ಶಿವಮೊಗ್ಗ ತಾಲೂಕಿನ 332 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಾಲಾ ಆವರಣ ಮತ್ತು ಶೌಚಾಲಯಗಳ ಸ್ವಚ್ಛತೆಗಾಗಿ ವಿಶೇಷ ಅನುದಾನ ನೀಡಲಾಗಿದೆ. ಈ ಅನುದಾನದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ವಾಟರ್ ಗನ್ ಗಳನ್ನು ಖರೀದಿಸಿದ್ದು, ಈ ವಾಟರ್ ಗನ್ ಗಳ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 332 ಶಾಲೆಯಲ್ಲಿ 328 ಶಾಲೆಯವರು ವಾಟರ್ ಗನ್ ಖರೀದಿಸಿದ್ದು, ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ವಾಟರ್ ಗನ್ ನಲ್ಲಿ ಕ್ಲೀನಿಂಗ್ ಕಾರ್ಯ ನಡೆದಿದೆ.
ಈ ಸ್ವಚ್ಛತಾ ಕಾರ್ಯದಲ್ಲಿ ಶಿವಮೊಗ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ನಾಯ್ಕ್ ಅವರೇ ಸ್ವತಃ ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ಪುರಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ಅವರು ಸಹ ಸ್ವಚ್ಚತೆಯಲ್ಲಿ ಪಾಲ್ಗೊಂಡರು. ಶಾಲಾ ಶೌಚಾಲಯ ಮತ್ತು ಶಾಲಾ ಆವರಣವನ್ನು ಉತ್ತಮವಾಗಿ ಸ್ವಚ್ಛ ಮಾಡಿದರು.
ಇಂದಿನಿಂದ ಶಾಲೆಗಳು ಆರಂಭಗೊಳ್ಳುತಲಿದ್ದು, ಈ ಹಿನ್ನೆಲೆಯಲ್ಲಿ, ಗುರುವಾರದಂದೇ, ಶಾಲೆಗೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಆಗಮಿಸಿ ಶಾಲೆ ಸ್ವಚ್ಛತಾ ಕಾರ್ಯ ಮಾಡಿದ್ದಾರೆ.