ಸೋಮವಾರ ರಾತ್ರಿ ನೇಪಾಳದಿಂದ ಸುಮಾರು 15ರಿಂದ 20 ಡ್ರೋನ್‌ಗಳು ಭಾರತೀಯ ವಾಯುಪ್ರದೇಶಕ್ಕೆ ಪ್ರವೇಶಿಸಿದ್ದು ಕಂಡುಬಂದಿದೆ. ಈ ಬೆನ್ನಲ್ಲೇ ಮಂಗಳವಾರ ಭಾರತ-ನೇಪಾಳ ಗಡಿ ಜಿಲ್ಲೆಗಳಲ್ಲಿ ಬಿಹಾರ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಮಧುಬನಿ ಜಿಲ್ಲೆಯ ಕಮಲಾ ಗಡಿ ಹೊರಠಾಣೆ(ಬಿಒಪಿ) ಅಡಿಯಲ್ಲಿ ಡ್ರೋನ್‌ಗಳು ಸುಮಾರು 40 ನಿಮಿಷಗಳ ಕಾಲ ಹಾರಾಡಿ ಬಳಿಕ ನೇಪಾಳಕ್ಕೆ ಹಿಂತಿರುಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಸಶಸ್ತ್ರ ಸೀಮಾ ಬಲ್(ಎಸ್‌ಎಸ್‌ಬಿ) ಉಪ ಕಮಾಂಡೆಂಟ್ ವಿವೇಕ್ ಓಜಾ, “ಸೋಮವಾರ ಸಂಜೆ 7.30ರ ಸುಮಾರಿಗೆ ಕಮಲಾ ಗಡಿ ಪೊಲೀಸ್ ಹೊರಠಾಣೆ ಅಡಿಯಲ್ಲಿ ಬರುವ ಪ್ರದೇಶಗಳಲ್ಲಿ 15–20 ಡ್ರೋನ್‌ನಂತಹ ಉಪಕರಣಗಳು ಹಾರಾಡುತ್ತಿರುವುದು ಕಂಡುಬಂದಿದೆ. ಆ ಉಪಕರಣಗಳು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿ ಉತ್ತರ ನೇಪಾಳದ ಕಡೆಗೆ ಮರಳಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅದಾನಿ ವ್ಯಾಪಾರೋದ್ಯಮ ಸಾಮ್ರಾಜ್ಯ ವಿಸ್ತರಣೆಗೆ ಮೋದಿ ಸಕ್ರಿಯ ಸಹಕಾರ; ಇಲ್ಲಿದೆ ಸಂಪೂರ್ಣ ವಿವರ
“ಎಸ್‌ಎಸ್‌ಬಿ ಸಿಬ್ಬಂದಿ ಈ ಡ್ರೋನ್‌ನಂತಹ ಉಪಕರಣ ನೇಪಾಳಕ್ಕೆ ಹಿಂದಿರುಗುತ್ತಿದ್ದಾಗ ಗಮನಿಸಿ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ದರ್ಭಾಂಗಾ ವಾಯುಪಡೆ ಮತ್ತು ದೆಹಲಿ ವಾಯುಪಡೆ ಕೇಂದ್ರಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಇದಾದ ಬಳಿಕ ಅಧಿಕಾರಿಗಳು ಅಂತಾರಾಷ್ಟ್ರೀಯ ಗಡಿಯ ಹೈ ಅಲರ್ಟ್ ಘೋಷಿಸಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಎಸ್‌ಎಸ್‌ಬಿ ಅಧಿಕಾರಿಗಳು ಸಂಪರ್ಕಿಸಿದಾ ನೇಪಾಳದ ಭದ್ರತಾ ಅಧಿಕಾರಿಗಳನ್ನು ಡ್ರೋನ್ ಬಳಕೆಯನ್ನು ನಿರಾಕರಿಸಿದ್ದಾರೆ. ಆದ್ದರಿಂದ ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ. ಗಡಿ ಪ್ರದೇಶದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಡೆಪ್ಯೂಟಿ ಕಮಾಂಡೆಂಟ್ ಓಜಾ ತಿಳಿಸಿದ್ದಾರೆ.
