ರೈತರು ತಾವು ಬೆಳೆದ ನಿಂಬೆ ಬೆಳೆಗೆ ಮೌಲ್ಯವರ್ಧನ ಮಾಡಿ ನಿಂಬೆ ಉಪ್ಪಿನಕಾಯಿ, ನಿಂಬೆ ಜ್ಯೂಸ್, ನಿಂಬೆ ಪೌಡರ್, ಲೇಮನ್ ಟೀ ಪೌಡರ್ ಮಾಡಿ ಅಧಿಕ ಲಾಭ ಪಡೆಯಬಹುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ತೋಟಗಾರಿಗೆ ಇಲಾಖೆ ಮತ್ತು ರಾಜ್ಯ ನಿಂಬೆ ಅಭಿವೃದ್ದಿಯಿಂದ ನಿರ್ಮಿಸಿದ ಲೆಮನ್ ಟಿ ಪಾಯಿಂಟ್ ಉದ್ಘಾಟಿಸಿ ಹೇಳಿದರು.
ಅತಿ ಹೆಚ್ಚು ನಿಂಬೆ ಬೆಳೆ ಬೆಳೆಯುವ ಇಂಡಿ ಪಟ್ಟಣದಲ್ಲಿ ರಾಜ್ಯ ಮಟ್ಟದ ನಿಂಬೆ ಅಭಿವೃದ್ದಿ ಮಂಡಳಿ ಕಚೇರಿ ಆರಂಭಿಸಲಾಗಿದ್ದು, ಈ ಭಾಗದ ನಿಂಬೆಗೆ ರಾಜ್ಯ ಮಟ್ಟದ ಸ್ಥಾನಮಾನ ದೊರೆಯುವಂತೆ ಮಾಡಲಾಗಿದೆ. ನಿಂಬೆ ಆನ್‌ಲೈನ್ ಖರೀದಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ನಿಂಬೆ ಅಭಿವೃದ್ದಿ ಮಂಡಳಿ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಪಾಟೀಲ್ ಮಾತನಾಡಿ, ಸದ್ಯ ಇಂಡಿಯಲ್ಲಿ ಲೇಮನ್ ಟೀ ಪಾಯಿಂಟ್ ವೈ ಮಾಡಿದ್ದು ಬರುವ ದಿನಗಳಲ್ಲಿ ಬೆಂಗಳೂರಿನ ಯಶವಂತಪೂರ ಮತ್ತು ಪ್ರತಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ನಿಂಬೆ ಅಭಿವೃದ್ದಿ ಮಂಡಳಿಯಿಂದ ಮಳಿಗೆಗಳನ್ನು ಪ್ರಾರಂಭಿಸಲಾಗುವದು. ರೈತರ ಸಂಘಗಳನ್ನು ಮಾಡಿ ಆ ಸಂಘದಿಂದ ನಿಂಬೆ ಉಪ್ಪಿನಕಾಯಿ, ನಿಂಬೆ ಜ್ಯೂಸ ಪೌಡರ, ಲೇಮನ ಟೀ ಪೌಡರ್ ಸೇರಿದಂತೆ ಇನ್ನಿತರ ಉತ್ಪಾದಕ ಘಟಕಗಳನ್ನು ಪ್ರಾರಂಭಿಸಲಾಗುವದು. ಇದರಿಂದ ರೈತರಿಗೆ ಹೆಚ್ಚು ಆದಾಯ ಬರಲು ಅನುಕೂಲವಾಗುತ್ತದೆ. ಸದ್ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಉತ್ಪಾದನೆ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ರೈತ ಸಂಘಗಳಿಗೆ ನೀಡಲಾಗುವದು ಎಂದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಗಾಂಜಾ ಮಾರಾಟ; ಮೂವರ ಬಂಧನ
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಅರಣ್ಯ ಅಧಿಕಾರಿ ಎಸ್.ಜಿ.ಸಂಗಾಲಕ, ಮಂಜುನಾಥ ಧುಳೆ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಇಲಿಯಾಸ ಬೋರಾಮಣ , ಪ್ರಶಾಂತ ಕಾಳೆ, ಪಶು ಸಂಗೋಪನಾ ಹಿರಿಯ ವೈದ್ಯ ಡಾ. ರಾಜಕುಮಾರ ಅಡಕಿ, ನಿಂಬೆ ಅಭಿವೃದ್ದಿ ಮಂಡಳಿ ಮತ್ತು ತೋಟಗಾರಿಕೆ ಸಿಬ್ಬಂದಿ ಇದ್ದರು.