನ್ನು ಬಳಸಿ, ಚಿರತೆಯ ಕಾಲುಗಳನ್ನು ಕಟ್ಟಿಹಾಕಿದ್ದಾನೆ.
ಬಳಿಕ, ತನ್ನ ಬೈಕ್‌ನಲ್ಲಿಯೇ ಕೊಂಡೊಯ್ದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಿದ್ದಾನೆ.