ಐಪಿಎಲ್ 18ನೇ ಆವೃತ್ತಿಯ ಕ್ವಾಲಿಫೈಯರ್ ಪಂದ್ಯದಲ್ಲಿ ಯುವ ಸ್ಪಿನ್ನರ್ ಸುಯಾಶ್ ಶರ್ಮಾ ಸೇರಿ ಆರ್‌ಸಿಬಿ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಯಿಂದ ಪಂಜಾಬ್ ಕಿಂಗ್ಸ್ ತಂಡವನ್ನು 101 ರನ್‌ಗಳಿಗೆ ಆಲೌಟ್ ಮಾಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 14.1 ಓವರ್‌ಗಳಲ್ಲಿ ಸ್ಪಿನ್ನರ್ ಸುಯಾಶ್ ಶರ್ಮಾ17/3, ಭುವನೇಶ್ವರ್ ಕುಮಾರ್17/1, ಯಶ್ ದಯಾಳ್ 26/2,ಜೋಶ್ ಹ್ಯಾಜಲ್‌ವುಡ್21/3 ಅವರ ಬೌಲಿಂಗ್ ದಾಳಿಗೆ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು.
ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪಂಜಾಬ್ ಕಿಂಗ್ಸ್ ಬ್ಯಾಟರ್‌ಗಳು ಇಂದು ರನ್ ಗಳಿಸಲು ಪರದಾಡಿದರು. ಮಾರ್ಕಸ್ ಸ್ಟೊಯಿನಿಸ್ (26),ಪ್ರಭಸಿಮ್ರನ್ ಸಿಂಗ್(18) ಹಾಗೂ ಅಜ್ಮತುಲ್ಲಾ ಒಮರ್ಜೈ(18) ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು 10 ರನ್ ಗಡಿ ದಾಟಲಿಲ್ಲ.
ಇದನ್ನು ಓದಿದ್ದೀರಾ? BREAKING NEWS | ಭಾರತ ಟೆಸ್ಟ್ ತಂಡದ ನಾಯಕನಾಗಿ ಶುಭಮನ್ ಗಿಲ್ ಆಯ್ಕೆ
2025ನೇ ಆವೃತ್ತಿಯ ಐಪಿಎಲ್ ಟ್ರೋಫಿಯ ಫೈನಲ್ ತಲುಪಲು ಆರ್‌ಸಿಬಿಗೆ 102 ರನ್ ಗುರಿ ಮಾತ್ರ ಬೇಕಾಗಿದೆ.
