- ರೌಡಿಶೀಟರ್ ಸುನೀಲ್, ಅರವಿಂದ್, ನಂದಿನಿ, ಮೇರಿ ಬಂಧಿತರು
- ಆರೋಪಿಗಳಿಂದ ಅರ್ಧ ಕೆಜಿ ಚಿನ್ನಾಭರಣ, 3ಕೆಜಿ ಬೆಳ್ಳಿ ಸೇರಿ 1.5 ಲಕ್ಷ ಹಣ ಜಪ್ತಿ
ಶೋಕಿ ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹೊಸಕೋಟೆ ಉಪವಿಭಾಗದ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಸುನೀಲ್, ಅರವಿಂದ್, ನಂದಿನಿ, ಮೇರಿ ಬಂಧಿತರು. ಇವರಿಂದ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ, 3 ಕೆಜಿ ಬೆಳ್ಳಿ ಸೇರಿ 1.5 ಲಕ್ಷ ಹಣ ಜಪ್ತಿ ಮಾಡಲಾಗಿದೆ.
ಬಂಧಿತರು ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿ, ಮಧ್ಯರಾತ್ರಿ ಮನೆಯಲ್ಲಿ ಲೈಟ್ ಹಾಕದೆ ಮನೆಯಲ್ಲಿರುವ ಚಿನ್ನಾಭರಣ ಮತ್ತು ಹಣವನ್ನು ದೋಚಿ ಪರಾರಿಯಾಗುತ್ತಿದ್ದರು.
ಬಂಧಿತರು ಆವಲಹಳ್ಳಿ ಸೇರಿದಂತೆ ಬೆಂಗಳೂರಿನ ಹಲವೆಡೆ ಕಳ್ಳತನ ಮಾಡುತ್ತಿದ್ದರು. ಆರೋಪಿಗಳಾದ ಸುನೀಲ್ ಮತ್ತು ಅರವಿಂದ್ ಇಬ್ಬರು ಸೇರಿ ಮನೆ ಕಳ್ಳತನ ಮಾಡಿದರೆ, ಇನ್ನುಳಿದ ಇಬ್ಬರು ಆರೋಪಿಗಳಾದ ನಂದಿನಿ ಮತ್ತು ಮೇರಿ ಎಂಬುವವರು ಚಿನ್ನಾಭರಣವನ್ನು ಅಂಗಡಿಯಲ್ಲಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಈ ನಾಲ್ವರು ಆರೋಪಿಗಳು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವರು. ಚಿನ್ನವನ್ನು ಕದ್ದು ಬಂದ ಹಣದಲ್ಲಿ ಶೋಕಿ ಜೀವನ ನಡೆಸುತ್ತಿದ್ದರು. ಆವಲಹಳ್ಳಿ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.