ನವ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ, ಭದ್ರ ಬುನಾದಿ ಹಾಕಿದ ಮಹಾನ್ ಚೇತನ, ಶಿಕ್ಷಣ ವ್ಯವಸ್ಥೆಗೆ ಬಲ ಕೊಟ್ಟ ನೇತಾರ ಮಾಜಿ ಪ್ರಧಾನಿ ಪಂಡಿತ್ ಜವಾಹರ್ಲಾಲ್ ನೆಹರು ಎಂದು ವಿಜಯಪುರ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಹೇಳಿದರು.
ನಗರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನೆಹರು ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಾವಿರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮುನ್ನುಡಿ ಬರೆದು, ಸಾಕ್ಷರತೆಯಲ್ಲಿ ಮೈಲಿಗಲ್ಲು ನಿರ್ಮಾಣ ಮಾಡಿದ ಧೀಮಂತ ನಾಯಕ, ಭಾರತದಾದ್ಯಂತ ಹಲವಾರು ಆಸ್ಪತ್ರೆಗಳನ್ನು ಕಟ್ಟಲು ಆಜ್ಞೆ ಮಾಡಿದ ವೈದ್ಯಲೋಕದ ರಾಯಭಾರಿ, ನದಿ, ಸೇತುವೆಗಳನ್ನು ಕಟ್ಟಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ನೀರಾವರಿಯ ತಜ್ಞ, ವಿಜ್ಞಾನಿಗಳ ಸಾಧನೆಯನ್ನು ಮನಗಂಡು ಇಸ್ರೋ ಬಾಹ್ಯಾಕಾಶ ಸಂಸ್ಥೆಯನ್ನು ಸ್ಥಾಪಿಸಲು ಇಚ್ಛಾಶಕ್ತಿ ತೋರಿದ ವಿಜ್ಞಾನಿಗಳ ಅಚ್ಚು ಮೆಚ್ಚಿನ ನಾಯಕ ಸರ್ವಜನಾಂಗದ ಶಾಂತಿಯ ತೋಟದ ಪರಿಪಾಲಕ, ಸಾವಿರಾರು ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲು ಶಂಕು ಸ್ಥಾಪನೆ ಮಾಡಿದ ಪ್ರಜಾಸೇವಕ ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ಜಗತ್ಪ್ರಸಿದ್ಧರಾದವರು” ಎಂದು ನೆಹರು ಅವರ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕೆಪಿಸಿಸಿ ಉಪಾಧ್ಯಕ್ಷ ಕೆ ಎಫ್ ಅಂಕಲಗಿ, ಡಿ ಎಲ್ ಚವ್ಹಾಣ, ಗಂಗಾಧರ ಸಂಬಣ್ಣಿ, ಪ್ರಧಾನ ಕಾರ್ಯದರ್ಶಿ ಎಂ ಎಂ ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ದೇಸು ಚವ್ಹಾಣ, ಬ್ಲಾಕ್ ಅಧ್ಯಕ್ಷ ಜಮೀರ್ ಅಹಮದ್ ಬಕ್ಷಿ, ಆರತಿ ಶಾಹಪೂರ, ವಿಜಯಪುರ ಜಿಲ್ಲಾ ಕಾಂಗ್ರೆಸ್ ಮಾಜಿ ಸೈನಿಕರ ವಿಭಾಗದ ಅಧ್ಯಕ್ಷ ವಿದ್ಯಾಧರ ಪಾಟೀಲ, ಅಶ್ಪಾಕ ಮನಗೂಳಿ, ಮಹ್ಮದ ಮುಲ್ಲಾ, ಸಂತೋಷ ಬಾಲಗಾವಿ, ತಾಜುದ್ದೀನ ಖಲೀಫಾ, ಎಂ. ಬಿ. ನಾಯಕ್, ಸರಫರಾಜ ಮಿರ್ಜಿ, ಶಬೀಹಾ ಮಂಟೂರ, ಮಹಿಬೂಬ ಕರ್ಜಗಿ, ದಿಲಿಪ ಪ್ರಭಾಕರ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.