ಮಧ್ಯಪ್ರದೇಶ | ಆಫ್ರಿಕಾದಿಂದ ಕರೆತಂದಿದ್ದ 8ನೇ ಚೀತಾ ಸಾವು

Date:

Advertisements

ದಕ್ಷಿಣ ಆಪ್ರಿಕಾದಿಂದ ಕರೆ ತಂದಿದ್ದ ಚೀತಾ ’ಸೂರಜ್’ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟಿದೆ.

ಕಳೆದ 5 ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ಕರೆತಂದಿದ್ದ ಚೀತಾಗಳಲ್ಲಿ 8ನೇ ಚೀತಾ ಸಾವಿನ ಪ್ರಕರಣ ಇದಾಗಿದೆ.

ಚೀತಾ ಸೂರಜ್‌ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸೂರಜ್‌ ಸಾವಿನ ನಂತರ ಹತ್ತು ಚೀತಾಗಳನ್ನು ಕುನೋದ ಇತರ ಉದ್ಯಾನಗಳಿಗೆ ಬಿಡಲಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೆ ತೇಜಸ್‌ ಎನ್ನುವ ಚೀತಾ ಗಾಯಗೊಂಡು ಮೃತಪಟ್ಟಿತ್ತು.

Advertisements

ಆಫ್ರಿಕಾದಿಂದ ಕರೆತಂದ ಚೀತಾಗಳಲ್ಲಿ ಮೊದಲ ಹೆಣ್ಣು ಚೀತಾ ಸಶಾ ಮೂತ್ರಪಿಂಡ ಕಾಯಿಲೆಯಿಂದ ಮಾರ್ಚ್‌ 27ರಂದು ಮೃತಪಟ್ಟಿತ್ತು. ಏಪ್ರಿಲ್‌ನಲ್ಲಿ ಉದಯ್‌ ಹೃದಯ ಸಂಬಂಧಿ ಸಮಸ್ಯೆಗಳಿಂದ ಮೃತಪಟ್ಟಿತ್ತು. ಮೇ ತಿಂಗಳಲ್ಲಿ ದೀಕ್ಷಾ ಎರಡು ಪುರುಷ ಚೀತಾಗಳಂದಿಗೆ ನಡೆದ ಕಾಳಗದಲ್ಲಿ ಸಾವಿಗೀಡಾಗಿತ್ತು.

ಮಾರ್ಚ್‌ನಲ್ಲಿ, ಸಿಯಾಯಾ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದಾಗ್ಯೂ, ಒಂದೆರಡು ತಿಂಗಳ ನಂತರ ಮೇ ತಿಂಗಳಲ್ಲಿ ಸಿಯಾಯಾದ ಎರಡು ಮರಿ ಸಾವನ್ನಪ್ಪಿವೆ. ಮತ್ತೆ ಕೆಲವು ದಿನಗಳ ನಂತರ ಉಳಿದ ಎರಡು ಮರಿಗಳು ಮೃತಪಟ್ಟವು. ಪ್ರಾಥಮಿಕ ವರದಿಗಳ ಪ್ರಕಾರ ನಿಶ್ಯಕ್ತಿಯ ಕಾರಣದಿಂದ ಅಸುನೀಗಿದ್ದವು ಎಂದು ತಿಳಿದುಬಂದಿತ್ತು.

ಈ ಸುದ್ದಿ ಓದಿದ್ದೀರಾ? ಭಾರತದ ಐತಿಹಾಸಿಕ ‘ಚಂದ್ರಯಾನ 3’ ಯಶಸ್ವಿ ಉಡಾವಣೆ; 20 ವರ್ಷದ ಹಿಂದೆ ಆರಂಭವಾದ ಯೋಜನೆ ಸಾಗಿದ್ದು ಹೇಗೆ?

ಚೀತಾಗಳು ನೈಸರ್ಗಿಕ ಕಾರಣಗಳು, ದೌರ್ಬಲ್ಯ ಹಾಗೂ ಬಲಶಾಲಿ ಪ್ರಾಣಿಗಳ ಕಾಳಗದಿಂದ ಮೃತಪಡುವ ಸಾಧ್ಯತೆ ಹೆಚ್ಚು ಎಂದು ಪ್ರಾಣಿ ತಜ್ಞರು ಅಭಿಪ್ರಾಯ ಪಡುತ್ತಾರೆ.

ಕಳೆದ ವರ್ಷ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ ಕರೆತಂದ ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಲಾಯಿತು. ಈ ವರ್ಷದ ಫೆಬ್ರವರಿಯಲ್ಲಿ, ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ತರಲಾಗಿತ್ತು. ಅವುಗಳಲ್ಲಿ ಆರು ಕಾಡಿನಲ್ಲಿವೆ ಮತ್ತು ಉಳಿದವು ಕುನೋದಲ್ಲಿನ ವಿವಿಧ ಉದ್ಯಾನಗಳಲ್ಲಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X