ಬಸ್ ಚಲಿಸುವಾಗ ಕೆಸರು ಸಿಡಿದಿದ್ದಕ್ಕೆ ಯುವಕನು ಬಸ್ ಚಾಲಕ ಹಾಗೂ ನಿರ್ವಾಹಕನ ಜೊತೆ ವಾಗ್ವಾದ ನಡೆಯಿತು. ತನ್ನ ಮೇಲೆ ಕೇಸ್ ದಾಖಲಿಸುತ್ತಾರೆಂದು ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲಿಂಗಸೂಗೂರು ತಾಲ್ಲೂಕು ಹುನುಕುಂಟಿ ಗ್ರಾಮದಲ್ಲಿ ನಡೆದಿದೆ
ಮುತ್ತಣ್ಣ ದೇವಪ್ಪ ಕುರಿ (18) ನೇಣಿಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ.ಬೆಂಗಳೂರು- ಸಜ್ಜಲಗುಡ್ಡಕ್ಕೆ ಬಸ್ ತೆರಳುವಾಗ ಮಧ್ಯೆ ಹುನುಕುಂಟಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ನಿಂತಾಗ ಮುತ್ತಣ್ಣ ಯುವಕನಿಗೆ ಕೆಸರು ಸಿಡಿದಿದೆ.ನಂತರ ಯುವಕನು ಆಕ್ರೋಶಗೊಂಡು ಬಸ್ ಚಾಲಕ ,ನಿರ್ವಾಹಕನಿಗೆ ಮಾತಿಗೆ ಮಾತು ಬೆಳೆದು ಯುವಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಬಸ್ ಚಾಲಕ ಹಾಗೂ ನಿರ್ವಾಹಕ ತಮ್ಮ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿದ್ದರು.ಬಸ್ ಚಾಲಕ ದೂರಿನ ಅನ್ವಯ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಈ ವಿಷಯ ತಿಳಿಯುತ್ತದಂತೆ ಮುತ್ತಣ್ಣ ನನ್ನ ಮೇಲೆ ಕೇಸ್ ಆಗಿದೆ ಎಂದು ಹೆದರಿ ಗ್ರಾಮದ ಹೊರವಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ನಿವಾಸಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿ ಸಾವು; ಆಸ್ಪತ್ರೆಗೆ ಕಲ್ಲು ತೂರಾಟ
ಯುವಕನ ಸಾವಿಗೆ ಬಸ್ ಚಾಲಕ,ನಿರ್ವಾಹಕ ಕಾರಣವೆಂದು ಆಗ್ರಹಿಸಿ ಬಸ್ ಡಿಪೋ ಮುಂದೆ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.
